ರಾಜ್ಯ ಸರ್ಕಾರ ಸೋಮವಾರದಂದು ಅಂದರೆ ಆಗಸ್ಟ್ 14ನೇ ತಾರೀಕು ಒಂದು ಆದೇಶ ಹೊರಡಿಸಿತ್ತು. ಮುಜರಾಯಿ ದೇವಸ್ಥಾನಗಳಲ್ಲಿ (Temple) ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಸ್ಟಾಪ್ ಎಂದು ಆದೇಶ ಕೊಟ್ಟಿತ್ತು ರಾಜ್ಯ ಸರ್ಕಾರ. ಆದರೆ ಅದೇ ಆದೇಶದವನ್ನು ಶುಕ್ರವಾರ ವಾಪಸ್ ತಗೊಂಡು ಬಿಟ್ಟಿದೆ. ನಾವು ದೇವಸ್ಥಾನ (Temple) ಅಭಿವೃದ್ಧಿ ವಿರೋಧಿಗಳಲ್ಲ ಎಂದು ಹೇಳಿದೆ.
ಬಿಜೆಪಿ ಅವಧಿಯಲ್ಲಿ ದೇವಸ್ಥಾನ (Temple) ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಸರ್ಕಾರದಿಂದ 142 ಕೋಟಿ ರು. ಅನುದಾನ ಘೋಷಿಸಲಾಗಿತ್ತು. ಆ ಅನುದಾನದಲ್ಲಿ 50ಕ್ಕೂ ಹೆಚ್ಚಿನ ದೇವಸ್ಥಾನಗಳು ಮತ್ತು 150ಕ್ಕೂ ಹೆಚ್ಚಿನ ಮಠಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅನುದಾನ ಘೋಷಣೆಯಾಗಿರುವ ದೇವಸ್ಥಾನಗಳಲ್ಲಿ (Temple) ಅಭಿವೃದ್ಧಿ ಕೆಲಸಗಳು ಇನ್ನೂ ಆರಂಭವಾಗದೇ ಇದ್ದರೆ ಅಥವಾ ಕೆಲಸಗಳು ಇನೂ ಕಾಗದದ ಹಂತದಲ್ಲೇ ಇದ್ದರೆ, ತಕ್ಷಣ ಅವುಗಳನ್ನು ನಿಲ್ಲಿಸಿ ಎಂದು ಆದೇಶಿಸಲಾಗಿತ್ತು. ಕೆಲಸ ಆರಂಭವಾಗಿದ್ದರೂ, ಆ ಕಾಮಗಾರಿಗಳಿಗೆ ಕನಿಷ್ಠ ಶೇ.50ರಷ್ಟು ಅನುದಾನ ಈಗಾಗಲೇ ರಿಲೀಸ್ ಆಗಿದ್ದರೆ ಮುಂದಿನ ಕೆಲಸಗಳಿಗೆ ಅನುದಾನ ಕೊಡಬೇಕು ಎಂದು ಸೂಚನೆ ನೀಡಲಾಗಿತ್ತು. ಮಾರ್ಚ್‍ನಲ್ಲಿ ಬೊಮ್ಮಾಯಿ (Basaraja Bommai) ಮಂಡಿಸಿದ್ದ ಬಜೆಟ್, ಜಾರಿಗೆ ಬರುವುದು ಏಪ್ರಿಲ್ ತಿಂಗಳಿಗೆ. ಅದಾದ ನಂತರ ಸರ್ಕಾರ ಮತ್ತು ಸಿಎಂ ಎರಡೂ ಬದಲಾಗಿ, ಜುಲೈನಲ್ಲಿ ಸಿದ್ದರಾಮಯ್ಯ (CM Siddaramaiah) ಹೊಸ ಬಜೆಟ್ ಮಂಡಿಸಿದ್ದಾಗಿದೆ. ಬಜೆಟ್ ಮಂಡನೆಗೂ ಮೊದಲೇ ಎಲ್ಲ ಅನುದಾನ ಬಿಡುಗಡೆಗೂ ತಡೆ ಕೊಡಲಾಗಿದೆ. ಹೀಗಿರುವಾಗ ಶೇ.50ರಷ್ಟು ಅನುದಾನ ಬಿಡುಗಡೆಯಾಗಿದ್ದರೆ ಕಾಮಗಾರಿಗೆ ತೊಂದರೆಯಿಲ್ಲ ಎನ್ನುವುದೇ ಅರ್ಥ ಕಳೆದುಕೊಂಡಿತ್ತು. ಆದರೆ ಯಾವಾಗ ರಾಜ್ಯದ ಎಲ್ಲ ಮಾಧ್ಯಮಗಳಲ್ಲಿಯೂ ಇದು ಸುದ್ದಿಯಾಯಿತೋ.. ಜನರೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಕ್ಕೆ ಆಗಲೇ ಒಂದು ಕೆಟ್ಟ ಹೆಸರಿದೆ. ದೇವಸ್ಥಾನದಿಂದ ಸರ್ಕಾರಕ್ಕೆ ಕೋಟಿ ಕೋಟಿಗಳ ಲೆಕ್ಕದಲ್ಲಿ ಆದಾಯ ಬರುತ್ತದೆ. ಆದರೆ ಅದೇ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಹಣ ಕೊಡುವುದಿಲ್ಲ ಎಂಬ ಅಸಮಾಧಾನವಿದೆ. ಈ ಮಧ್ಯೆ ಇನ್ನೊಂದು ವಿವಾದ ಏಕೆ ಎಂದು ಸರ್ಕಾರ ನಾಲ್ಕೇ ದಿನಗಳಲ್ಲಿ ತಾನೇ ನೀಡಿದ್ದ ಆದೇಶವನ್ನು ವಾಪಸ್ ತೆಗೆದುಕೊಂಡಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಮುಜರಾಯಿ ಇಲಾಖೆ ಆಯುಕ್ತರ ಆದೇಶ ಗೊಂದಲಕ್ಕೆ ಕಾರಣವಾಗಿದೆಯಷ್ಟೆ. ಸರ್ಕಾರಕ್ಕೆ ದೇವಸ್ಥಾನಗಳಿಗೆ (Temple) ಮತ್ತು ಮಠಗಳಿಗೆ (Mutts) ಅನುದಾನ ನೀಡಬಾರದು ಎಂಬ ಉದ್ದೇಶವಿಲ್ಲ. ಅನುದಾನ ಕೊಟ್ಟೇ ಕೊಡುತ್ತೇವೆ. ಹೀಗಾಗಿ ಕೂಡಲೆ ಆದೇಶ ಹಿಂಪಡೆಯುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚಿಸಿ, ಹಿಂದಿನ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ತಿಳಿಸಿದರು.



