ಅದೊಂದು ತೋಟದ ಮನೆ. ಅಲ್ಲಿನ ಹೀರೋ ಕಾಮುಕ. ಅವನು ಲೈಂಗಿಕ ಕಿರುಕುಳಗಳದ್ದೇ ʻಸಿಂಹಗುಹೆʼಯ ಕಥೆ. ಹೀರೋ ಹಲವರ ಜೊತೆ ನಡೆಸುವ ರಾಸಲೀಲೆಗಳನ್ನು ವಿಡಿಯೋ ಮಾಡಿಕೊಂಡು ಸಂಭ್ರಮಿಸುವ ದೃಶ್ಯಗಳಿವೆ. ಆ ವಿಡಿಯೋಗಳು ವೈರಲ್ ಆದಾಗ ಆತನ ಮನೆಗೆ ಪೊಲೀಸರು ಬರುತ್ತಾರೆ. ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿ ಸ್ಫೋಟವಾಗುತ್ತದೆ. ಹೀರೋ ನಾಪತ್ತೆ… ಸಿಂಹಗುಹೆ ಟೀಸರಿನಲ್ಲಿ ಇಷ್ಟೇ ಇರೋದು. ಸಿಂಹಗುಹೆ ಸಿನಿಮಾಗೆ ತಿರುವುಗಳಿಗೆ ಎಚ್ಚರ ಎಂಬ ಟ್ಯಾಗ್ ಲೈನ್ ಕೂಡಾ ಇದೆ. ಪ್ರಜ್ವಲ್ ರೇವಣ್ಣ ಕೇಸ್ ಪದೇ ಪದೇ ನೆನಪಾಗುತ್ತದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಸುದ್ದಿ ಹೊರಬಂದಿದ್ದು ಏಪ್ರಿಲ್ 21-22ರಂದು. ಏಪ್ರಿಲ್ 23ನೇ ತಾರೀಕು ಜೆಡಿಎಸ್ ನಾಯಕರೇ ದೂರು ಕೊಡುವವರೆಗೆ ಹಾಸನ ಬಿಟ್ಟು ಹೊರಗೆ ಬಂದಿರಲಿಲ್ಲ. ಅದಾದ ಮೇಲೆ ಪ್ರಜ್ವಲ್ ರೇವಣ್ಣಂದೇ ಸದ್ದು ಮತ್ತು ಸುದ್ದಿ. ಮೊಬೈಲುಗಳಲ್ಲಿ ಮಾರ್ಕೆಟಿಂಗ್ ಆದ ಈ ವಿಡಿಯೋಗಳಲ್ಲಿ ತಪ್ಪಿತಸ್ಥ ಯಾರು? ಪ್ರಜ್ವಲ್ ರೇವಣ್ಣನಾ..? ಆತನ ಕಾಮುಕತೆಯಾ..? ಅದನ್ನು ವೈರಲ್ ಮಾಡಿದ ಖದೀಮರದ್ದೇ ತಪ್ಪಾ..? ಇಂತಹ ನೂರಾರು ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗುತ್ತಿಲ್ಲ. ಇಂತಹ ಘಟನೆ ನಡೆದಾಗ ಸಿನಿಮಾ ಆಗುವುದು ಸಹಜ ಎಂದುಕೊಂಡಿದ್ದವರಿಗೆ ಟೀಸರ್ ಕೂಡಾ ಬಂದು ಶಾಕ್ ಕೊಟ್ಟಿದೆ. ಚಿತ್ರದ ಹೆಸರು ಸಿಂಹ ಗುಹೆ.
ಟೀಸರ್‌ನಲ್ಲಿ ಇರುವ ತುಣುಕುಗಳು ಸದ್ಯ ಎಲ್ಲೆಡೆ ಸಂಚಲನ ಸೃಷ್ಟಿಸುತ್ತಿರುವ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನೇ ಹೋಲುತ್ತಿವೆ. ಆದರೆ.. ಇದು ಈಗ ಬಿಡುಗಡೆಯಾಗುತ್ತಿರುವ ಸಿನಿಮಾ ಹೊರತು, ಇದಕ್ಕೂ.. ಪ್ರಜ್ವಲ್ ವಿಡಿಯೋ ಪ್ರಕರಣಕ್ಕೂ ಸಂಬಂಧ ಇಲ್ಲ.
ಎಲ್ಲರಿಗೂ ಈಗ ಹಾಗೆ ಅನಿಸುತ್ತಿರಬಹುದು ಅಷ್ಟೇ. ನಾವು ಈ ಸಿನಿಮಾ ಮಾಡಿ ಒಂದೂವರೆ ವರ್ಷ ಆಯ್ತು. ಸೆನ್ಸಾರ್ 2022 ಡಿಸೆಂಬರ್ ಆಗಿದೆ. ನಮ್ಮ ಸಿನಿಮಾದಲ್ಲಿರುವ ಕಂಟೆಂಟ್ ಅಲ್ಲಿ ಕಾಣಿಸುತ್ತಿದೆ ಈಗ. ಸಿನಿಮಾದಲ್ಲಿ ಇರೋದನ್ನು ಬಿಟ್ಟು ಬೇರೆ ಏನೂ ಮಾಡುವುದಕ್ಕೆ ಹೋಗಿಲ್ಲ ಎನ್ನುತ್ತಾರೆ ನಿರ್ದೇಶಕ ಎಸ್.ಜೆ.ಆರ್.
“ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಹಾಗೂ ನಮ್ಮ ಸಿನಿಮಾ ಎರಡೂ ಕಾಕತಾಳೀಯ ಅಷ್ಟೇ. ಅಲ್ಲದೆ ನಮ್ಮ ಸಿನಿಮಾ ನಾಯಕ ಕೂಡ ವಿದೇಶದಲ್ಲಿಯೇ ಇದ್ದಾರೆ ಎಂದಿರುವ ನಿರ್ದೇಶಕರು ಇದು ಬಹಳ ಹಿಂದೆಯೇ ಶೂಟಿಂಗ್ ಆಗಿದ್ದ ಸಿನಿಮಾ. ಸರಿಯಾಗಿ ಮಾಡಿದ್ದರೆ 2018ರಲ್ಲಿಯೇ ರಿಲೀಸ್ ಆಗಬೇಕಿದ್ದ ಸಿನಿಮಾ ಎಂದಿದ್ದಾರೆ.
ಸರ್ವ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ತೋಟದ ಮನೆಯಲ್ಲಿ ನಡೆಯುವ ಲೈಂಗಿಕ ಕಿರುಕುಳಗಳ ಕಥೆ ಇದೆ. ಹೀರೋ ಹಲವರ ಜೊತೆ ನಡೆಸುವ ರಾಸಲೀಲೆಗಳನ್ನು ವಿಡಿಯೋ ಮಾಡಿಕೊಂಡು ಸಂಭ್ರಮಿಸುವ ದೃಶ್ಯಗಳಿವೆ. ಆ ವಿಡಿಯೋಗಳು ವೈರಲ್ ಆದಾಗ ಆತನ ಮನೆಗೆ ಪೊಲೀಸರು ಬರುತ್ತಾರೆ. ಟೀಸರಿನಲ್ಲಿ ಇಷ್ಟೇ ಇರೋದು. ಸಿಂಹಗುಹೆ ಸಿನಿಮಾಗೆ ತಿರುವುಗಳಿಗೆ ಎಚ್ಚರ ಎಂಬ ಟ್ಯಾಗ್ ಲೈನ್ ಕೂಡಾ ಇದೆ. ರವಿ ಸಿರೋರ್ ನಾಯಕನಾಗಿದ್ದು, ನಿಶ್ವಿಕಾ ಪಾಟೀಲ್, ಅನುರಾಧಾ, ರವಿ ಸಿರೂರ್ ಸೇರಿದಂತೆ ಹಲವರು ನಟಿಸಿದ್ಧಾರೆ.



