Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ನನ್ನ ಬದುಕು ಬದಲಿಸಿದ್ದು ಅವರೇ.. ಅವರಿಲ್ಲದೆ ಇದ್ದರೆ ಮುಖ್ಯಮಂತ್ರಿ ಆಗ್ತಾ ಇರಲಿಲ್ಲ.. : ಸಿಎಂ ಸಿದ್ದರಾಮಯ್ಯ

SpeciallU by SpeciallU
September 5, 2023
in News, Politics
Reading Time: 1 min read
0 0
0
ನನ್ನ ಬದುಕು ಬದಲಿಸಿದ್ದು ಅವರೇ.. ಅವರಿಲ್ಲದೆ ಇದ್ದರೆ ಮುಖ್ಯಮಂತ್ರಿ ಆಗ್ತಾ ಇರಲಿಲ್ಲ.. : ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಬದುಕು ಬದಲಾಗಿದ್ದು ಎಲ್ಲಿಂದ.. ಯಾವಾಗಿಂದ.. ಹೀಗೆ ನೋಡುತ್ತಾ ಹೋದರೆ ಹಲವರ ಹೆಸರು ಹೇಳಬೇಕಾದೀತು. ಆದರೆ (Sept 5th Teachers day) ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಮೇಷ್ಟ್ರ ಬಗ್ಗೆ ಹೇಳಿಕೊಂಡಿದ್ದಾರೆ. ಯಾರು ಬೇಕಾದರೂ ಸಿಎಂ ಆಗಬಹುದು. ಹಣೆಬರಹದಲ್ಲಿ ಅದೃಷ್ಟ ಇರಬೇಕು. ಆದರೆ ಅಕ್ಷರವೇ ಇಲ್ಲದಿದ್ದರೆ.. ಆ ಅಕ್ಷರ ನೀಡಿದ ಮೇಷ್ಟ್ರುಗಳ ಬಗ್ಗೆ ಹೇಳಿಕೊಂಡಿದ್ದಾರೆ ಸಿಎಂ ಸಿದ್ದರಾಮಯ್ಯ.

ತಂದೆ ಹಾಗೂ ತಾಯಿಯ ನಂತರದ ಸ್ಥಾನ ಗುರುವಿಗೇ ಮೀಸಲು. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯ. ಒಬ್ಬ ಶಿಕ್ಷಕ ತನ್ನ ಮೂರು ದಶಕಗಳ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಾನೆ. ಆದರೆ, ತಾನು ಪಾಠ ಮಾಡಿದ ಎಲ್ಲಾ ಮಕ್ಕಳನ್ನೂ ಆತ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ ಯಾವುದೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ, ತನಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ. ಮರೆಯಬಾರದೂ ಕೂಡಾ ಎಂದಿರುವ ಸಿದ್ದರಾಮಯ್ಯ ತಮಗೆ ಪಾಠ ಕಲಿಸಿದ ಅಕ್ಷರ ಕಲಿಸಿದ ಮೇಷ್ಟ್ರನ್ನು (Teachers day) ನೆನಪಿಸಿಕೊಂಡಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ನನ್ನ ಬದುಕಿನಲ್ಲಿ ರಾಜಪ್ಪ  ಮೇಷ್ಟ್ರು ಬರದೆ ಹೋಗಿದ್ದರೆ ಬಹುಶಃ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ನನ್ನ ಮೊದಲ ಶಿಕ್ಷಕ ನಂಜೇಗೌಡರು. ಅವರು ನನಗೆ ವೀರಮಕ್ಕಳ ಕುಣಿತ ಕಲಿಸುತ್ತಿದ್ದರು. ಆಗ ನಾನು ಮರಳಲ್ಲಿ ಅಕ್ಷರಾಭ್ಯಾಸ ಮಾಡುತ್ತಿದ್ದೆ. ಲೆಕ್ಕ, ಮಗ್ಗಿ ಎಲ್ಲವನ್ನೂ ಕಲಿಯುತ್ತಿದ್ದೆ. ಒಂದು ದಿನ ನಮ್ಮೂರಿನ ರಾಜಪ್ಪ ಮೇಷ್ಟ್ರ ಕಣ್ಣಿಗೆ ನಾನು ಬಿದ್ದೆ. ಅವರು ನನ್ನನ್ನು ಶಾಲೆಗೆ ಕರೆದುಕೊಂಡು ಹೋದರು, ಅಲ್ಲಿ ಹಲವಾರು ವಿಷಯಗಳ ಬಗ್ಗೆ ಉಕ್ತಲೇಖನ ಕೊಟ್ಟರು. ನಾನು ಸರಿಯಾಗಿ ಉತ್ತರಿಸಿ ಪಾಸಾದೆ. ಅವರು ಖುಷಿಪಟ್ಟು ನೇರವಾಗಿ ನನ್ನನ್ನು ಐದನೇ ತರಗತಿಗೆ ಸೇರಿಸಿದರು. ಅವರಿಂದಾಗಿ ನಾನು ಈಗಿನ ಸ್ಥಾನದಲ್ಲಿದ್ದೇನೆ, ಆ ಪುಣ್ಯಾತ್ಮನನ್ನು ನಾನು ಸದಾ ಗೌರವದಿಂದ ಸ್ಮರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ ಸಿಎಂ ಸಿದ್ದರಾಮಯ್ಯ.

ಇದೇ ವೇಳೆ (Teachers day) ರಾಜ್ಯದಲ್ಲಿ ಕೆಲವು ಶಾಲೆಗಳನ್ನು ಅದರಲ್ಲೂ ಶೂನ್ಯ ಸಂಪಾದನೆ ಶಾಲೆಗಳನ್ನು ನೆನಪಿಸಿಕೊಂಡಿದ್ದಾರೆ.  11 ಅನುದಾನಿತ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಶೂನ್ಯವಾಗಿದೆ. 78 ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಪಿಯುಸಿ ತರಗತಿಗಳ ಫಲಿತಾಂಶವೂ ಶೂನ್ಯವಾಗಿದೆ. ಈ ಎಲ್ಲಾ ಶಾಲೆಗಳು ಹಾಗೂ ಈ ಎಲ್ಲಾ ಕಾಲೇಜುಗಳಲ್ಲಿ ದಾಖಲಾದ ಎಲ್ಲಾ ಮಕ್ಕಳೂ ದಡ್ಡರೇ? ಅಂತೆಯೇ, ಈ ಎಲ್ಲಾ ಶಾಲಾ- ಕಾಲೇಜುಗಳಲ್ಲಿರುವ ಎಲ್ಲಾ ಶಿಕ್ಷಕರೂ ಅಪ್ರಯೋಜಕರೇ? ಇದಕ್ಕೆ ಯಾರನ್ನು ದೂಷಿಸುವುದು? ಇದೇ ರೀತಿ ಪ್ರತಿ ಬಾರಿ ಫಲಿತಾಂಶವನ್ನು ನೋಡಿದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಅತ್ಯಂತ ಹಿಂದಿನ ಸ್ಥಾನದಲ್ಲಿ ಮತ್ತು ಕರಾವಳಿಯ ಜಿಲ್ಲೆಗಳು ಮೊದಲ ಸ್ಥಾನದಲ್ಲಿರುತ್ತವೆ. ಎಲ್ಲ ಶಿಕ್ಷಕರಿಗೆ ಒಂದೇ ರೀತಿಯ ತರಬೇತಿ ನೀಡಿದರೂ ಏಕೆ ಹೀಗೆ? ಇದು ಸಿದ್ದರಮಯ್ಯ ಪ್ರಶ್ನೆ. ಉತ್ತರ ಹುಡುಕಬೇಕಾದವರೂ ಅವರೇ. ಪರಿಹಾರ ಕೊಡಬೇಕಾದವರೂ ಅವರೇ.

Tags: #ಸಿದ್ದರಾಮಯ್ಯ #ಶಿಕ್ಷಕರದಿನಾಚರಣೆ #ರಾಜಪ್ಪಮೇಷ್ಟ್ರು #Siddharamaiah #Teacher's Day #Rajappameshtru
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.