ಹಾವು, ಮನುಷ್ಯರಂತೆ ಬದಲಾಗುವುದು, ರೂಪಾಂತರ ಹೊಂದುವುದು ಸಿನಿಮಾದಲ್ಲಷ್ಟೇ ಸಾಧ್ಯ. ಆದರೆ, ಇಲ್ಲೊಬ್ಬಳು ಯುವತಿ ನಾಗಿಣಿಯಂತೆ ಕಾಣಿಸಿಕೊಂಡಿದ್ದಾಳೆ. ವಿಚಿತ್ರ ಎಂದರೆ 3 ತಿಂಗಳ ಹಿಂದೆ ಈ ಯುವತಿ ನಾಪತ್ತೆಯಾಗಿದ್ದಳು. ಈಗ ನಾಗಿಣಿಯಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ.ಈಕೆ ಮೂಲತಃ ಜಾರ್ಖಂಡ್‌ನ ಹುಡುಗಿ.
ಜಾರ್ಖಂಡ್ ಮೂಲದ ಯುವತಿ ಮೂರು ತಿಂಗಳಿನಿಂದ ಕಾಣೆಯಾಗಿದ್ದಳು. ಪೊಲೀಸ್ ಕಂಪ್ಲೇಂಟ್ ಕೂಡಾ ಆಗಿತ್ತು. ಪೋಷಕರು ಮಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಎಷ್ಟೇ ಹುಡುಕಿದರೂ ಮಗಳು ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಣಿಧಿ ಎಂಬಲ್ಲಿಯ ಗುಹೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಯುವತಿ ಗುಹೆಯಲ್ಲಿ ಹಾವಿನ ರೀತಿ ಹೊರಳಾಡುತ್ತಿದ್ದಳು. ಯುವತಿ ಪದೇ ಪದೇ ನಾಲಿಗೆಯನ್ನು ಹಾವಿನ ರೀತಿ ಹೊರಗೆ-ಒಳಗೆ ತೆಗೆದುಕೊಳ್ಳುತ್ತಿದ್ದಳು. ಹಾಗಾಗಿ ಸುತ್ತಲಿನ ಜನರು ಯುವತಿಯನ್ನು ಕಂಡು ಹೆದರಿದ್ದರು. ನಂತರ ಆಕೆಗೆ ದೂರದಿಂದಲೇ ಪೂಜೆ ಸಲ್ಲಿಸಲು ಕೆಲವರು ಆರಂಭಿಸಿದ್ದರು.
ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೆಲವು ನೆಟ್ಟಿಗರು ಈ ಘಟನೆಯನ್ನು ಪವಾಡಕೆಕ ಹೋಲಿಸಿ ಲಿಂಕ್ ಮಾಡಿದ್ದರು. ಪರಮೇಶ್ವರನ ಚಮತ್ಕಾರ ಅಂತ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಯುವತಿ ಮಾನಸಿಕ ಅಸ್ವಸ್ಥಳಾಗಿದ್ದು, ಆಕೆಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ಈ ವಿಡಿಯೋ ಯುವತಿಯ ಪೋಷಕರನ್ನು ಸಹ ತಲುಪಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಮಗಳನ್ನು ತಮ್ಮ ಜೊತೆ ಕರೆದೊಯ್ದಿದ್ದಾರೆ.
https://www.instagram.com/p/C-ElYn9P529
ಜಾರ್ಖಂಡ್‌ನಿಂದ ನಾಪತ್ತೆಯಾಗಿದ್ದ ಯುವತಿ ಮೂರು ತಿಂಗಳು ಎಲ್ಲಿದ್ದಳು? ಈ ಗುಹೆಯನ್ನು ಸೇರಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇನ್ನು ಗ್ರಾಮದ ಜನರು ಒಂದೊಂದು ಕಥೆಯನ್ನು ಹೇಳುತ್ತಿದ್ದಾರೆ. . ಯುವತಿಯ ವರ್ತನೆ ಕಂಡ ಗ್ರಾಮಸ್ಥರು ಆಕೆ ಸಾಕ್ಷತ್ ನಾಗಿಣಿಯ ಅವತಾರ ಎಂದು ಪೂಜೆ ಮಾಡಲು ಶುರು ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬಂದ ಪೋಷಕರು ಆಕೆಗೆ ಪೂಜೆ ಸಲ್ಲಿಸಿ ಮಗಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.



