ಗೃಹಲಕ್ಷ್ಮಿ (Gruha Lakshmi) ಜಾರಿಯಾಗುತ್ತಿದೆ. ಇದೇ ಜುಲೈ 19ಕ್ಕೆ ಯೋಜನೆಗೆ ಚಾಲನೆ ಸಿಕ್ಕಲಿದೆ. ಆದರೆ, ಇದೆಲ್ಲದರ ಜೊತೆಗೆ ಮೋಸಗಾರರ ಹಾವಳಿಯೂ ಹೆಚ್ಚಾಗಿದೆ. ಸರ್ಕಾರ ಇನ್ನೂ ಗೃಹಲಕ್ಷ್ಮಿ (Gruha Lakshmi) ಆಪ್ ರಿಲೀಸ್ ಮಾಡಿಲ್ಲ. ಆದರೆ, ಯೋಜನೆ ಜಾರಿಗೂ ಮುನ್ನವೇ (Smart Phone) ಸ್ಮಾರ್ಟ್ ಫೋನ್ಗಳ (Google App store) ಗೂಗಲ್ ಪ್ಲೇ ಸ್ಟೋರ್ನಲ್ಲಿ 10ಕ್ಕೂ ಅಧಿಕ ನಕಲಿ ಗೃಹಲಕ್ಷ್ಮಿ (Gruha Lakshmi) ಆ್ಯಪ್ಗಳು ಹುಟ್ಟಿಕೊಂಡಿವೆ. ಇವುಗಳನ್ನು ಡೌನ್ಲೋಡ್ ಮಾಡಿದರೆ ನಿಮ್ಮ ಹಣ ವಂಚಕರ ಪಾಲೋಗೋದು ಗ್ಯಾರಂಟಿ. ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಭರ್ತಿ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣ ಆನ್ಲೈನ್ ವಂಚಕರ ಪಾಲಾಗಲಿದೆ.
‘ಗೃಹಲಕ್ಷ್ಮಿ ಯೋಜನೆ’ಗೆ ಸರ್ಕಾರದಿಂದ ಪ್ರತ್ಯೇಕವಾಗಿ ಅಪ್ಲಿಕೇಶನ್ (ಆ್ಯಪ್) ಸಿದ್ಧಪಡಿಸಲಾಗಿದೆ. ಆದರೆ, ಈವರೆಗೆ ಸರ್ಕಾರದಿಂದ ಆ್ಯಪ್ ಅನ್ನು ಬಿಡುಗಡೆ ಮಾಡಿಲ್ಲ. ಆದರೆ ವಂಚಕರು ಸರ್ಕಾರಕ್ಕಿಂತ ಫಾಸ್ಟ್. ಈಗಾಗಲೇ ಆಪ್`ಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿವೆ. ಆನ್ಲೈನ್ ವಂಚಕರು ಹತ್ತಾರು ನಕಲಿ ಆ್ಯಪ್ಗಳನ್ನು ಸಿದ್ಧಪಡಿಸಿದ್ದಾರೆ. ಸುಮಾರು 10ಕ್ಕೂ ಅಧಿಕ ನಕಲಿ ಆ್ಯಪ್ಗಳು ಹುಟ್ಟಿಕೊಂಡಿದ್ದು, ಫಲಾನುಭವಿ ಮಹಿಳೆಯರನ್ನು ವಂಚಿಸಲು ಸಿದ್ಧಗೊಂಡಿವೆ.
ನಕಲಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿಕೊಂಡರೆ ನಿಮ್ಮ ಖಾತೆಗೆ ಸರ್ಕಾರದಿಂದ ಹಣ ಬರುವುದಿರಲಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್ನಲ್ಲಿ ಈ ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿರುವ ನಕಲಿ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡ ನಂತರ, ಅಪ್ಪಿತಪ್ಪಿಯೂ ಮಾಹಿತಿ ಭರ್ತಿ ಮಾಡಲು ಹೋಗಬೇಡಿ. ಒಂದು ವೇಳೆ ಬ್ಯಾಂಕ್ ಖಾತೆ, ಆಧಾರ್ಕಾರ್ಡ್ ಮಾಹಿತಿ ಹಾಗೀ ಇತರೆ ವೈಯಕ್ತಿಕ ಮಾಹಿತಿ ಭರ್ತಿ ಮಾಡಿದ ತಕ್ಷಣವೇ ನಿಮಗೊಂದು ಒಟಿಪಿ ಬರುತ್ತದೆ. ಇನ್ನು ಒಟಿಪಿ ನಮೂದು ಮಾಡಿದ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣವೂ ಆನ್ಲೈನ್ ವಂಚಕರ ಪಾಲಾಗುತ್ತದೆ.
ಗೃಹಲಕ್ಷ್ಮಿಗೆ ಸ್ವಯಂ ನೋಂದಣಿ ಮಾಡಿಕೊಳ್ಳುವುದಕ್ಕೆ ಅವಕಾಶ ಇಲ್ಲ. ಸೇವಾ ಕೇಂದ್ರಗಳಿಗೆ ಹೋಗಿ ಅಥವಾ ಮನೆಗೇ ಬರುವ ಪ್ರಜಾಪ್ರತಿನಿಧಿಗಳ ಮೂಲಕವೇ ಅರ್ಜಿ ಭರ್ತಿ ಮಾಡಬೇಕು. ಗೃಹಜ್ಯೋತಿ ಆಪ್ ಸಿದ್ಧವಾದರೂ, ಅದು ಗೈಡ್ ಮಾಡಲಿದೆ ಹಾಗೂ ನೀವು ಈಗಾಗಲೇ ತುಂಬಿಸಿಕೊಟ್ಟ ಅರ್ಜಿಯ ಸ್ಥಿತಿಗತಿ ತಿಳಿಸಲಿದೆ, ಅಷ್ಟೆ.
ಆಧಾರ್ ಲಿಂಕ್ (Adhar card) ಆಗಿಲ್ಲದ ಖಾತೆಗೂ ಹಣ ಬರಲಿದೆ ಎಂದೇನೋ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಆದರೆ, ಆಧಾರ್ ಲಿಂಕ್ ಇಲ್ಲದ ಖಾತೆಗಳಿಗೆ ಬ್ಯಾಂಕು ದಂಡ ಹಾಕುತ್ತಿರುವ ಕಾರಣ, ಅಂತಹ ಖಾತೆಗಳಿರುವ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಇನ್ನು ಅರ್ಜಿ ಹಾಕುವವರು ಪತಿ-ಪತ್ನಿಯರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಂಬರ್, ಬ್ಯಾಂಕ್ ಅಕೌಂಟ್ ಬುಕ್, ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಇಟ್ಟುಕೊಂಡಿರಬೇಕು. ನಿಮ್ಮ ಪತಿ ಟ್ಯಾಕ್ಸ್`ದಾರರಾಗಿದ್ದು.. ಮೃತಪಟ್ಟಿದ್ದರೂ, ಸರ್ಕಾರಿ ನೌಕರಿಯಲ್ಲಿದ್ದು ಮೃತಪಟ್ಟಿದ್ದರೂ, ಡೈವೋರ್ಸ್ ಆಗಿದ್ದರೂ, ಅದಕ್ಕೆ ಸಂಬಂಧಪಟ್ಟ ದಾಖಲೆ ಕೊಟ್ಟರೆ ಅಂತಹ ಮಹಿಳೆಯರಿಗೂ ಅರ್ಹತೆ ಸಿಗಲಿದೆ. ಎಲ್ಲಕ್ಕಿಂತಲೂ ಮೊದಲಿಗೆ ನಕಲಿ ಆಪ್`ಗಳಿವೆ. ಅವುಗಳ ಬಗ್ಗೆ ಹುಷಾರಾಗಿರಿ. ದುಡ್ಡು ಕಳ್ಕೊಂಡು ಆಮೇಲೆ ಸಿಎಂ ಸಿದ್ದರಾಮಯ್ಯರನ್ನು (Cm Siddaramaiah) ಬಯ್ಕೊಂಡು ಕೂರಬೇಡಿ.



