ಉಪೇಂದ್ರ (Upendra) ಈ ರಿಯಲ್ ಸ್ಟಾರ್`ಗೀಗ (Real Star) ಇದ್ದಕ್ಕಿದ್ದಂತೆ ಸಂಕಷ್ಟ ಎದುರಾಗಿದೆ. ವಿಷಯ ಯಾವುದೇ ಇರಲಿ..ಬುದ್ದಿವಂತಿಕೆಯಿಂದ (Buiddivantha) ಮಾತನಾಡುತ್ತಾ.. ಯಾವುದಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಉಪೇಂದ್ರ.. ಈ ಬಾರಿ ಸಿಕ್ಕಿಕೊಂಡುಬಿಟ್ಟಿದ್ದಾರೆ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯೇ ಸುಳ್ಳಾಗುವಂತೆ ಮಾತೇ ಅವರಿಗೆ ಪಾಶವಾಗಿದೆ. ಒಂದು ಕಡೆ ಉಪೇಂದ್ರ ಅರೆಸ್ಟ್ ಮಾಡುವಂತೆ ಒತ್ತಡ ಹೆಚ್ಚುತ್ತಿದೆ. ಆದರೆ ಅರೆಸ್ಟ್ ಆಗುವ ಸಾಧ್ಯತೆ ಇಲ್ಲ. ಅಟ್ರಾಸಿಟಿ (ಜಾತಿ ನಿಂದನೆ) (Atrocity)ಕೇಸುಗಳಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಹಂತವನ್ನೂ ದಾಟಿದ ಅಧಿಕಾರಿಗಳೇ ವಿಚಾರಣೆ ನಡೆಸಬೇಕು. ಆದರೆ.. ಕಥೆ ಬೇರೆಯೇ ಇದೆ.
ಉಪೇಂದ್ರ (Upendra) ಅವರೇನೋ ಊರು ಇದ್ದ ಕಡೆ *** ಇರುತ್ತೆ ಎಂಬ ಗಾದೆಯನ್ನು ಹೇಳಿದ್ದಕ್ಕೆ ವಿವಾದವಾಗಿ, ಮೂರ್ಮೂರು ಕೇಸ್ ಆಗಿ, ಒಂದು ಕೇಸಿಗೆ ತಡೆಯಾಜ್ಞೆ ತಂದಿದ್ದಾರೆ. ಆದರೆ ಸಂಕಷ್ಟ ಮುಗಿದಿಲ್ಲ. ಸ್ಟೇ ಇರೋದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ (Channammanakere Achchukattu) ಒಂದು ಎಫ್‍ಐಆರ್‍ಗೆ (FIR) ಮಾತ್ರ. ಇನ್ನೆರಡು ಕೇಸ್ ಇನ್ನೂ ಹಾಗೆಯೇ ಇವೆ. ಆ ಕೇಸಿನ ಬಗ್ಗೆಯೂ ನಟ ಉಪೇಂದ್ರ ಹೈಕೋರ್ಟ್‍ಗೆ (Highcourt) ಅರ್ಜಿ ಹಾಕಿದ್ದಾರೆ.
ನಾನು ಆಗಸ್ಟ್ 13ರ ಸಂಜೆ ಉಪೇಂದ್ರ ವಿರುದ್ಧ ದೂರು ನೀಡಿದ್ದೆ. ಕೋರ್ಟ್ ಮೂಲಕ ಸ್ಟೇ ತಂದಿರುವುದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಗೆ. ನಾನು ನೀಡಿರುವ ದೂರಿಗೆ ಯಾವುದೇ ಸ್ಟೇ ತಂದಿಲ್ಲ. ಹಲಸೂರು ಗೇಟ್ ಠಾಣೆಯಲ್ಲಿನ ಕೇಸ್ಗೆ ಸ್ಟೇ ಇಲ್ಲ. ಉಪೇಂದ್ರರನ್ನ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ (Karnataka Ranadheera pade) ಕರ್ನಾಟಕ ರಣಧೀರ ಪಡೆಯ (Bhairappa Hareesh) ಭೈರಪ್ಪ ಹರೀಶ್.
ಆದರೆ ಪೊಲೀಸರು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಒಂದು ಎಫ್‍ಐಆರ್‍ಗೆ ಕೋರ್ಟ್ ತಡೆ ನೀಡಿರುವುದರ ಹಿನ್ನೆಲೆಯಲ್ಲಿ, ಈ ಪ್ರಕರಣದ ಬಗ್ಗೆ ಕಾದು ನೋಡುವ ಹೆಜ್ಜೆ ಇಡುತ್ತಿದ್ದಾರೆ.
ಅರೆಸ್ಟ್ ಆಗದಂತೆ ತಡೆಯುತ್ತಿರುವ ಅಂಶಗಳೇನು?
ಉಪೇಂದ್ರ ಅವರನ್ನು ಅರೆಸ್ಟ್ ಮಾಡದಂತೆ ತಡೆಯುತ್ತಿರುವುದು ಯಾವುದು? ಮೊದಲನೆಯದು ಹೈಕೋರ್ಟ್ ಕೊಟ್ಟಿರುವ ಮಧ್ಯಂತರ ತಡೆಯಾಜ್ಞೆ. ತಡೆ ಕೊಟ್ಟಿರುವುದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪ್ರಕರಣಕ್ಕೇ ಆದರೂ, ವಿಷಯ ಒಂದೇ. ಅಕಸ್ಮಾತ್ ಕೋರ್ಟ್ ಇಷ್ಟೂ ಅರ್ಥ ಆಗಲ್ವೇನ್ರಿ ಎಂದು ಪ್ರಶ್ನೆ ಮಾಡಿಬಿಟ್ಟರೆ ಎಂಬ ಆತಂಕ ಪೊಲೀಸರದ್ದು.
ಇನ್ನೊಂದು ಕಾರಣವೆಂದರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (SS Mallikarjun) ಅವರ ಪ್ರಕರಣ. ಅವರೂ ಕೂಡಾ ಸೇಮ್ ಟು ಸೇಮ್ ಉಪೇಂದ್ರ ಹೇಳಿದಂತೆಯೇ ಹೇಳಿದ್ದಾರೆ. ಕೇಸ್ ಆಗಿದೆ. ಎಫ್‍ಐಆರ್ ಆಗಿಲ್ಲ. ಆದರೆ ಮಲ್ಲಿಕಾರ್ಜುನ್ (SS Mallikarjun) ಹಾಗೂ ಉಪೇಂದ್ರ ಪ್ರಕರಣಗಳು ವಿಷಯ ಒಂದೇ ಆದರೂ, ವ್ಯಕ್ತಿಗಳು ಬೇರೆ ಬೇರೆ. ಮಲ್ಲಿಕಾರ್ಜುನ್ (SS Mallikarjun) ಹಾಲಿ ಸರ್ಕಾರದಲ್ಲಿಯೇ ಸಚಿವರಾಗಿದ್ದಾರೆ. ಹೀಗಾಗಿಯೇ ಉಪೇಂದ್ರ ವಿರುದ್ಧ ಅಬ್ಬರಿಸಿದ್ದ ಮಹದೇವಪ್ಪನವರಾಗಲೀ (HC Mahadevappa) , ಪ್ರಿಯಾಂಕ್ ಖರ್ಗೆಯವರಾಗಲೀ.. (Priyanka Kharge) ಮಾತನ್ನೇ ಆಡುತ್ತಿಲ್ಲ. ಗೃಹ ಸಚಿವ ಪರಮೇಶ್ವರ್ (Parameshwar) ಈ ಕುರಿತು ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ. ಮಲ್ಲಿಕಾರ್ಜುನ್ ಹಾಗೆ ಮಾತನಾಡಬಾರದಿತ್ತು ಎಂದಿದ್ದಾರೆ. ಆದರೆ ಮಲ್ಲಿಕಾರ್ಜುನ್ ಕ್ಷಮೆ ಕೇಳಿಲ್ಲ. ಬದಲಿಗೆ ತಾವು ಹೇಳಿದ್ದನ್ನು ತಿರುಚಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೀಗ ಮಲ್ಲಿಕಾರ್ಜುನ್ ಹೇಳಿಕೆ ಮುಳ್ಳಾಗಿ ಕಾಡುತ್ತಿದ್ದರೆ, ಅದೇ ಪ್ರಕರಣ ಉಪೇಂದ್ರ ಅವರನ್ನು ಅರೆಸ್ಟ್ ಆಗದಂತೆ ತಡೆಹಿಡಿದಿರುವ ಸಾಧ್ಯತೆಯೂ ಇದೆ.



