ಯುವ Yuva. ಯುವ ರಾಜ್ ಕುಮಾರ್ (Yuva Rajkumar) ಅಭಿನಯಿಸಿರುವ ಮೊದಲ ಸಿನಿಮಾ. ಚಿತ್ರೀಕರಣವೇ ಇನ್ನೂ ಮುಗಿದಿಲ್ಲ. ಡಿಸೆಂಬರ್ ಕೊನೆಗೆ ಬರಬೇಕಿದ್ದ ಸಿನಿಮಾ, ಮುಂದಿನ ವರ್ಷಕ್ಕೆ ಹೋಗಿದೆ. ‘ಯುವ’ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ (Hombale films) ನಿರ್ಮಾಣ ಮಾಡುತ್ತಿದೆ. ‘ಯುವ’ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿರಬೇಕಾದರೆ ಯುವ ರಾಜ್ಕುಮಾರ್ ಇನ್ನೂ ಎರಡು ಸಿನಿಮಾಗಳ ಕತೆ ಕೇಳಿ ಒಪ್ಪಿಗೆ ಸೂಚಿಸಿದ್ದಾರಂತೆ.
ಮಫ್ತಿ ಖ್ಯಾತಿಯ ಪ್ರಸ್ತುತ ಶಿವರಾಜ್ ಕುಮಾರ್ (Shiva Rajkumar) ಜೊತೆಗೆ ‘ಭೈರತಿ ರಣಗಲ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ನರ್ತನ್ Mafthi Narthan, ಯುವ ರಾಜ್ಕುಮಾರ್ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ನರ್ತನ್ ಹೇಳಿರುವ ಕಥೆ ಶಿವಣ್ಣಂಗೂ ಇಷ್ಟವಾಗಿದ್ದು, ಯುವಗೆ ಕಥೆ ಕೇಳೋಕೆ ಹೇಳಿದ್ದರಂತೆ. ಆ ಕಥೆ ಯುವಗೂ ಇಷ್ಟವಾಗಿದೆ.
ಕಥೆಯ ವಿಷಯದಲ್ಲಿ ಶಿವಣ್ಣ, ಯುವ ಅವರಿಗೆ ಫ್ರೀಡಂ ಕೊಟ್ಟಿದ್ದಾರೆ. ತನಗೆ ಕಥೆ ಇಷ್ಟವಾಯಿತು, ನಿನಗೂ ಇಷ್ಟವಾದರೆ ಮಾತ್ರ ನೋಡು ಎಂದಿದ್ದಾರಂತೆ ಶಿವಣ್ಣ. ಸದ್ಯಕ್ಕೆ ಕಥೆಯನ್ನು ಇನ್ನೊಂದು ಸ್ವಲ್ಪ ಇಂಪ್ರೂವ್ ಮಾಡುವುದಕ್ಕೆ ಯುವ ಹೇಳಿದ್ದಾರೆ ಅನ್ನೋ ಮಾಹಿತಿಯೂ ಇದೆ.
ಇನ್ನೊಂದು ಚಿತ್ರವನ್ನು ಹೆಬ್ಬುಲಿ ಕೃಷ್ಣ Hebbuli Krishna ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯಕ್ಕೆ ಹೆಬ್ಬುಲಿ ಕೃಷ್ಣ, ಅಭಿಷೇಕ್ ಅಂಬರೀಷ್ Abhishek ambareesh ಅವರಿಗಾಗಿ ಸಿನಿಮಾ ಮಾಡುತ್ತಿದ್ಧಾರೆ.
ಈ ಎರಡು ಸಿನಿಮಾಗಳಲ್ಲಿ ಒಂದು ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ Ashwini Puneeth Rajkumar ಅವರ ಪಿಆರ್ಕೆ ಪ್ರೊಡಕ್ಷನ್ಸ್ PRK productions ನಿರ್ಮಾಣ ಮಾಡಲಿದೆ ಎನ್ನಲಾಗುತ್ತಿದೆ.
ಯುವ ರಾಜ್ಕುಮಾರ್ ನಟನೆಯ ‘ಯುವ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಮುಂದಿನ ವರ್ಷ ಮಾರ್ಚ್ ತಿಂಗಳ 28ನೇ ತಾರೀಖು ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಹಿಂದೆ ಡಿಸೆಂಬರ್ 22ಕ್ಕೆ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿತ್ತು, ಆದರೆ ‘ಸಲಾರ್’ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿ ‘ಸಲಾರ್’ ಅನ್ನು ಡಿಸೆಂಬರ್ 22ಕ್ಕೆ ಬಿಡುಗಡೆ ಮಾಡಲು ಹೊಂಬಾಳೆ ನಿರ್ಧರಿಸಿರುವ ಕಾರಣ, ‘ಯುವ’ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ.
‘ಯುವ’ ಸಿನಿಮಾವನ್ನು ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿ. ಸಿನಿಮಾವು ಕಾಲೇಜು ಯುವಕನ ಕತೆಯನ್ನು ಒಳಗೊಂಡಿದ್ದು, ಯುವ ರಾಜ್ಕುಮಾರ್ ಅವರನ್ನು ಅದ್ಧೂರಿಯಾಗಿ, ಸ್ಟೈಲಿಷ್ ಆಗಿ ತೆರೆಗೆ ಪರಿಚಯಿಸುವ ಪ್ರಯತ್ನವನ್ನು ಸಂತೋಷ್ ಆನಂದ್ರಾಮ್ ಮಾಡುತ್ತಿದ್ದಾರೆ.



