ಹಾಸನ ಕ್ಷೇತ್ರ. ಈಗ ಇಡೀ ರಾಜ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿಬಿಟ್ಟಿದೆ. ಮಾಜಿ ಪ್ರಧನಿ ದೇವೇಗೌಡರ ಸೊಸೆ.. ಮಾಇ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ, ಮಾಜಿ ಸಿಎಂ ಕುಮಾರಸ್ವಾಮಿಯವರ ಅತ್ತಿಗೆ.. ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧಿಸುವ ನಿಧಾರದಿಂದ ಶುರುವಾದ ಜಟಾಪಟಿ ಇದು. ಅತ್ತ ರಾಮನಗರಕ್ಕೆ ನಿಖಿಲ್ ಕುಮಾರಸ್ವಾಮಿ ಕ್ಯಾಂಡಿಡೇಟ್ ಆಗಿರುವ ಹಿನ್ನೆಲೆಯಲ್ಲಿ ವಿವಾದ, ಜಟಾಪಟಿ ಇನ್ನೂ ಇನ್ನೂ ಜೋರಾಗಿದೆ. ಇದರ ಮಧ್ಯೆಯೇ ಹಾಸನದಲ್ಲಿ ಕೆಲವು ಬೆಳವಣಿಗೆಗಳು ನಡೆಯುತ್ತಿವೆ.
ಸ್ವರೂಪ್ ಜೊತೆ ರೇವಣ್ಣ ರಹಸ್ಯ ಮಾತುಕತೆ
ರೇವಣ್ಣ ಮತ್ತು ಸ್ವರೂಪ್ ಪ್ರಕಾಶ್ ಇಬ್ಬರೂ ಪರಸ್ಪರ ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಹಾಸನ ಟಿಕೆಟ್ ಫೈಟ್ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಇವರಿಬ್ಬರೂ ಭೇಟಿಯಾಗಿರುವುದು ಕುತೂಹಲ ಹುಟ್ಟಿಸಿದೆ. ಮಾರ್ಚ್ 10ರಿಂದ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಥಯಾತ್ರೆ ಯಶಸ್ವಿಗಾಗಿ ಎಲ್ಲರನ್ನು ಒಗ್ಗೂಡಿಸಲು ರೇವಣ್ಣ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. , ರೇವಣ್ಣ ಸಾಹೇಬರನ್ನು ಭೇಟಿಯಾಗಿ ವಾರ, ಹತ್ತು ದಿನ ಆಗಿತ್ತು. ಹೊಸದು ಏನಿಲ್ಲ, ಸಾಹೇಬ್ರು ನಮ್ಮ ಪಕ್ಷದ ವರಿಷ್ಠರು, ನಾಯಕರು ಜನರಲ್ ಆಗಿ ಭೇಟಿ ಮಾಡಲು ಬಂದೆ. ಪಂಚರತ್ನ ಯಾತ್ರೆ ಬಗ್ಗೆ ಕುಳಿತು ಮಾತನಾಡೋಣ ಅಂತ ಹೇಳಿದ್ದಾರೆ ಅಷ್ಟೇ. ಟಿಕೆಟ್ ವಿಚಾರ ಮಾತನಾಡಿಲ್ಲ. ಮಾತನಾಡೋಣ ಎಂದು ಹೇಳಿದ್ದಾರೆ. ದೊಡ್ಡವರೆಲ್ಲ ಕುಳಿತುಕೊಂಡು ತೀರ್ಮಾನ ಮಾಡೋಣ ಎಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಸ್ವರೂಪ್ ರೇವಣ್ಣ.
ಗಿಫ್ಟ್ ಹಂಚುತ್ತಿದ್ದಾರೆ ಪ್ರೀತಂ ಗೌಡ
ಚುನಾವಣೆ ಹೊಸ್ತಿಲಲ್ಲಿ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡರಿಂದ ಮತದಾರರಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ. ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಕ್ಷೇತ್ರದ ಮಹಿಳಾ ಮತದಾರರಿಗೆ ಬಾಗಿನದಲ್ಲಿ ಸೀರೆ, ಬೆಳ್ಳಿ ದೇವರ ಫೋಟೋ ಗಿಫ್ಟ್ ಕೊಟ್ಟಿದ್ದಾರೆ. 

ಪ್ರೀತಂ ಗೌಡ ವಿರುದ್ಧ ಗುಡುಗಿದ ರೇವಣ್ಣ
ಹಾಸನ ಜಿಲ್ಲಾ ಬಿಜೆಪಿ ಮುಖಂಡರಿಗೆ ಮಾನ ಮರ್ಯಾದೆ ಏನೂ ಇಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅಡಿಗಲ್ಲು ಹಾಕಿದ್ದ ವಿಮಾನ ನಿಲ್ದಾಣಕ್ಕೆ ಮತ್ತೆ ಅಡಿಗಲ್ಲು ಹಾಕೋಕೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಗೊತ್ತಿದೆಯೋ ಇಲ್ವೋ ನನಗೆ ಗೊತ್ತಿಲ್ಲ. ಅಡಿಗಲ್ಲು ಹಾಕಿದ ಬಳಿಕ 5 ವರ್ಷ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಕೆಲಸ ಮತ್ತೆ ಪುನಾರಂಭವಾಗಿ 1 ವರ್ಷ ಕಳೆದರು ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಆಸ್ಪತ್ರೆ ಕಟ್ಟಡ ನಿರ್ಮಾಣ ಇನ್ನೂ ಮುಗಿದಿಲ್ಲ, ಉದ್ಘಾಟನೆಗೆ ಹೊರಟಿದ್ದಾರೆ. ಬರುವ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲುತ್ತಾರೆ ಅಂತ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅವರೇ ಉದ್ಘಾಟನೆ ಮಾಡಿಕೊಳ್ಳಲಿ. ನಾನು ಜಾರಿಗೆ ತಂದಿದ್ದ ಯೋಜನೆಗೆ ಅಡಿಗಲ್ಲು ಹಾಕಲು ಮುಂದಾಗಿದ್ದಾರೆ. ಹಾಗೇನಾದರೂ ಮಾಡಲು ಮುಂದಾದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.



