ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಚ್ಛೇದನ ಸುದ್ದಿಗಳು ಹೆಚ್ಚು ಸದ್ದು ಮಾಡುತ್ತಿವೆ. ಪ್ರೀತಿಸಿ ಮದುವೆ ಆದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇತ್ತೀಚೆಗೆ ಡಿವೋರ್ಸ್ ಪಡೆದಿದ್ದಾರೆ. ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಕೂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದಿನ್ನೂ ಇತ್ಯರ್ಥ ಆಗಿಲ್ಲ. ಈ ನಡುವೆ ದುನಿಯಾ ವಿಜಯ್ ಡೈವೋರ್ಸ್ ಅರ್ಜಿ ವಜಾ ಆಗಿದೆ.
ಖ್ಯಾತ ನಟ ನಿರ್ಮಾಪಕ ನಿರ್ದೇಶಕ ದುನಿಯಾ ವಿಜಯ್ ಅವರು ಸಲ್ಲಿಸಿದ್ದ ಡೈವೋರ್ಸ್ ಅರ್ಜಿ ವಜಾ ಆಗಿದೆ. ನಟ ವಿಜಯ್ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್ನಲ್ಲಿ ಪತ್ನಿ ನಾಗರತ್ನ ಅವರಿಂದ ವಿಚ್ಚೇದನ ಕೋರಿ ೨೦೧೮ರಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾ ಆಗಿದೆ.
ನಾಗರತ್ನ ಅವರು ಪತಿಯನ್ನು ಬಿಡುವುದಕ್ಕೆ ಒಪ್ಪಲಿಲ್ಲ ಹಾಗೂ ವಿಜಯ್ ಅವರು ಪತ್ನಿ ನಾಗರತ್ನ ಮೇಲೆ ಮಾಡಿದ್ದ ಕ್ರೌರ್ಯದ ಆರೋಪಗಳನ್ನು ಸಾಬೀತು ಮಾಡಲು ಆಗಲಿಲ್ಲ. ಹೀಗಾಗಿ ಅರ್ಜಿ ವಜಾ ಆಗಿದೆ. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧ ಹಾಗೂ ತ್ನಿಗೆ ಜೀವನಾಂಶ ನೀಡಲು ಕೂಡ ಸಿದ್ಧ ಎಂದಿದ್ದ ವಿಜಯ್ ಅವರಿಂದ ಬೇರೆಯಾಗಲು ನಾಗರತ್ನ ಯಾವ ಹಂತದಲ್ಲೂ ಸಿದ್ಧರಿರಲಿಲ್ಲ.
ಪ್ರತಿ ಬಾರಿ ಕೋರ್ಟ್ನಲ್ಲಿ ವಿಚಾರಣೆ ನಡೆದಾಗಲೂ ನಾಗರತ್ನ ವಿಜಯ್ ಅವರನ್ನು ಬಿಟ್ಟು ಕೊಡಲಿಲ್ಲ. ಹೀಗಾಗಿ ವಿಜಯ್ ಮತ್ತು ನಾಗರತ್ನ ಅವರ ಡೈವೋರ್ಸ್ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ದುನಿಯಾ ವಿಜಯ್ ಅವರಿಗೆ ಮೊದಲ ಪತ್ನಿ ನಾಗರತ್ನ (ನಾಗರತ್ನ ಅವರೂ ಕೂಡಾ ಮೊದಲ ಪತ್ನಿ ಅಲ್ಲ, ಎರಡನೇ ಪತ್ನಿ ಎಂಬ ಮಾತುಗಳಿವೆ). ಇಬ್ಬರು ಮಕ್ಕಳು. ಮೋನಿಕಾ ವಿಜಯ್ ಮತ್ತು ಸಾಮ್ರಾಟ್ ವಿಜಯ್. ಅವರಿಬ್ಬರೂ ಕೂಡಾ ವಿಜಯ್ ಜೊತೆಯಲ್ಲಿದ್ದಾರೆ. ತಾಯಿ ನಾಗರತ್ನ ಅವರನ್ನೂ ಬಿಟ್ಟಿಲ್ಲ. ದುನಿಯಾ ವಿಜಯ್ ಹಲವು ವರ್ಷಗಳಿಂದ ಕೀರ್ತಿ ಅವರ ಜೊತೆ ಸಂಸಾರ ಮಾಡುತ್ತಿದ್ದಾರೆ. ಅಧಿಕೃತವಾಗಿ ಮೊದಲ ಪತ್ನಿಗೆ ಡೈವೋರ್ಸ್ ಕೊಟ್ಟಿಲ್ಲವಾದ್ದರಿಂದ ಇದನ್ನು ಲಿವ್ ಇನ್ ರಿಲೇಷನ್ ಶಿಪ್ ಎನ್ನಬಹುದಷ್ಟೇ.
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಚ್ಛೇದನ ಸುದ್ದಿಗಳು ಹೆಚ್ಚು ಸದ್ದು ಮಾಡುತ್ತಿವೆ. ಪ್ರೀತಿಸಿ ಮದುವೆ ಆದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇತ್ತೀಚೆಗೆ ಡಿವೋರ್ಸ್ ಪಡೆದಿದ್ದಾರೆ. ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಕೂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಡಾ. ರಾಜ್ಕುಮಾರ್ ಕುಟುಂಬದಲ್ಲಿ ಕೇಳಿಬಂದ ಮೊದಲ ಡಿವೋರ್ಸ್ ಪ್ರಕರಣ ಇದಾಗಿತ್ತು. ಈಗ ವಿಜಯ್ ಅವರ ಅರ್ಜಿ ವಜಾ ಆಗಿದ್ದು, ಮುಂದಿನ ಬೆಳವಣಿಗೆ ಏನೆಂದು ಗೊತ್ತಿಲ್ಲ.



