ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ 131 ಜೈಲುವಾಸ ಅನುಭವಿಸಿ ಈಗ ಹೊರಬಂದಿರು ದರ್ಶನ್ ಮತ್ತೆ ಮತ್ತೆ ತಪ್ಪು ಮಾಡ್ತಿದ್ದಾರೆ. ಏಕೆಂದರೆ ಅವರು ಇದುವರೆಗೂ ಆಪರೇಷನ್ ಮಾಡಿಸಿಕೊಂಡಿಲ್ಲ. ಮತ್ತೊಂದೆಡೆ ರೇಣುಕಾಸ್ವಾಮಿ ಕೇಸಿನಲ್ಲಿ ಎರಡನೇ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಈಗಾಗಲೇ ಸುಮಾರು ಎರಡು ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರುವ ಪೊಲೀಸರಿಗೆ ಇನ್ನಷ್ಟು ಮಾಹಿತಿ, ಸಾಕ್ಷಿಗಳನ್ನು ಸಿಕ್ಕಿದ್ದು, ಪ್ರಕ್ರಿಯೆ ಮುಗಿದ ಬಳಿಕ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ಅಡಿಷನಲ್ ಚಾರ್ಜ್‌ಶೀಟಿನಲ್ಲಿ ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ತನ್ನ ಗ್ಯಾಂಗ್ನೊಂದಿಗೆ ನಿಂತಿರೋ ಫೋಟೋ ರಿಕವರಿ ಮಾಡಿದ್ದಾರೆ. ಶೆಡ್‌ನಲ್ಲಿ ಎಲ್ಲರ ಜೊತೆ ನಿಂತಿರೋ ದರ್ಶನ್ ನಿಂತಿರುವ ಫೋಟೋ ಇದೆ ಎನ್ನಲಾಗಿದೆ.
ಈ ಫೋಟೋದಲ್ಲಿ ದರ್ಶನ್ ಬ್ಲೂ ಕಲರ್ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಆ ಫೋಟೋವನ್ನು ಪುನೀತ್ ಡಿಲೀಟ್ ಮಾಡಿದ್ದ. ಆದರೆ ಪೊಲೀಸರು ಫೋಟೋವನ್ನು ರಿಟ್ರೀವ್ ಮಾಡಿ ಎರಡನೇ ಚಾರ್ಜ್ಶೀಟ್ನಲ್ಲಿ ಸೇರಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಘಟನೆ ನಡೆದ ಸ್ಥಳದ ಫೋಟೋವನ್ನೂ ಕೂಡಾ ರಿಕವರಿ ಮಾಡಿದ್ದು, ಒಟ್ಟು ಎರಡು ಫೋಟೋಗಳನ್ನ ಚಾರ್ಜ್ಶೀಟ್ನಲ್ಲಿ ಸೇರಿಸಲಾಗಿದೆ. ಈ ಮೂಲಕ ದರ್ಶನ್ ವಿರುದ್ಧದ ಕೇಸ್ ಇನ್ನಷ್ಟು ಸ್ಟಾಂಗ್ ಆಗಿದೆ.
ಇನ್ನು ದರ್ಶನ್ ಅವರ ಜಾಮೀನು ಅರ್ಜಿ (ಮಧ್ಯಂತರ ಜಾಮೀನು ಅಲ್ಲ, ರೆಗ್ಯುಲರ್ ಬೇಲ್ ಅರ್ಜಿ) ವಿಚಾರಣೆ ಮುಂದೂಡಿಕೆಯಾಗಿದೆ. ಜೊತೆಯಲ್ಲೇ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನೂ ಮುಂದೂಡಲಾಗಿದೆ.
ಈ ಮಧ್ಯೆ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದಿರುವುದೇ ಬೆನ್ನು ಹುರಿ ಶಸ್ತ್ರ ಚಿಕಿತ್ಸೆಗೆ. ಆದರೆ ಆಪರೇಷನ್ ಮಾಡಿಸಿಕೊಳ್ಳೋಖೆ ಒಪ್ಪಿಲ್ಲ ಎನ್ನಲಾಗುತ್ತಿದೆ. ಬೇಕಂತಲೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದನ್ನು ಮುಂದಕ್ಕೆ ಹಾಕಿದ್ದಾರೆಂಬ ಟೀಕೆಗಳು ಕೂಡ ಕೇಳಿ ಬಂದಿವೆ. ಈ ಬಗ್ಗೆ ಕಮಿಷನರ್ ನಂತರ ಗೃಹ ಸಚಿವ ಪರಮೇಶ್ವರ್ ಕೂಡಾ ಹೇಳಿಕೆ ನೀಡಿದ್ದು, ಜಾಮೀನು ಅವಧಿ ಮುಗಿದ ಬಳಿಕ ಅವರು ಜೈಲಿಗೆ ಹೋಗಬೇಕಾಗುತ್ತದೆ. ಮತ್ತೆ ಅವರು ಜಾಮೀನು ಕೇಳುತ್ತಾರೇನೋ ಗೊತ್ತಿಲ್ಲ. ಅವರಿಗೆ ಜಾಮೀನು ಕೊಡಬಾರದು ಅಂತ ನಾವು ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡುತ್ತೇವೆ. ಆ ಪ್ರಕ್ರಿಯೆ ನಡೆದಿದೆ. ಇನ್ನೂ ಕೆಲವು ಸಾಕ್ಷಿ ಕಲೆ ಹಾಕುವುದು ಬಾಕಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಅಡಿಷ್ನಲ್ ಚಾರ್ಜ್‌ಶೀಟ್ ಸಲ್ಲಿಕೆ ಆಗುತ್ತದೆ’ ಎಂದು ಹೇಳಿದ್ದಾರೆ.



