ಖಾಸಗಿ ಸಮಾರಂಭವೊಂದರಲ್ಲಿ ಇತ್ತೀಚೆಗೆ ಕುಮಾರಸ್ವಾಮಿ ಮತ್ತು ಯತ್ನಾಳ್ ಅವರ ಸುದೀರ್ಘ ಮಾತುಕತೆ ನಡೆದಿತ್ತು. ಸರಿಸುಮಾರು 20 ನಿಮಿಷ ಮಾತುಕತೆ ನಡೆದಿತ್ತು. ನಾನೇನೂ ಜೆಡಿಎಸ್‌ಗೆ ಮತ್ತೊಮ್ಮೆ ಹೋಗಲ್ಲ ಎಂದು ಯತ್ನಾಳ್ ಸ್ಪಷ್ಟನೆ ನೀಡಿದರಾದರೂ, ಸದ್ಯಕ್ಕೆ ನಂಬುವುದಕ್ಕೆ ಯಾರೂ ಸಿದ್ಧರಿಲ್ಲ. ಹೀಗಿರುವಾಗಲೇ ಕುಮಾರಸ್ವಾಮಿ ಮತ್ತು ಪರಮೇಶ್ವರ್ ಮಧ್ಯೆ ಸುದೀರ್ಘ ಮಾತುಕತೆ ಆಗಿದೆ. ಅದೂ.. ಬರೋಬ್ಬರಿ 45 ನಿಮಿಷ ಮಾತುಕತೆ.
ಬೆಂಗಳೂರಿನ ತಾರಾ ಹೋಟೆಲ್ ಒಂದರಲ್ಲಿ ಕಳೆದ ಶನಿವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರಮೇಶ್ವರ್ 45 ನಿಮಿಷಗಳ ಕಾಲ ರಹಸ್ಯವಾಗಿ ಚರ್ಚಿಸಿದ್ದು ಕೈ ಪಾಳಯದಲ್ಲಿ ಸಂಭವಿಸಲಿರುವ ಅಪಾಯದ ಮುನ್ಸೂಚನೆ ಎಂಬುದು ಮೂಲಗಳ ಅಭಿಪ್ರಾಯ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿರುವುದು ನಿಜ.ಗಳೂರಿನ ತಾರಾ ಹೋಟೆಲ್ ಒಂದರಲ್ಲಿ ಕಳೆದ ಶನಿವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರಮೇಶ್ವರ್ 45 ನಿಮಿಷಗಳ ಕಾಲ ರಹಸ್ಯವಾಗಿ ಚರ್ಚಿಸಿದ್ದಾರೆ.
ಅಂದ ಹಾಗೆ, ಇವತ್ತು ಸಿಎಂ ಆಗಿರುವ ಸಿದ್ದರಾಮಯ್ಯ ಮತ್ತು ಸಿಎಂ ಹುದ್ದೆ ನನಗೆ ಬೇಕೇ ಬೇಕು ಎಂದು ಪಟ್ಟು ಹಿಡಿದಿರುವ ಡಿಕೆಶಿ ಅವರು ನೇರವಾಗಿ ಕುಮಾರಸ್ವಾಮಿ ಅವರ ವಿರೋಧಿಗಳು. ಬದ್ಧ ಶತ್ರುಗಳು ಎಂದೂ ಹೇಳಬಹುದು. ಇದೀಗ ಸಿದ್ದು ಮತ್ತು ಕುಮಾರಸ್ವಾಮಿ ಮಧ್ಯೆ ಮತ್ತೊಂದು ಸುತ್ತಿನ ವಾಗ್ಯುದ್ಧವೂ ಶುರುವಾಗಿದೆ. ಹೀಗಿರುವಾಗಲೇ ಕುಮಾರಸ್ವಾಮಿ ಅವರನ್ನು ಪರಮೇಶ್ವರ್ ಭೇಟಿಯಾಗುತ್ತಾರೆ ಎಂದರೆ ನಿರ್ದಿಷ್ಟ ಸಹಾಯವನ್ನು ಅವರು ಕೋರಿದ್ದಾರೆ ಅಂತಲೇ ಅರ್ಥ. ಈ ಸಹಾಯದ ಸ್ವರೂಪ ಏನು? ಎಂಬುದೇ ಸದ್ಯದ ಕುತೂಹಲ.ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿ ಸರಕಾರಕ್ಕೆ ಅಪಾಯ ಎದುರಾಗುವ ಲಕ್ಷಣ ಕಂಡರೆ, ಸಿಎಂ ಆಗಿ ಎಮರ್ಜ್ ಆಗಲು ಪರಮೇಶ್ವರ್ ಮುಂದಾಗಬಹುದು ಎಂಬುದು ನಿರೀಕ್ಷೆ. ಅಕಸ್ಮಾತ್ ಏನಾದರೂ ಸಹಾಯ ಕೋರುವ ಪರಿಸ್ಥಿತಿ ಎದುರಾದರೆ.. ಜೆಡಿಎಸ್ ಶಾಸಕರ ಬೆಂಬಲ ತಮಗಿರಲಿ ಅಂತ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರನ್ನು ಕೋರಿದರೇ? ಇಂಥಾದ್ದೊಂದು ಚರ್ಚೆಯಾಗುತ್ತಿರುವುದಂತೂ ನಿಜ.
ಹಾಗೆ ಹೇಳುವವರೇ ಕುಮಾರಸ್ವಾಮಿ ಅವರು ಪರಮೇಶ್ವರ್‌ರ ಬೆಂಬಲಕ್ಕೆ ನಿಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಬಿಜೆಪಿ ಜತೆಗಿನ ಮೈತ್ರಿ ಗಟ್ಟಿಯಾಗಿದೆ. ಕುಮಾರಸ್ವಾಮಿ ಅಂತಹ ರಿಸ್ಕ್ ತೆಗೆದುಕೊಳ್ಳಲ್ಲ ಎನ್ನುತ್ತಿದ್ದಾರೆ. ದರೆ ಕಾಂಗ್ರೆಸ್‌ನಲ್ಲಿನ ಬಣ ಸಂಘರ್ಷ ತಾರಕಕ್ಕೇರಿದ ಸಂದರ್ಭದಲ್ಲಿ ಬಿಜೆಪಿಯ ಟಾಪ್ ಲೀಡರುಗಳು ಫೀಲ್ಡಿಗೆ ಎಂಟ್ರಿ ಆಗಬಹುದು.
ಹಾಗೇನಾದರೂ ಅವರು ಎಂಟ್ರಿಯಾದರೆ ಸರಕಾರ ಅಲುಗಾಡಬಹುದು. ಆ ಸಂದರ್ಭದಲ್ಲಿ ಸರಕಾರಕ್ಕೆ ಅಪಾಯವಾಗದಂತೆ ಶಾಸಕ ಬಲವನ್ನು ಹಿಡಿದಿಟ್ಟುಕೊಳ್ಳುವವರು ಬೇಕು. ಹೀಗಾಗಿ ಅಂಥ ಸನ್ನಿವೇಶ ಎದುರಾದರೆ ತಮಗೆ ಬಿಜೆಪಿಯ ಟಾಪ್ ಲೀಡರುಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳಿ ಅಂತ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರನ್ನು ಕೋರಿರುವ ಸಾಧ್ಯತೆ ಹೆಚ್ಚು.
ಆದರೆ ಪರಮೇಶ್ವರ್ ಅವರು ಈ ಮಾತುಕತೆ ಮೂಲಕ ಒಂದೊಮ್ಮೆ ಅವಕಾಶ ಸೃಷ್ಟಿಯಾದರೆ ಬಿಜೆಪಿ ಸುಪ್ರಿಮೋಗಳಿಂದ ಅಪಾಯವಾಗದಂತೆ ನೋಡಿಕೊಳ್ಳಿ ಎಂದು ಸಹಾಯ ಕೋರಿರಬಹುದು ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ಚರ್ಚೆಗಳು ಸದ್ಯಕ್ಕೆ ಚರ್ಚೆಗಳು ಮಾತ್ರ.
ಈ ಮಧ್ಯೆ ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ನಂತರ ಉಭಯ ಬಣಗಳಲ್ಲಿ ಕಾಣಿಸಿಕೊಂಡ ವಿಶ್ವಾಸದ ಕತೆ ಒಂದೆಡೆಯಾದರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರ ಪರಮಾಪ್ತರು ಹೈಕಮಾಂಡ್ ವರಿಷ್ಠರಿಗೆ ಖಡಕ್ಕಾದ ಸಂದೇಶಗಳನ್ನು ರವಾನಿಸುತ್ತಲೇ ಇದ್ದಾರೆ.



