ಘೋಸ್ಟ್ (Ghost) ಗೆದ್ದಾಗಿದೆ. ಶಿವಣ್ಣ-ಶ್ರೀನಿ (Shivnnada) ಕಾಂಬಿನೇಷನ್ನ ಮೊದಲ ಸಿನಿಮಾ ‘ಘೋಸ್ಟ್’ ಕನ್ನಡ ಚಿತ್ರರಂಗಕ್ಕೆ ಹೊಸ ಬೂಸ್ಟ್ ಕೊಟ್ಟಿದೆ. ಇತ್ತೀಚೆಗಷ್ಟೇ ಸಿನಿಮಾ ತಂಡ ಸಕ್ಸಸ್ ಮೀಟ್ ಮಾಡಿ ಗೆದ್ದಿರುವ ಖುಷಿಯನ್ನು ಹಂಚಿಕೊಂಡಿದೆ. ನಿರ್ಮಾಪಕ ಸಂದೇಶ್ ಸಿನಿಮಾದ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಮಲ್ಟಿಪ್ಲೆಕ್ಸ್ ಸ್ಕ್ರೀನ್ಗಳ ಬಗ್ಗೆ ಶಿವಣ್ಣ ಅಸಮಧಾನ ಹೊರ ಹಾಕಿದ್ದರೂ, ಸಿಕ್ಕ ಶೋಗಳಲ್ಲಿಯೇ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ‘ಘೋಸ್ಟ್’ ಯಶಸ್ವಿಯಾಗಿದೆ ಎಂದು ಟ್ರೇಡ್ ಎಕ್ಸ್ಪರ್ಟ್ಸ್ ಹೇಳುತ್ತಿದ್ದಾರೆ. ‘ಘೋಸ್ಟ್’ ಮೊದಲ ವಾರದಲ್ಲಿ 8 ರಿಂದ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜು ಲೆಕ್ಕ ಹಾಕಿದ್ದಾರೆ. ಅದೇ ಇನ್ನೊಂದು ವರ್ಗ ‘ಘೋಸ್ಟ್’ ಕಲೆಕ್ಷನ್ 10 ಕೋಟಿಯನ್ನು ಮೀರಿಸಿದೆ ಎಂದೂ ವರದಿಯಾಗಿದೆ. ಆದರೆ ಮೂಲಗಳ ಪ್ರಕಾರ ಥಿಯೇಟರಿಕಲ್ ಶೇರ್ 5ರಿಂದ 6 ಕೋಟಿ ಮಾತ್ರ.
ಶಿವಣ್ಣ ಚಿತ್ರದ ಕಲೆಕ್ಷನ್ 5ರಿಂದ 6 ಕೋಟಿ ಏಕೆ? Ghost first week collection 5-6 crores
ಅಕ್ಟೋಬರ್ 19ರಂದು ಶಿವಣ್ಣನ ‘ಘೋಸ್ಟ್’ ರಿಲೀಸ್ ಆಗಿತ್ತು. ಅದೇ ದಿನ (tamil vijay movie) ತಮಿಳು ಸಿನಿಮಾ ‘ಲಿಯೋ’ (Leo) ಕೂಡ ಬಿಡುಗಡೆ ಆಗಿತ್ತು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನೋ ನಂಬಿಕೆ ಮೊದಲ ದಿನ ಹುಸಿಯಾಗಿದ್ದು ನಿಜ. ‘ಲಿಯೋ’ (leo) ಕಲೆಕ್ಷನ್ ಮುಂದೆ ‘ಘೋಸ್ಟ್’ (ghost) ಕಲೆಕ್ಷನ್ ಮಂಕಾಗಿತ್ತು. ಆದರೆ, ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೆ ‘ಲಿಯೋ’ಗೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ‘ಘೋಸ್ಟ್’ಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿತ್ತು. ಆದರೂ ಮೊದಲೆರಡು ದಿನ ವರ್ಕಿಂಗ್ ಡೇ ಆಗಿದ್ದರಿಂದ ಕೊಂಚ ಕಲೆಕ್ಷನ್ ಡ್ರಾಪ್ ಆಗಿತ್ತು. ಅಲ್ಲದೆ ಶಿವಣ್ಣ (shiva rajkumar) ಅವರ ಘೋಸ್ಟ್ ಚಿತ್ರದ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ.
ಅಂದರೆ ಎಂದಿನಂತೆಯೇ ದರ ನಿಗದಿ ಮಾಡಲಾಗಿತ್ತು. ಹೀಗಾಗಿಯೇ ಮಲ್ಟಿಪ್ಲೆಕ್ಸ್ಗಳು ಘೋಸ್ಟ್ ಚಿತ್ರಕ್ಕೆ ಶೋ ನೀಡಲು ಮೀನಾಮೇಷ ಎಣಿಸಿದ್ದು. ಏಕೆಂದರೆ ಘೋಸ್ಟ್ ಚಿತ್ರಕ್ಕೆ 2000 ರೂ. ವರೆಗೂ ಟಿಕೆಟ್ ದರ ನಿಗದಿ ಪಡಿಸಬಹುದಾಗಿತ್ತು. ಆದರೆ ಘೋಸ್ಟ್ ಚಿತ್ರಕ್ಕೆ ಕೊಡಲಿಲ್ಲ. ಆದರೆ ಘೋಸ್ಟ್ ಚಿತ್ರ ಎರಡನೇ ದಬ್ಬಾಕ್ಕೊಳ್ಳೋದ್ರೊಂದಿಗೆ ಘೋಸ್ಟ್ ಚಿತ್ರಕ್ಕೆ ಮತ್ತೆ ಶೋಗಳು ಸಿಕ್ಕವು.ಕಲೆಕ್ಷನ್ ಏರಿತು. ಸಿನಿಮಾ ಯಾವುದೇ ಇರಲಿ, ಥಿಯೇಟರ್ ರೇಟ್ ಇಷ್ಟೇ ಎಂದು ಫಿಕ್ಸ್ ಮಾಡಿದರೆ ಯಾವ ಸ್ಟಾರ್ ನಟರಾದರೂ ಅಷ್ಟೆ, 10 ಕೋಟಿ ಕಲೆಕ್ಷನ್ ದಾಟುವುದಿಲ್ಲ.
ಸದ್ಯಕ್ಕೆ ಚಿತ್ರತಂಡ ಸಿನಿಮಾ ಸಕ್ಸಸ್ಸನ್ನು ಎಂಜಾಯ್ ಮಾಡುತ್ತಿದೆ. ಸ್ವಲ್ಪ ಸಮಯ ಕೊಡಿ, ಸಿನಿಮಾದ ಪ್ರತಿ ಲೆಕ್ಕವನ್ನೂ ಜನರ ಮುಂದಿಡ್ತೇನೆ. ಪೈಸೆ ಪೈಸೆ ಲಾಭವನ್ನೂ ಹೇಳುತ್ತೇನೆ, ಆಕ್ಚುವಲಿ ನಾನು ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆಯೇ ಲಾಭದಲ್ಲಿದ್ದೆ. ಈಗ ಥಿಯೇಟರಿಂದ ಬರುತ್ತಿರುವುದು ಎಲ್ಲವೂ ಬೋನಸ್. ಸಿನಿಮಾ ಥಿಯೇಟರ್ ಶೋ ಮುಗಿಸಲಿ, ಖಂಡಿತಾ ಲೆಕ್ಕ ಕೊಡುತ್ತೇನೆ ಎಂದಿದ್ದಾರೆ ನಿರ್ಮಾಪಕ ಸಂದೇಶ್. ಸಂದೇಶ್ ಬ್ಯಾನರಿನಲ್ಲಿ ಶಿವಣ್ಣಗೆ ಇದು 3ನೇ ಸಿನಿಮಾ. ಸಂದೇಶ್ ಬ್ಯಾನರ್ ಮೂಲಕವೇ ಚಂದ್ರೋದಯ ಮತ್ತು ಅಸುರ ಚಿತ್ರಗಳನ್ನು ಮಾಡಿದ್ದರು. ಶಿವಣ್ಣ ಮತ್ತು ನಮ್ಮ ಬ್ಯಾನರ್ ಜೊತೆಯಾಗಿ ಸತತವಾಗಿ 3ನೇ ಹಿಟ್ ಕೊಟ್ಟಿದೆ. ಹೀಗಾಗಿ ನಾವೂ ಹ್ಯಾಟ್ರಿಕ್ ಸಂಪಾದಿಸಿದ್ದೇವೆ ಎಂದಿದ್ದಾರೆ ನಿರ್ಮಾಪಕ ಸಂದೇಶ್.



