ಅವರು ರಮೇಶ್ (Actor Ramesh Aravind). ಮಿಸ್ಟರ್ ಪರ್ಫೆಕ್ಟ್ (Mister Perfect). ಇವರು ಗಣೇಶ್ (Actor golden star Ganesh). ಗೋಲ್ಡನ್ ಸ್ಟಾರ್. ಇಬ್ಬರಿಗೂ ಒಂದು ಹೋಲಿಕೆ ಇದೆ. ಇಬ್ಬರೂ ಸ್ಟ್ರಗಲ್ ಮಾಡಿಕೊಂಡೇ ಸ್ಟಾರ್ ಆದವರು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಕಿರುತೆರೆಯಲ್ಲಿ ಮಿಂಚಿ, ಆಮೇಲೆ ಸ್ಟಾರ್ ಆದವರು. ಆಮೇಲೆ ಇಬ್ಬರೂ ನಿರ್ಮಾಪಕರೂ ಆದರು. ನಿರ್ದೇಶಕರೂ ಆದರು. ಅಂತಹ ರಮೇಶ್ ಅರವಿಂದ್ ಮತ್ತು ಗಣೇಶ್ ಮತ್ತೊಮ್ಮೆ ಒಟ್ಟಿಗೇ ನಟಿಸುತ್ತಾರೆ ಎನ್ನುವುದೇ ಬಿಗ್ ನ್ಯೂಸ್. ಮತ್ತೊಮ್ಮೆಯಾ.. ಯಾವಾಗ ಇಬ್ಬರೂ ಒಟ್ಟಿಗೇ ನಟಿಸಿದ್ರು ಅಂತಾ ಕೇಳಬೇಡಿ.
ಸುಂದರಾಂಗ ಜಾಣ (Sundaranga Jana) ಅನ್ನೋ ಸಿನಿಮಾ ನೆನಪಿದೆ ತಾನೇ.. ಗಣೇಶ್-ಶಾನ್ವಿ ಶ್ರೀವಾತ್ಸವ್-ದೇವರಾಜ್-ರಂಗಾಯಣ ರಘು-ರವಿಶಂಕರ್ (Actor Ramesh Aravind-Ganesh-Shanvi Shreevatsav) ಅಭಿನಯದ ಸಿನಿಮಾ. ಆ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿದ್ದರು. ಆದರೆ ನಟಿಸಿರಲಿಲ್ಲ, ಬದಲಿಗೆ ಕೇವಲ ಡೈರೆಕ್ಟರ್ ಆಗಿದ್ದರು. ಈಗ ಗಣೇಶ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರನ್ನೂ ಒಟ್ಟಿಗೇ ಸೇರಿಸಿ, ನಟಿಸುವಂತೆ ಮಾಡಿರುವುದು ನಿರ್ಮಾಪಕ ವಿಖ್ಯಾತ್. ನಿರ್ದೇಶಕರೂ ಅವರೇ.
ಪುಷ್ಪಕ ವಿಮಾನ (Pushpaka Vimana), ಇನ್ಸ್ಪೆಕ್ಟರ್ ವಿಕ್ರಮ್(Inspector Vikram) , ಮಾನ್ಸೂನ್ ರಾಗ (Mansoon Raaga) ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ (Vikhyath) ಇದೇ ಮೊದಲ ಬಾರಿಗೆ ನಿರ್ದೇಶನಕ್ಕೂ ಇಳಿದಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಕೂಡ ಅವರದ್ದೇ. ರಮೇಶ್ ಮತ್ತು ಗಣೇಶ್ ಕಾಂಬಿನೇಷನ್ನ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ಯಾರೆಲ್ಲ ಈ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ? ಯಾವಾಗ ಈ ಸಿನಿಮಾ ಶುರುವಾಗಲಿದೆ ಎಂಬೆಲ್ಲ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಅಂದಹಾಗೆ, ಇದು ರಮೇಶ್ ನಟನೆಯ 107ನೇ ಸಿನಿಮಾ ಹಾಗೂ ಗಣೇಶ್ ನಟನೆಯ 42ನೇ ಸಿನಿಮಾ. ಇದರ ಜೊತೆ ರಮೇಶ್, ದೈಜಿ (Daiji) ಅನ್ನೋ ಇನ್ನೊಂದು ಸಿನಿಮಾನೂ ಒಪ್ಪಿಕೊಂಡಿದ್ದಾರೆ. ದೈಜಿ, ಅಪ್ಪಟ ಹಾರರ್ (Horror movies) ಕಥೆ. ನಡೆಯೋದೆಲ್ಲ ಅಮೆರಿಕದಲ್ಲಿ..!
ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ರ ಯಶಸ್ಸಿನ ನಂತರ ಮತ್ತೊಂದು ಚಿತ್ರಕ್ಕೆ ನಟ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ‘ದೈಜಿ’ ಎಂದು ಟೈಟಲ್ ಇಡಲಾಗಿದೆ.
ದೈಜಿ ಎಂದರೆ ಕೊಂಕಣಿಯಲ್ಲಿ ರಕ್ತ ಸಂಬಂಧ ಎಂದರ್ಥ. ಜಪಾನಿ ಭಾಷೆಯಲ್ಲಿ ಕಾಳಜಿ ವಹಿಸಬೇಕಾದ ವಿಚಾರ ಎಂದರ್ಥ. ಚಿತ್ರದ ಕಥೆಯಲ್ಲಿ ನಿರ್ಮಾಪಕ ರವಿ ಕಶ್ಯಪ್ ಅವರ ಪಾತ್ರವೂ ಇದೆ. ನಿರ್ಮಾಪಕರು ವಿವರಿಸಿದ್ದ ಘಟನೆಗಳನ್ನೇ ಇಟ್ಟುಕೊಂಡು ಚೆಂದದ ಮಾಡಿದ್ದಾರೆ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ. ಇನ್ನು ವಿಭಾ ಕಶ್ಯಪ್ ಬ್ಯಾನರ್ ಕೂಡಾ ಖ್ಯಾತಿ ಪಡೆದಿರುವ ಸಂಸ್ಥೆ. , ಪವನ್ ಕುಮಾರ್ ಅವರ ಲೂಸಿಯಾ, ಡಾಲಿ ಧನಂಜಯ್ ಅವರ ಬದ್ಮಾಷ್, ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೆಚ್ಚುಗೆ ಗಳಿಸಿದ್ದ ಕಿರು ಚಿತ್ರ ಸುಳ್ಳೇ ಸತ್ಯ ಇವೆಲ್ಲವೂ ನಿರ್ಮಾಣವಾಗಿದ್ದುದು ಇದೇ ಬ್ಯಾನರ್‍ನಲ್ಲಿ. ಇನ್ನು ಚಿತ್ರದ ಮುಹೂರ್ತವನ್ನು ಅಮೆರಿಕದಲ್ಲಿಯೇ ಮಾಡಲು ನಿರ್ಧಾರ ಮಾಡಲಾಗಿದೆ. ಏಕೆಂದರೆ ಇಡೀ ಚಿತ್ರದ ಶೂಟಿಂಗ್ ನಡೆಯೋದು ಅಮೆರಿಕದಲ್ಲಿಯೇ. ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆಯಂತೆ.



