ಯುವರತ್ನ ಚಿತ್ರದಲ್ಲೊಂದು ಡೈಲಾಗ್ ಇದೆ. ಪುನೀತ್ ರಾಜ್`ಕುಮಾರ್`ಗೆ ನೀವು ಲೆಕ್ಚರರ್ರಾ ಎಂದು ಹೀರೋಯಿನ್ ಕೇಳಿದಾಗ.. ನಂಗೂ.. ನಮ್ಮಣ್ಣಂಗೂ ವಯಸ್ಸೇ ಆಗಲ್ಲ ಅಂತಾರೆ ಅಪ್ಪು. ಅದು ನಿಜವೂ ಹೌದು. ಶಿವಣ್ಣಂಗೆ ಈಗೋ ಇಲ್ಲ. ಅಹಂಕಾರ ಇಲ್ಲ ಅಂತಾರೆ. ಅದು ನಿಜವೂ ಹೌದು. ಇದೂವರೆಗೆ ಶಿವಣ್ಣ (Shiva raj kumar) ಇಂಡಸ್ಟ್ರಿಯಲ್ಲಿರುವ ಬಹುತೇಕ ಎಲ್ಲರ ಜೊತೆ ನಟಿಸಿದ್ದಾರೆ. ರವಿಚಂದ್ರನ್ (Ravichandran) , ಅಂಬರೀಷ್ (Ambareesh), ದೇವರಾಜ್, ಜಗ್ಗೇಶ್(Jaggesh), ಉಪೇಂದ್ರ(Upendra), ರಮೇಶ್ ಅರವಿಂದ್, ಶಶಿಕುಮಾರ್, ವಿಜಯ್ ರಾಘವೇಂದ್ರ, ಶ್ರೀಮುರಳಿ(Shree Murali), ಸುದೀಪ್ (Kichcha Sudeep), ಡಾಲಿ ಧನಂಜಯ (Dolly Dhananjya)..ಹೀಗೆ ಎರಡು ಜನರೇಷನ್ ಹೀರೋಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೀಗ ಇದುವರೆಗೆ ಜೊತೆಯಾಗಿ ನಟಿಸದೇ ಇರುವ ಅಜೇಯ್ ರಾವ್, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) , ಪ್ರಭುದೇವ (Prabhudeva) ರಾಜ್ ಬಿ.ಶೆಟ್ಟಿ (Raj B.Shetty)ಜೊತೆಯಲ್ಲೂ ನಟಿಸುತ್ತಿದ್ಧಾರೆ. 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿಯೂ ಕ್ಯೂ ದೊಡ್ಡದಾಗಿಯೇ ಇದೆ.
ಹ್ಯಾಟ್ರಿಕ್ ಹೀರೋ ಶಿವ ರಾಜ್`ಕುಮಾರ್ ಈಗ ಸೆಂಚುರಿ ಸ್ಟಾರ್ ಆಗಿದ್ದಾರೆ. 125 ಸಿನಿಮಾ ಮುಗಿಸಿದ್ದಾರೆ. ವಯಸ್ಸು 61. ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಸಂಭ್ರಮದಿಂದ ಆಚರಿಸಿರುವುದು ವಿಶೇಷ. ಇನ್ನು ಇಂಡಸ್ಟ್ರಿಯವರ ಲಿಸ್ಟ್ ನೋಡಿದರೆ ಅಚ್ಚರಿಯಾಗುವುದು ಖಂಡಿತಾ.
ಘೋಸ್ಟ್ ಚಿತ್ರದಿಂದ ಬಿಗ್ ಡ್ಯಾಡಿ ವಿಡಿಯೋ ರಿಲೀಸ್ ಆಗುತ್ತಿದೆ. ಘೋಸ್ಟ್ ಚಿತ್ರಕ್ಕೆ ಶ್ರೀನಿ ಡೈರೆಕ್ಟರ್ ಆದರೆ, ಸಂದೇಶ್ ನಾಗರಾಜ್ ಪ್ರೊಡ್ಯೂಸರ್.
ಇನ್ನು ಶಿವಣ್ಣ ಮತ್ತು ಪ್ರಭುದೇವ ನಟನೆಯ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ರಾಕ್`ಲೈನ್ ವೆಂಕಟೇಶ್ ಪ್ರೊಡ್ಯೂಸರ್.
ಇನ್ನು ಶಿವಣ್ಣ, ಡಾಲಿ ಧನಂಜಯ ಮತ್ತೊಮ್ಮೆ ಜೊತೆಯಾಗಿರುವ ಸಿನಿಮಾ ಸೆಟ್ಟೇರುತ್ತಿದೆ.
ಅರ್ಜುನ್ ಜನ್ಯ ನಿರ್ದೇಶಕರಾಗಿರುವ 45 ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕ. ಶಿವಣ್ಣ ಜೊತೆ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಕೂಡಾ ನಟಿಸುತ್ತಿರುವುದು ವಿಶೇಷ.
ಇನ್ನು ಶಿವಣ್ಣ ಲಿಸ್ಟಿನಲ್ಲಿರುವ ಸಿನಿಮಾಗಳು ಹೀಗಿವೆ. ಎಂ.ಬಿ.ಬಾಬು ನಿರ್ಮಾಣದ ಕೆ.ಎಸ್.ರವಿಕುಮಾರ್ ನಿರ್ದೇಶನದ ಚಿತ್ರ. ಈ ಚಿತ್ರದಲ್ಲಿ ಶಿವಣ್ಣ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಇರುತ್ತಾರೆ.
ಡೈರೆಕ್ಟರ್ ಕೊಟ್ರೇಶ್. ನಿರ್ಮಾಪಕರು ಎಆರ್‍ಕೆ ಚೌಧರಿ. ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಬರುತ್ತಿದ್ದಾರೆ.
ಮತ್ತೊಬ್ಬ ನಿರ್ಮಾಪಕ ಕಿರಣ್ ಕೂಡಾ ನಿರ್ಮಾಪರಕಾಗುತ್ತಿದ್ದಾರೆ. ಕಿರಣ್ ನಿರ್ಮಾಣದ ಮೊದಲ ಚಿತ್ರಕ್ಕೆ ಎಸ್.ಕೆ.ಬಾಹುಬಲಿ ನಿರ್ದೇಶಕರಾದರೆ, ಶಿವಣ್ಣ ಹೀರೋ. ಶಿವಣ್ಣ ಜೊತೆ ಕೃಷ್ಣ ಅಜೇಯ್ ರಾವ್ ಕೂಡಾ ನಾಯಕರಾಗಿ ನಟಿಸುತ್ತಿರುವುದು ಸ್ಪೆಷಲ್.
ಮತ್ತೊಬ್ಬ ನಿರ್ಮಾಪಕ ಸುಧೀರ್ ಚಂದ್ರ ಪದ್ರಿ, ಕಾರ್ತಿಕ್ ಅದ್ವೈತ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೂ ಶಿವಣ್ಣ ಹೀರೋ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆ.
ಚಂದ್ರಶೇಖರ್ ಹಾಗೂ ಸುಮಾ ಚಂದ್ರಶೇಖರ್ ಜೋಡಿಯ ಮತ್ತೊಂದು ಸಿನಿಮಾಗೆ ರೆಡಿಯಾಗುತ್ತಿದೆ. ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ನಿರ್ಮಾಪಕರಾದ ಮೈಲಾರಿ ಸಿನಿಮಾ ಮಾಡುತ್ತಿದ್ದಾರೆ. ಇನ್ಸ್`ಪೆಕ್ಟರ್ ವಿಕ್ರಂ ರಿಟನ್ರ್ಸ್.
ಇನ್ನು ಕ್ಯಾಪ್ಟನ್ ಮಿಲ್ಲರ್, ಜೈಲರ್ (ತಮಿಳು ಚಿತ್ರಗಳು), ತೆಲುಗಿನಲ್ಲಿ ಒಂದು ಸಿನಿಮಾ ಅಪ್`ಡೇಟ್ ಸುದ್ದಿಯಿದೆ.
ನೀ ಸಿಗೋವರೆಗೂ ಸಿನಿಮಾ ರಿಲೀಸ್ ಆಗುವ ಹಂತದಲ್ಲಿದೆ. ಅಶ್ವತ್ಥಾಮ, ಸತ್ಯಮಂಗಳ ಸ್ಕ್ರಿಪ್ಟ್ ಹಂತದಲ್ಲಿದೆ. ಭೈರತಿ ರಣಗಲ್, ಖುದ್ದು ಗೀತಾ ಶಿವರಾಜ್`ಕುಮಾರ್ ನಿರ್ಮಾಣದ ಸಿನಿಮಾ ಪ್ರೊಡಕ್ಷನ್ ಹಂತದಲ್ಲಿದ



