ಶಿವಣ್ಣ ನಟಿಸಿರೋ ಸಿನಿಮಾ ರಿಲೀಸ್ ಆದ್ರೆ ಸಿಗೋ ಥ್ರಿಲ್ಲೇ ಬೇರೆ. ಪ್ರೇಕ್ಷಕರಿಗೆ ಕೊಡೋ ಮಜಾನೇ ಬೇರೆ. ಶಿವಣ್ಣ ಫ್ಯಾನ್ಸ್, ಶಿವಣ್ಣ ಸಿನಿಮಾವನ್ನ ಮನಸ್ಸಿನಿಂದ ನೋಡಲ್ಲ, ಹೃದಯದಿಂದ ನೋಡ್ತಾರೆ. ಅದು ಮತ್ತೊಮ್ಮೆ ಸಾಬೀತಾಗಿದ್ದು ಘೋಸ್ಟ್ ಫ್ಯಾನ್ಸ್ ಶೋನಲ್ಲಿ.
ಶಿವಣ್ಣ ನಟಿಸಿರುವ ಘೋಸ್ಟ್ ಚಿತ್ರ ಸಂಚಲನ ಸೃಷ್ಟಿಸಿದೆ. ಮಧ್ಯರಾತ್ರಿಯಿಂದಲೇ ಹವಾ ಶುರುವಾಗಿದೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಥಿಯೇಟರ್ನಲ್ಲಿ ‘ಘೋಸ್ಟ್’ ಸಿನಿಮಾದ ಸ್ಪೆಷಲ್ ಶೋ ಆಯೋಜನೆ ಆಗಿತ್ತು.ಸಂತೋಷ್ ಥಿಯೇಟರ್ ಎದುರು ಸೇರಿದ್ದ ಸಾವಿರಾರು ಅಭಿಮಾನಿಗಳು ಡಾ.ರಾಜ್, ಪುನೀತ್, ರಾಘವೇಂದ್ರ ರಾಜ್ʻಕುಮಾರ್ ಅವರ ಫೋಟೋ ಹಿಡಿದು ಶಿವಣ್ಣನ ಚಿತ್ರಕ್ಕೆ ಶುಭ ಹಾರೈಸಿದ್ರು. ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದು ಸಿನಿಮಾ. ಶಿವಣ್ಣನ ಯಂಗ್ ಲುಕ್ʻಗೆ ಫಿದಾ ಆಗಿದ್ದಾರೆ ಪ್ರೇಕ್ಷಕರು.
ಶಿವಣ್ಣ ಒರಿಜಿನಲ್ ಗ್ಯಾಂಗ್ಸ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿತ್ತು. ಶಿವರಾಜ್ಕುಮಾರ್ ಹಿಂದೆಂದಿಗಿಂತಲೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೇಜಿ ಲುಕ್ನಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು.
“ಘೋಸ್ಟ್’ ಸಿನಿಮಾದ ಫಸ್ಟ್ ರಿಪೋರ್ಟ್: ನಾನ್ ಲೀನಿಯರ್ ಸ್ಕ್ರೀನ್ ಪ್ಲೇ.. ಆಕ್ಷನ್ಸ್.. ವಿಭಿನ್ನ ಅವತಾರದಲ್ಲಿ ಶಿವಣ್ಣ.. ಮೈನವಿರೇಳಿಸುವ ದೃಶ್ಯಗಳನ್ನು ಫಸ್ಟ್ ಹಾಫ್ನಲ್ಲಿ ನಿರೀಕ್ಷೆ ಮಾಡಬಹುದು” ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಇವರಿಗೆ ಶಿವಣ್ಣ ಲುಕ್, ಆಕ್ಷನ್ ಸೀನ್ಸ್, ಸ್ಕ್ರೀನ್ ಪ್ಲೇ ಇಷ್ಟ ಆಗಿದೆ. ಅದರಲ್ಲೂ ಸ್ಕ್ರೀನ್ ಪ್ಲೇಯನ್ನೇ ಹೆಚ್ಚು ಇಷ್ಟ ಪಟ್ಟಿದ್ದಾರೆ.
ಶಿವಣ್ಣನ ರಗಡ್ ಲುಕ್ ಚಿಂದಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಶಿವಣ್ಣನ ರಗಡ್ ಲುಕ್ ಚಿಂದಿಯಾಗಿದೆ. ಹಿಂದೆಂದಿಗಿಂತಲೂ ಕ್ರೇಜಿ ಲುಕ್ ಕೊಟ್ಟಿದ್ದಾರೆ. ಎಲ್ಲಾ ಮಾಸ್ಗಳಿಗೂ ಶಿವಣ್ಣನೇ ಬಿಗ್ ಡ್ಯಾಡಿ ಎಂಬ ಟ್ವೀಟ್ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಈಗಷ್ಟೇ ಫ್ಯಾನ್ಸ್ ಶೋ ನೋಡಿಕೊಂಡು ಬಂದೆ. ಶ್ರೀನಿ ಕಂಟೆಂಟ್ ಜೊತೆ ಆಡಿಯನ್ಸ್ನ ಹುಚ್ಚು ಎಬ್ಬಿಸವ್ನೆ. ಅರ್ಜುನ್ ಜನ್ಯ ವೃತ್ತಿ ಜೀವನದಲ್ಲೇ ಬೆಸ್ಟ್ ಸಿನಿಮಾ. ಶಿವಣ್ಣ ಸ್ವ್ಯಾಗ್ಗೆ ಪದಗಳೇ ಇಲ್ಲ. ಮ್ಯಾನರಿಸಂ, ವಾಯ್ಸ್ ಎಲ್ಲವೂ ಅದ್ಭುತ ಅನ್ನೋದು ಸಿನಿಮಾ ನೋಡಿಕೊಂಡು ಹೊರಬಂದ ಮತ್ತೊಬ್ಬ ಅಭಿಮಾನಿಯ ರಿಯಾಕ್ಷನ್. ಇದು ಪಕ್ಕಾ ಶ್ರೀನಿ ವಿಷನ್. ಶಿವಣ್ಣ ಅಭಿಮಾನಿಗಳಿಗೆ ಇದು ಹಬ್ಬ. ಅರ್ಜುನ್ ಜನ್ಯ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಬೆಂಕಿ. ನಾವು ಈ ರೀತಿ ಶಿವಣ್ಣನನ್ನು ನೋಡುವುದಕ್ಕೆ ಇಷ್ಟ ಪಡುತ್ತೇನೆ ಎನ್ನುವುದು ಮತ್ತೊಬ್ಬ ಅಭಿಮಾನಿ ದೇವರ ಮಾತು.
ಘೋಸ್ಟ್ ಫಸ್ಟ್ ಹಾಫ್ ಶಿವಣ್ಣನ ಅಭಿಮಾನಿಗಳಿಗೆ ಇಷ್ಟ ಆಗಿದೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ನಾನ್ ಲೀನಿಯರ್ ಸ್ಕ್ರೀನ್ ಪ್ಲೇ ಎಂಗೇಜಿಂಗ್ ಆಗಿದೆ. ಹಿಂದೆಂದೂ ಇಂತಹ ಎಲೆವೇಷನ್ ಸೀನ್ಗಳಲ್ಲಿ ಶಿವಣ್ಣನನ್ನು ತೋರಿಸಿರಲಿಲ್ಲ. ಶಿವಣ್ಣ ಆಕ್ಷನ್ ಸೀನ್ ಅದ್ಭುತವಾಗಿದೆ. ಶಿವಣ್ಣ ಅಭಿಮಾನಿಗಳು ಅಲ್ಲದವರಿಗೆ ಕಥೆ ಸ್ಲೋ ಆಗಿದೆ. ಶ್ರೀನಿ ಸ್ಟೋರಿ, ಸ್ಕ್ರೀನ್ ಪ್ಲೇಗಿಂತ ಎಲೆವೇಷನ್ ಸೀನ್ಗಳಿಗೆ ಹೆಚ್ಚು ಗಮನ ಹರಿಸಿದ್ದಾರೆ. ಶಿವಣ್ಣನಿಗೆ ಕಡಿಮೆ ಸ್ಕ್ರೀನ್ ಸ್ಪೇಸ್ ಇದೆ. ಮಲಯಾಳಂ ನಟ ಜಯರಾಮ್ಗೆ ಹೆಚ್ಚು ಸ್ಪೇಸ್ ಇದೆ ಎನ್ನುವ ಓವರ್ ಆಲ್ ವಿಮರ್ಶೆ ಕೊಟ್ಟಿದ್ದಾರೆ ಮತ್ತೊಬ್ಬ ಅಭಿಮಾನಿ.
ಶ್ರೀನಿ ಚಿತ್ರದಲ್ಲಿ ಶಿವಣ್ಣ ಅವರನ್ನು ಮೂರು ಶೇಡ್ʻಗಳಲ್ಲಿ ತೋರಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ʻನಲ್ಲಿ ಶಿವಣ್ಣ ನಟಿಸಿರುವ 3ನೇ ಸಿನಿಮಾ ಘೋಸ್ಟ್. ಸಂತೋಷ್ ಥಿಯೇಟರಿನಲ್ಲಿ ಪ್ರೇಕ್ಷಕರ ಸೀಟಿಗಿಂತ ಹೆಚ್ಚು ಪ್ರೇಕ್ಷಕರು ತುಂಬಿದ್ದರು. ಚಿತ್ರಕ್ಕೆ ಓಪನಿಂಗ್ ಸಖತ್ ಪಾಸಿಟಿವ್ ಆಗಿದೆ. ಚಿತ್ರಕ್ಕೆ ಹಾಕಿದ ಬಂಡವಾಳ ಈಗಾಗಲೇ ವಾಪಸ್ ಬಂದಿದ್ದು, ನಿರ್ಮಾಪಕರು ಈಗಾಗಲೇ ಲಾಭದಲ್ಲಿದ್ದಾರೆ. ಇನ್ನು ಮುಂದೆ ಬರೋದೆಲ್ಲ ಲಾಭವೇ. ಪ್ರೇಕ್ಷಕರು ಹೆಚ್ಚು ಥ್ರಿಲ್ ಆದಷ್ಟೂ ಸಿನಿಮಾ ಅಷ್ಟು ಸಕ್ಸಸ್ ಆಗಲಿದೆ.



