Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಶಿವರಾಜ್‌ʻಕುಮಾರ್‌ ಜೊತೆ ಹೇಮಂತ್‌ ರಾವ್‌ ಸಿನಿಮಾ..!

SpeciallU by SpeciallU
February 1, 2024
in Cinema, News
Reading Time: 1 min read
0 0
0
ಶಿವರಾಜ್‌ʻಕುಮಾರ್‌ ಜೊತೆ ಹೇಮಂತ್‌ ರಾವ್‌ ಸಿನಿಮಾ..!

ಹೇಮಂತ್‌ ರಾವ್.‌ ಮೊದಲ ಸಿನಿಮಾ ಗೋದಿ ಬಣ್ಣ ಸಾಧಾರಣ ಮೈಕಟ್ಟು. ಅನಂತನಾಗ್‌ ಅವರು ಎಂತಹ ಆಕ್ಟರ್‌ ಅನ್ನೋದನ್ನ ನೋಡೋಕೆ ಇರೋ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದು. ಅದಾದ ನಂತರ ಕವಲುದಾರಿ. ಪುನೀತ್‌ ರಾಜ್‌ʻಕುಮಾರ್‌ ಅವರ ಬ್ಯಾನರಿನಲ್ಲಿ ಬಂದ ಸಿನಿಮಾ ಅದು. ಕವಲುದಾರಿ ಕಥೆ ಹೇಳುವ ಶೈಲಿಯೇ ವಿಭಿನ್ನ. ಇದರ ನಡುವೆ ಹಿಂದಿಯ ಅಂಧಾದುನ್‌ ಸಿನಿಮಾ ಬರಹಗಾರರೂ ಆದರು. ಅದು ನಾಲ್ಕೈದು ಭಾಷೆಗಳಿಗೆ ರೀಮೇಕ್‌ ಆದ ಸಿನಿಮಾ. ಇತ್ತೀಚೆಗೆ ಸಪ್ತಸಾಗರದಾಚೆ ಎಲ್ಲೋ.. ಭಗ್ನಪ್ರೇಮಿಗಳ ಹೃದಯಕ್ಕೇ ಕೈಹಾಕಿ ಕಲಕಿದ್ದರು ಹೇಮಂತ್‌ ರಾವ್.‌ ಇಷ್ಟೆಲ್ಲ ಮಾಡಿರುವ ಹೇಮಂತ್‌ ಅವರೀಗ ಪ್ರಾಜೆಕ್ಟ್‌ #5ಗೆ ಕೈಹಾಕಿದ್ಧಾರೆ. ಹೀರೋ ಶಿವಣ್ಣ.

ಶಿವಣ್ಣ ಅವರ ಮೊದಲ ಡೈರೆಕ್ಟರ್‌ ಯಾರು ಎಂದರೆ ಅದು ಸಿಂಗೀತಂ ಶ್ರೀನಿವಾಸ್.‌ ದಕ್ಷಿಣ ಭಾರತ ಚಿತ್ರರಂಗದಲ್ಲೇ ಆಗಿನ ಕಾಲಕ್ಕೆ ದೊಡ್ಡ ಹೆಸರು ಅವರದ್ದು. ಹಾಗಂತ ಶಿವಣ್ಣ ಕೇವಲ ಹೆಸರು ಮಾಡದವರ ಜೊತೆ ಮಾತ್ರ ಸಿನಿಮಾ ಮಾಡಲ್ಲ. ಹೊಸಬರೂ ಶಿವಣ್ಣನ ಜೊತೆ ಸಿನಿಮಾ ಮಾಡಿದ್ದಾರೆ. ಗೆದ್ದಿದ್ದಾರೆ. ಗೆಲ್ಲಿಸಿದ್ದಾರೆ. ಈಗ ಹೇಮಂತ್‌ ರಾವ್‌ ಅವರ ಸರದಿ ಬಂದಂತೆ ಕಾಣುತ್ತಿದೆ. ಹಾಗಂತ ಹೇಮಂತ್‌ ರಾವ್‌ ಅವರೇನೂ ಹೊಸಬರಲ್ಲ. ಬೆನ್ನ ಹಿಂದೆ ಸೂಪರ್‌ ಹಿಟ್‌ ಚಿತ್ರಗಳ ದಾಖಲೆ ಇದೆ. ಅವರೀಗ ಶಿವಣ್ಣ ಅವರಿಗೆ ಆಕ್ಷನ್‌ ಕಟ್‌ ಹೇಳ್ತಾರೆ ಅನ್ನೋ ಸುದ್ದಿ ಚಾಲ್ತಿಗೆ ಬಂದಿದೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಕೆಲ ದಿನಗಳ ಹಿಂದಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹೇಮಂತ್ ರಾವ್, ‘ರೊಮ್ಯಾಂಟಿಕ್ ಅಥವಾ ಲವ್ ಸ್ಟೋರಿ ಸಿನಿಮಾಗಳಿಂದ ತುಸು ದೂರ ಹೋಗಲಿದ್ದೇನೆ’ ಎಂಬರ್ಥದ ಮಾತುಗಳನ್ನಾಡಿದ್ದರು. ಅದರ ಬೆನ್ನಲ್ಲೆ ಈಗ ಹೇಮಂತ್ ರಾವ್, ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೇಮಂತ್ ರಾವ್, ಶಿವಣ್ಣನಿಗೆ ಈಗಾಗಲೇ ಕತೆ ಹೇಳಿದ್ದು, ಸಿನಿಮಾ ಮಾಡಲು ಒಪ್ಪಿಗೆ ಸಹ ಸೂಚಿಸಲಾಗಿದೆ. ಆದಷ್ಟು ಶೀಘ್ರವೇ ಹೇಮಂತ್ ರಾವ್ ಹಾಗೂ ಶಿವರಾಜ್ ಕುಮಾರ್ ಸಿನಿಮಾ ಸೆಟ್ಟೇರಲಿದೆ.

ಅಂದಹಾಗೆ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮುಗಿಸಿರುವ ಹೇಮಂತ್‌ ರಾವ್‌, ವಿಭಿನ್ನ ಚಿತ್ರಗಳಿಗೆ ಫೇಮಸ್‌ ಆಗಿರುವ ನಿರ್ದೇಶಕ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಪಾರ್ಟ್‌ 3 & ಬಿ ಮೊದಲಾದ ಚಿತ್ರಗಳ ಮೂಲಕ ಸೆನ್ಸೇಷನ್‌ ಸೃಷ್ಟಿಸಿರುವವರು. ಶಿವಣ್ಣನ ಜೊತೆ ಡಿಫರೆಂಟ್‌ ಸಿನಿಮಾ ಮಾಡೋದು ಪಕ್ಕಾ ಎನ್ನುವುದು ಅಬಿಮಾನಿಗಳ ನಿರೀಕ್ಷೆ.

ಹೇಮಂತ್ ಅವರೊಂದಿಗೆ ಸಿನಿಮಾ ಮಾಡುತ್ತಿರುವ ಬಗ್ಗೆ ನಟ ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದು, ಹೇಮಂತ್ ಎಂ ರಾವ್ ಮತ್ತು ನಾನು ಇಂಟ್ರೆಸ್ಟಿಂಗ್ ಯೋಜನೆಗೆ ಕೈಜೋಡಿಸುತ್ತಿದ್ದೇವೆ, ಸ್ವಲ್ಪ ಸಮಯದ ಹಿಂದೆ ಗ್ರೀನ್ ಸಿಗ್ನಲ್ ಕೊಟ್ಟಿರೋದಾಗಿ ಹೇಳಿರುವ ಶಿವಣ್ಣ, ಹೇಮಂತ್‌ ಅವರ ಆಲೋಚನಾ ಕ್ರಮವೇ ವಿಭಿನ್ನವಾಗಿದೆ. ಅವರ ಜೊತೆ ಕೆಲಸ ಮಾಡೋಕೆ ಎಕ್ಸೈಟ್‌ ಆಗಿದ್ದೇನೆ ಎಂದಿದ್ದಾರೆ.

ಶಿವಣ್ಣ ಸಿನಿಮಾ ಜರ್ನಿಯ ಸೂಪರ್‌ ಹಿಟ್‌ ಚಿತ್ರಗಳಲ್ಲಿ ಒಂದಾದ ಜೋಗಿ, ಪ್ರೇಮ್‌ ಅವರಿಗೆ ಜಸ್ಟ್‌ 3ನೇ ಸಿನಿಮಾ ಆಗಿತ್ತು. ಓಂ ಚಿತ್ರವೂ ಉಪೇಂದ್ರ ಅವರಿಗೆ 3ನೇ ಸಿನಿಮಾ ಆಗಿತ್ತು. ಹರ್ಷ ಅವರ ಜೊತೆ ಭಜರಂಗಿ ಮಾಡಿದಾಗಲೂ.. ಅಷ್ಟೆ. ಹರ್ಷ ಅವರು ಡೈರೆಕ್ಟರ್‌ ಆಗಿ ಆಗಿನ್ನೂ ಹೊಸಬರೇ ಆಗಿದ್ದರು. ಹಾಗಂತ ಹೇಮಂತ್‌ ರಾವ್‌ ಹೊಸಬರೇನಲ್ಲ. ಆದರೆ ಶಿವಣ್ಣನ ಅನುಭವಕ್ಕೆ ಹೋಲಿಸಿದರೆ.. ಹೊಸಬರೇ ಅನ್ನಬಹುದು.

Tags: #ಹೇಮಂತ್ ರಾವ್ #ಶಿವರಾಜ್‌ʻಕುಮಾರ್‌ #ಶಿವಣ್ಣ #HemantRao #ShivarajKumar #Shivanna
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.