ಶಿವಣ್ಣನ ಫ್ಯಾನ್ಸು (Shivanna fans) ಬಿಡಿ, ಥೇಟು ಶಿವಣ್ಣನಂತೆಯೇ ಸಣ್ಣ ಸಣ್ಣ ಖುಷಿಯನ್ನೂ ದೊಡ್ಡದಾಗಿ ಎಂಜಾಯ್ ಮಾಡ್ತಾರೆ. ಜೈಲರ್ ಚಿತ್ರದ ಒಂದು ಸೀನ್`ಗೆ ಸಿಕ್ಕ ಜನಪ್ರಿಯತೆಯನ್ನೇ ಹೃದಯದಿಂದ ಅನುಭವಿಸಿದ್ದವರು. ಘೋಸ್ಟ್ (Ghost) ಚಿತ್ರದ ಒಂದು ಟೀಸರ್ ಕೊಟ್ಟ ಓಂ ಖುಷಿಯನ್ನೂ ಸಖತ್ತಾಗಿ ಸೆಲಬ್ರೇಟ್ ಮಾಡಿದ್ದವರು. ಆ ಶಿವಸೈನ್ಯಕ್ಕೀಗ (shiva sainya) ಶಿವತಾಂಡವ (Shiva thandava) ಆಡಿದಂತಹ ಖುಷಿಯೇ ಸಿಕ್ಕಿದೆ. ಶಿವು ಅಡ್ಡದಲ್ಲೀಗ (Shivu adda) ಓಜಿಎಂ ಸೌಂಡು. ಸಖತ್ತಾಗಿಯೇ ಕೇಳಿ ಬರ್ತಾ ಇದೆ.
ಸಿನಿಮಾಗಳಲ್ಲಿ ಬಿಜಿಎಂ (bgm) ಎಂದರೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ (back ground music) ಎಂದರ್ಥ. ಮೊದಲೆಲ್ಲ ಸಿನಿಮಾದವರನ್ನು ಬಿಟ್ಟರೆ ಉಳಿದವರಿಗೆ ಈ ಪದಗಳ ಅರ್ಥಗಳೇ ಗೊತ್ತಿರಲಿಲ್ಲ. ಆದರೀಗ ಹಾಗಲ್ಲ. ಸೋಷಿಯಲ್ ಮೀಡಿಯಾದಲ್ಲಿ ಎಕ್ಸ್`ಪರ್ಟುಗಳಿದ್ದಾರೆ. ಹೀಗಿದ್ದರೂ ಶ್ರೀನಿ (Director shreeni) ಓಜಿಎಂ ರಿಲೀಸ್ ಮಾಡ್ತೇನೆ ಎಂದಾಗ ತಲೆಕೆಡಿಸಿಕೊಂಡವರಿದ್ದರು. ಓಜಿಎಂ ಎಂದರೆ ವೊರಿಜಿನಲ್ ಗ್ಯಾಂಗ್ ಸ್ಟರ್ ಮ್ಯೂಸಿಕ್ (original gangster music) ಎಂದರ್ಥವಂತೆ. ಹಾಡು ರಿಲೀಸ್ ಆಗಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದೆ.
ಶಿವರಾಜ್ಕುಮಾರ್ (Shiva rajkumar) ಅವರು ‘ಘೋಸ್ಟ್’(ghost) ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಗ್ಯಾಂಗ್ಸ್ಟರ್ ಅವತಾರ ತಾಳಿದ್ದಾರೆ. ಈ ಕಾರಣದಿಂದಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಒಂದೇ ವಿಡಿಯೋದಲ್ಲಿ ಕನ್ನಡ, ಮಲಯಾಳಂ, ತಮಿಳಿನ ಲಿರಿಕ್ಸ್ ಇದೆ. ಪೂರ್ತಿ ಹಾಡನ್ನು ಕೇಳಿ ಥ್ರಿಲ್ ಆಗಿರುವ ಅಭಿಮಾನಿಗಳು ಶಿವಣ್ಣ ರೂಲ್ ಮಾಡೋದು ಪಕ್ಕಾ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಆ್ಯಕ್ಷನ್ ಸಿನಿಮಾಗಳಲ್ಲಿ ಬಿಜಿಎಂ ಪ್ರಮುಖ ಪಾತ್ರ ವಹಿಸುತ್ತದೆ. ಬಿಜಿಎಂ ಚೆನ್ನಾಗಿದ್ದರೆ ಸಿನಿಮಾದ ತೂಕ ಹೆಚ್ಚುತ್ತದೆ. ‘ಘೋಸ್ಟ್’ ಸಿನಿಮಾದಲ್ಲಿ ಬಿಜಿಎಂ ಭರ್ಜರಿಯಾಗಿದೆ ಅನ್ನೋದಕ್ಕೆ ಈ ಹಾಡು ಸಾಕ್ಷಿ ಒದಗಿಸುವಂತಿದೆ. ಪರಭಾಷಿಗರು ಈ ಹಾಡನ್ನು ಕೇಳಿ ಇಷ್ಟಪಡುತ್ತಿದ್ದಾರೆ.
ಸಂದೇಶ್ ಪ್ರೊಡಕ್ಷನ್`ನಲ್ಲಿ ಘೋಸ್ಟ್’ ಚಿತ್ರವನ್ನು ಶ್ರೀನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶಿವರಾಜ್ಕುಮಾರ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ದತ್ತಣ್ಣ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಟೋಬರ್ 19ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾ ಪ್ರಚಾರ ಕೂಡ ಜೋರಾಗಿದೆ. ಘೋಸ್ಟ್ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಆಗಲಿದೆ.



