ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ನೋಂದಣಿ ಸ್ಟಾರ್ಟ್ ಆಗಿದೆ. ಎರಡು ದಿನಕ್ಕೆ ರಿಜಿಸ್ಟರೇಷನ್ ಮಾಡಿಸಿಕೊಂಡವರ ಸಂಖ್ಯೆ ಎರಡೇ ದಿನಕ್ಕೆ 8.8 ಲಕ್ಷ. ಮೊದಲ ದಿನ ಸರ್ವರ್ ಸಮಸ್ಯೆಯಿಂದ ತಿಣುಕಾಡಿದ್ದ (Gruhalakshmi Scheme) ಗೃಹಲಕ್ಷ್ಮಿಗೆ ಎರಡನೇ ದಿನ ವೇಗ ಬಂದಿದೆ. ಒಂದೇ ದಿನಕ್ಕೆ ಬರೋಬ್ಬರಿ 7.77 ಲಕ್ಷ ಮಂದಿ ಮಹಿಳೆಯರು ನೋಂದಣಿ ಮಾಡಿದ್ದಾರೆ. ಒಂದೇ ದಿನ ಲಕ್ಷಾಂತರ ಮಂದಿ ನೋಂದಣಿಗೆ ಮುಗಿಬಿದ್ದಿದ್ದರಿಂದ ರಾಜ್ಯದ ಹಲವೆಡೆ ಸರ್ವರ್ (Sever Problem) ಸಮಸ್ಯೆ ಉಂಟಾಗಿ ಜನರು ಪರದಾಡುವಂತಾಯಿತು. ಆದರೆ ಮೊದಲನೇ ದಿನದ ಸರ್ವರ್ (Sever Problem) ಸಮಸ್ಯೆಗೆ ಹೋಲಿಸಿಕೊಂಡರೆ ಇದು ಏನೇನೂ ಅಲ್ಲ ಎನ್ನುವಂತಿತ್ತು.
ಆದರೆ, ಸಮಸ್ಯೆಗಳು ಇನ್ನೂ ಇವೆ. ಇ-ಆಡಳಿತ ಇಲಾಖೆಯಿಂದ ಯಾರ ಮೊಬೈಲ್ಗಳಿಗೆ ನೋಂದಣಿ ಸಮಯ ಹಾಗೂ ಸ್ಥಳದ ಸಂದೇಶ ಬಂದಿರುತ್ತದೆಯೋ ಅವರು ಸಂಬಂಧಪಟ್ಟಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸಂದೇಶ ಬಾರದಿದ್ದರೆ 1902ಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯ ಸಂದೇಶ ಕಳುಹಿಸುವ ಮೂಲಕ ಸೇವಾ ಕೇಂದ್ರ ಹಾಗೂ ನೋಂದಣಿ ಸಮಯದ ಸಂದೇಶ ಪಡೆಯಲು ಸ್ಪಷ್ಟವಾಗಿ ಸೂಚನೆ ನೀಡಿತ್ತು. ಈ ಮಾಹಿತಿ ಬಹುತೇಕರಿಗೆ ತಲುಪದ ಹಿನ್ನೆಲೆಯಲ್ಲಿ ಶುಕ್ರವಾರವೂ ಬೆಳಗ್ಗೆಯಿಂದ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ (Gruhalakshmi Scheme) ನೋಂದಣಿಗೆ ಹಾಜರಾದರು. ಹೀಗಾಗಿ ಬೆಂಗಳೂರು ಒನ್ (Bengaluru one) , ಕರ್ನಾಟಕ ಒನ್ (Karnataka one) , ಗ್ರಾಮ ಒನ್ (Grama one), ಬಾಪೂಜಿ ಸೇವಾ ಕೇಂದ್ರ (Bapuji Seva kendra) ಸೇರಿ 11,000 ಸೇವಾ ಕೇಂದ್ರಗಳಲ್ಲಿ ದಿನಕ್ಕೆ 60 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿದ್ದರೂ, ನಿಗದಿತ ಸಂಖ್ಯೆಗಿಂತ ಹೆಚ್ಚು ಜನದಟ್ಟಣೆ ಉಂಟಾಯಿತು. ಅನಿವಾರ್ಯವಾಗಿ ಮೆಸೇಜು ಬಾರದವರಿಗೂ ನೋಂದಣಿ ಮಾಡಿಕೊಟ್ಟಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಉಂಟಾಯಿತು.
ಇನ್ನು ಹಲವರಿಗೆ ಇಲಾಖೆಯಿಂದ ಸಂದೇಶ ಬಂದಿದ್ದರೂ ಸಂದೇಶದಲ್ಲಿರುವ ವಿಳಾಸ ಯಾವುದು ಎಂದೇ ಗೊತ್ತಿರಲಿಲ್ಲ. ಹೀಗಾಗಿ ವಿಳಾಸ ಹುಡುಕಿಕೊಂಡು ಅಲೆಯುವ ಪಡಿಪಾಟಲು ಎದುರಾಯಿತು.
ಗೃಹಜ್ಯೋತಿ ಯೋಜನೆಯಡಿ ಆರ್.ಆರ್. ಸಂಖ್ಯೆ ನಮೂದಿಸಿದರೆ ಎಲ್ಲಾ ವಿವರಗಳು ಬರುತ್ತಿದ್ದವು. ಅಲ್ಲಿ ಸಿದ್ಧವಾದ ಮೆಕಾನಿಸಂ ಇತ್ತು. ಆದರೆ ಗೃಹ ಲಕ್ಷ್ಮಿ ಯೋಜನೆ ಇದೇ ಮೊದಲ ಬಾರಿಗೆ ಜಾರಿ ಮಾಡುತ್ತಿರುವುದರಿಂದ ಪ್ರಾರಂಭಿಕ ಗೊಂದಲಗಳು ಸಹಜ. ಆದ್ಯಾಗ್ಯೂ ಎಲ್ಲಾ ಸಿದ್ಧತೆಗಳೊಂದಿಗೆ ಯಾವುದೇ ಸಮಸ್ಯೆ ಇಲ್ಲದೆ ನೋಂದಣಿ ಮಾಡಲು ಯತ್ನಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಂದೇಶ ಇಲ್ಲದೆ ಬಂದವರಿಗೂ ಆದ್ಯತೆ ಮೇರೆಗೆ ಪರಿಗಣಿಸಿ ನೋಂದಣಿ ಮಾಡುವಂತೆ ತಿಳಿಸಲಾಗಿದೆ.
ಹಾಗಾದರೆ ಸಮಸ್ಯೆ ಏನು..?
ಪತಿಯ ಆಧಾರ್ ಕಾರ್ಡ್ ಕಡ್ಡಾಯವೇ ಸಮಸ್ಯೆ
ವಿಧವೆಯರಿಗೆ ಹಾಗೂ ಡೈವೋರ್ಸ್ ಕೊಟ್ಟವರಿಗೆ ಕೂಡಾ ಯೋಜನೆ ಲಭ್ಯ ಎನ್ನಲಾಗಿತ್ತು. ಆದರೆ ಗಂಡನ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಎನ್ನುವುದು ಕಡ್ಡಾಯವಾದ್ದರಿಂದ ಜನ ಪರದಾಡುವಂತಾಗಿದೆ. ಪತಿ ಸತ್ತು ಹಲವು ವರ್ಷಗಳಾಗಿರುತ್ತವೆ. ಆಧಾರ್ ಕಾರ್ಡ್ ಕೂಡಾ ಇಲ್ಲದ ಸಮಯದಲ್ಲಿ ಮೃತಪಟ್ಟಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಲೋಕಲ್ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಅಷ್ಟೇ ಅಲ್ಲ, ಡೈವೋರ್ಸ್ ಪಡೆದಿದ್ದವರು ಏನು ಮಾಡಬೇಕು ಎಂಬ ಬಗ್ಗೆ, ಯಾವ ದಾಖಲೆ ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನು ಮದುವೆಯಾಗದೇ ಉಳಿದವರ ಸಮಸ್ಯೆಯೇ ಬೇರೆ. ಪತಿಯ ಆಧಾರ್ ಕಾರ್ಡ್ ಕಡ್ಡಾಯ ಎಂಬ ಅಂಶವೇ ಹಲವರನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗೆ ಹೋಗುವಂತೆ ಮಾಡಿದೆ.
ದೇವದಾಸಿಯರ ಸಮಸ್ಯೆಯೇ ಬೇರೆ..
ದೇವದಾಸಿಯ ಕರಾಳತೆಗೆ ತುತ್ತಾದವರಿಗೂ ಆಧಾರ್ ಕಡ್ಡಾಯವಾಗಿದೆ. ಗಂಡನೇ ಇಲ್ಲದಿರುವಾಗ ಗಂಡನ ಆಧಾರ್ ಕಾರ್ಡ್ ತರುವುದಾದರೂ ಎಲ್ಲಿಂದ..? ದೇವದಾಸಿಯರಿಗೆ ಪತಿಯ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದರೂ, ಇನ್ನೂ (CM Siddaramaiah) ಸರ್ಕಾರದ ಅಧಿಕೃತ ಆದೇಶ ಬಂದಿಲ್ಲ.
ತೃತೀಯಲಿಂಗಿಗಳ ಸಮಸ್ಯೆ ಇದಕ್ಕಿಂತ ವಿಭಿನ್ನ. ಅವರನ್ನು ಮಹಿಳೆಯರು ಎಂದು ಗುರುತಿಸಬೇಕು, ಅಷ್ಟೆ.
ಸರ್ವರ್ ಸಮಸ್ಯೆಯ ಜೊತೆಜೊತೆಗೆ ಹೊಸದಾಗಿ ಹುಟ್ಟಿರುವ ಈ ಸಮಸ್ಯೆಗಳನ್ನೂ ಸರ್ಕಾರ (Lakshmi Hebbalkar) ನಿಭಾಯಿಸಬೇಕಾದ ತುರ್ತು ಅಗತ್ಯವಂತೂ ಇದೆ.



