ಅದೊಂದ ವಿಡಿಯೋ ನೋಡಿ ಶಾಕ್ ಆದವರು ಒಬ್ಬಿಬ್ಬರಲ್ಲ. ಈತ ನಿಜಕ್ಕೂ ರಜನಿಕಾಂತ್ (rajanikanth) ಅವರೇನಾ.. ಅಥವಾ ಬೇರೇನಾ ಎಂದು ಕನ್ʻಫ್ಯೂಸ್ ಆದವರು ನೂರಾರು ಸಾವಿರಾರು ಅಲ್ಲ, ಲಕ್ಷ ಲಕ್ಷ ಜನ. ಆದರೆ ನಿಜವಾಗಿಯೂ ಈತ (Super star Rajanikanth) ರಜನಿಕಾಂತ್ ಅಲ್ಲ. ತಲೈವಾ ರೀತಿಯಲ್ಲೇ ಗಡ್ಡ.. ತಲೆ ಕೂದಲು.. ಸಣಕಲು ದೇಹ. ಕನ್ನಡಕ.. ದೂರದಿಂದ ನೋಡಿದರೆ ರಜನಿಕಾಂತ್ ಅಂತ್ಲೇ ಹೇಳಬೇಕು. ಅಷ್ಟರಮಟ್ಟಿಗೆ ಅವರು ಸೂಪರ್ ಸ್ಟಾರ್ನ ಹೋಲುತ್ತಾರೆ. ಈ ವ್ಯಕ್ತಿಯ ಹೆಸರು ಸುಧಾಕರ್ ಪ್ರಭು. ಕೇರಳದ Kerala ಕೊಚ್ಚಿಯವರು Kochchi. ಅಲ್ಲಿಯೇ ಒಂದು ಟೀ ಅಂಗಡಿ ಇಟ್ಟುಕೊಂಡಿರೋ ಸುಧಾಕರ್ ಪ್ರಭು (Sudhakar prabhu), ನೋಡೋಕೆ ಥೇಟು ರಜನಿಕಾಂತ್ ಅವರಂತೆಯೇ ಇದ್ಧಾರೆ.
ವೈರಲ್ ಆಗಿರುವ ವಿಡಿಯೋದಲ್ಲೂ ಅದನ್ನು ನೋಡಬಹುದು. ಕೆಲವರು ಜೂಮ್ ಮಾಡಿ ನೋಡಿ ಅದು ರಜನಿಕಾಂತ್ ಹೌದೋ ಅಲ್ವೋ ಎಂದು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ತಲೈವಾ (thalaiva) ರೀತಿಯಲ್ಲಿ ಅರ್ಧಬರ್ಧ ಕೆದರಿದ ಕೂದಲು, ಕನ್ನಡಕ, ನೀಲಿ ಬಣ್ಣದ ಶರ್ಟು, ಶಾರ್ಟ್ಸ್, ಅವಾಯ್ ಚಪ್ಪಲಿಯಲ್ಲಿ ಬಾಡಿಗಾರ್ಡ್ಗಳ ಜೊತೆ ಸುಧಾಕರ್ ಪ್ರಭು ಮಾತನಾಡುತ್ತಾ ನಿಂತ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ವಿಡಿಯೋದಲ್ಲಿ ಸುಧಾಕರ್ ಪ್ರಭು ಬಾಡಿ ಲಾಂಗ್ವೇಜ್ ಕೂಡ ಸೂಪರ್ ಸ್ಟಾರ್ನ ನೆನಪಿಸುವಂತಿದೆ. Malayalam director ಮಲಯಾಳಂ ನಿರ್ದೇಶಕ ನಾದಿರ್ ಶಾ (nadir shah) ಎಂಬುವವರು ಈ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಸ್ವಲ್ಪ ಮೇಕಪ್ ಟಚ್ ಕೊಟ್ಟಿದ್ದಾರೆ. ಅಕ್ಕಪಕ್ಕ ಬಾಡಿ ಗಾರ್ಡುಗಳಂತೆ ವ್ಯಕ್ತಿಗಳನ್ನ ನಿಲ್ಲಿಸಿ, ಸುಧಾಕರ್ ಪ್ರಭು ಅವರನ್ನ ಊರಿನಲ್ಲೆಲ್ಲ ಸುತ್ತಾಡಿಸಿದ್ದಾರೆ. ನೋಡಿದವರೆಲ್ಲ ಹತ್ತಿರ ಬಂದು ಸೆಲ್ಫಿ ತೆಗೆಸಿಕೊಂಡಿದ್ದಾರೆ. ಕೊನೆಯದಾಗಿ ಇವರಿಗೆಲ್ಲ ಈತ ಸುಧಾಕರ್ ಪ್ರಭು, ರಜನಿಕಾಂತ್ ಅಲ್ಲ ಎಂದು ಗೊತ್ತಾಗಿದೆ.



