ಗೃಹಜ್ಯೋತಿ (Gruhajyothi). ಇನ್ನು ಮುಂದೆ ಮನೆಯಲ್ಲಿ 200 ಯುನಿಟ್`ವರೆಗೆ (Vidyuth) ವಿದ್ಯುತ್ ಫ್ರೀ. ಫ್ರೀ.. ಫ್ರೀ… ಎಂದು ಘೋಷಿಸಿಯೇ ಅಧಿಕಾರಕ್ಕೆ ಬಂದಿದ್ದು ಸಿದ್ದರಾಮಯ್ಯ (CM Siddaramaiah). ಡಿಕೆ ಶಿವಕುಮಾರ್ (DKShivakumar) ಮತ್ತು ಸಿದ್ದರಾಮಯ್ಯ ಇಬ್ಬರೂ ಸೇರಿ ಸಹಿ ಹಾಕಿ, ಗ್ಯಾರಂಟಿ ಕಾರ್ಡ ಹಂಚಿದ್ದರು. ಗೃಹಜ್ಯೋತಿ (Gruhajyothi) ಅಪ್ಲಿಕೇಷನ್ ಪಡೆದು, ಈಗ ಬಿಲ್ ಕೂಡಾ ಕೊಟ್ಟಿದ್ದಾರೆ ಹಾಗೂ ಕೊಡುತ್ತಿದ್ದಾರೆ. ಅದರೆ ಇದರ ನಡುವೆ ಒಂದಿಷ್ಟು ಶಾಕ್ಸ್ ಸಿಕ್ಕಿವೆ.
ಬಹುತೇಕ ಫಲಾನುಭವಿಗಳು ಫ್ರೀ ಬಿಲ್ ನಿರೀಕ್ಷೆಯಲ್ಲಿದ್ದರು. ಆದ್ರೆ ಕೆಲವರಿಗೆ ಮಾತ್ರ ಬೆಸ್ಕಾಂ ಸಿಬ್ಬಂದಿ ಬಿಲ್ ಕೈಗಿಟ್ಟಿದ್ದು ಶಾಕ್ ಆಗಿದ್ದಾರೆ. ಗೃಹ ಜ್ಯೋತಿ ಯೋಜನೆಗೆ (Gruhajyothi) ಅಪ್ಲೈ ಮಾಡಿದಾಗಿನಿಂದ ಕೆಲವು ಫಲಾನುಭವಿಗಳು ಉಚಿತ ಕರೆಂಟ್ ಅಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದ್ದು, ಜುಲೈ ತಿಂಗಳ ಬಿಲ್ ಶೂನ್ಯ ಅಂದವರಿಗೆ 200 ಯೂನಿಟ್ (200 units) ಹೆಚ್ಚುವರಿ ಬಿಲ್ ಬೆಸ್ಕಾಂ ಸಿಬ್ಬಂದಿ ಕೈಗಿಟ್ಟಿದ್ದಾರೆ. ಸರ್ಕಾರದ 200 ಯೂನಿಟ್ ಗಿಂತ ಹೆಚ್ಚಾಗಿ ಯೂನಿಟ್ ಬಳಕೆ ಹಿನ್ನಲೆ ಬಿಲ್ ನೀಡಿದ್ದು, ಈಗ ಫಲಾನುಭವಿಗಳು ಮಾತ್ರ ನಾವು ಅಷ್ಟು ಬಳಸೇ ಇಲ್ಲ ಮೀಟರ್ ಸರಿ ಇಲ್ಲ ಎಂದು ಹೊಸ ವರಸೆ ಶುರುಮಾಡಿಕೊಂಡಿದ್ದಾರಂತೆ. ಕೆಲ ಫಲಾನುಭವಿಗಳು ನಮ್ಮ ಮೀಟರ್ ಸರಿ ಇಲ್ಲ. ಹೀಗಾಗಿ, ನಮಗೆ 200 ಯೂನಿಟ್ಗಿಂತ ಜಾಸ್ತಿ ಬಿಲ್ ಬಂದಿದೆ ಅಂತಿದ್ದಾರೆ. ಸರ್ಕಾರದ 200 ಗ್ಯಾರಂಟಿಗಿಂತ ಅಧಿಕ ಕರೆಂಟ್ ಬಳಕೆ ಮಾಡಿಕೊಂಡು ನಮಗೆ ಗೃಹ ಜ್ಯೋತಿ ಯೋಜನೆ ಸಿಕ್ಕಿಲ್ಲ.. ಜಿರೊ ಬಿಲ್ ಬದಲಾಗಿ ನಮಗೆ ಬಿಲ್ ಬಂದಿದೆ ಎಂದು ಕೆಲವು ಗ್ರಾಹಕರು ಹೊಸ ವರಸೆ ಶುರು ಮಾಡಿದ್ದಾರೆ. ಸರ್ಕಾರ ಗೃಹ ಜ್ಯೋತಿ ಸ್ಕೀಂನಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಸರಾಸರಿಯ ಮಾನದಂಡ ಫಿಕ್ಸ್ ಮಾಡಿದೆ. ಸರಾಸರಿ ಬಳಕೆಗೆ ಶೇ.10 ಪರ್ಸೆಂಟ್ ಹೆಚ್ಚುವರಿಗೆ ಜಿರೊ ಬಿಲ್ (ZERO Bill) ನೀಡುತ್ತಿದೆ.
ಸರಾಸರಿಗಿಂತ ಹೆಚ್ಚು ಬಳಕೆದಾರರಿಗೆ ಯೂನಿಟ್ ಗೆ 7 ರೂನಂತೆ ದರ ಚಾರ್ಚ್ ಮಾಡುತ್ತಿದೆ. ಆದ್ರೆ, 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಳ್ಳುವವರಿಗೆ ಸಂಪೂರ್ಣ ಬಿಲ್ ನೀಡಲಾಗುತ್ತಿದೆ. ಆದ್ರೆ ಕೆಲವು ಗ್ರಾಹಕರು ಉಚಿತ್ ವಿದ್ಯುತ್ ಬೆನ್ನಲೆ ಕಳೆದ ತಿಂಗಳು ಎರಾಬಿರಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದು 200 ಯೂನಿಟ್ ಕ್ರಾಸ್ ಮಾಡಿದ್ದಾರೆ. ಸರಾಸರಿ ಟಾರ್ಗೆಟ್ ದಾಟಿ 50 ರಿಂದ 70 ಯೂನಿಟ್ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಈಗ ಬಿಲ್ ಬರುತ್ತಿದ್ದಂತೆ ಗೃಹ ಜ್ಯೋತಿ ಉಚಿತ ಸ್ಕೀಂ ಸಿಕ್ಕಿಲ್ಲ ನಾವು ವಿದ್ಯುತ್ ಬಳಸೇ ಇಲ್ಲ. ನಮಗೆ ಸಂಪೂರ್ಣ 200 ಯೂನಿಟ್ ಬಿಲ್ ಬಂದಿದೆ ಅಂತಿದ್ದಾರಂತೆ.
ಇತ್ತ ಶೂನ್ಯ ಬಿಲ್ (ZERO Bill) ಪಡೆದವರು ಖುಷಿಯಾಗಿದ್ದಾರೆ. ಇನ್ನು ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಬಿಲ್ ಬಂದಿದೆ. ಅಂದರೆ 100ರೂ..200ರೂ.. ಬಿಲ್ ಬಂದಿದೆ. ಇದಕ್ಕೆ ಕಾರಣ ಬಾಕಿ ಉಳಿಸಿಕೊಂಡಿರುವ ಬಿಲ್ ಎನ್ನುವುದು ಎಸ್ಕಾಂ ವಿವರಣೆ.
ಆದರೆ ಮೂಲಗಳ ಪ್ರಕಾರಣ 196 ಯುನಿಟ್ ದಾಟಿದರೆ ಸಂಪೂರ್ಣ ಬಿಲ್ ನೀಡುತ್ತಿದ್ದಾರೆ ಎನ್ನಲಾಗಿದೆ. 180 ಯುನಿಟ್ ಇದ್ದವರಿಗೂ ಪೂರಾ ಬಿಲ್ ಬಂದಿದೆ. ಕೆಲವರ ಅರ್ಜಿ ಸ್ವೀಕಾರವಾಗಿರುವ ಮಾಹಿತಿ ಇದ್ದರೂ, ಮೀಟರ್ ರೀಡಿಂಗಿನವರಿಗೆ ಅಪ್`ಡೇಟ್ ಆಗಿಲ್ಲ. ಅಲ್ಲದೆ ಇನ್ನೂ ಸುಮಾರು ಒಂದು ಕೋಟಿಗೂ ಹೆಚ್ಚು ಜನ ಅರ್ಜಿಯನ್ನೇ ಸಲ್ಲಿಸಿಲ್ಲ. ಒಟ್ಟಿನಲ್ಲಿ ಝೀರೋ ಬಿಲ್ ಬಂದವರು ಖುಷಿಯಾಗಿದ್ದರೆ, 200 ಯುನಿಟ್`ಗಿಂತ ಕಡಿಮೆ ಬಳಸಿದ್ದರೂ ಬಿಲ್ ಬಂದವರು ಶಾಪ ಹಾಕುತ್ತಿದ್ದಾರೆ. ಮಿಶ್ರ ಪ್ರತಿಕ್ರಿಯೆ.



