ಇತ್ತೀಚೆಗೆ ಭರ್ಜರಿ ಸುದ್ದಿ ಮತ್ತು ಸದ್ದು ಮಾಡಿದ್ದು ತಿರುಪತಿ ತಿಮ್ಮಪ್ಪನ ಲಡ್ಡು (thirupathi thimmappa Laddu) ಮತ್ತು ಕೆಎಂಎಫ್`ನ ನಂದಿನಿ ತುಪ್ಪದ (KMF Nandini Ghee) ಜಟಾಪಟಿ. ಈ ಜಟಾಪಟಿಯ ಮುಂದುವರಿದ ಭಾಗ ಇನ್ನೂ ಇಂಟ್ರೆಸ್ಟಿಂಗ್ ಆಗಿದೆ. ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು (thirupathi thimmappa Laddu) ತಯಾರಿಕೆಗೆ ನಿಲ್ಲಿಸಲಾಗಿದ್ದ ತುಪ್ಪ ಸರಬರಾಜನ್ನು, ಪುನಃ ಸರಬರಾಜು ಮಾಡಲು ಉತ್ಸುಕರಾಗಿದ್ದೇವೆ. ಆದ್ದರಿಂದ ಒಂದು ಸುತ್ತಿನ ಮಾತುಕತೆ ನಡೆಸಿ ದರ ನಿಗದಿ ಮಾಡಿದಲ್ಲಿ ತುಪ್ಪ ಸರಬರಾಜು ಮಾಡಿತ್ತೇವೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವತಿಯಿಂದ ತಿರುಪತಿ ತಿಮ್ಮಪ್ಪ ದೇವಸ್ಥಾನಂ ಟ್ರಸ್ಟ್ (TTD) ಗೆ ಪತ್ರ ಬರೆದಿದೆ. ಟಿಟಿಡಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುವ ಟೆಂಡರ್ನಲ್ಲಿ ಭಾಗವಹಿಸದೇ ದೂರ ಉಳಿದಿದ್ದ ಕರ್ನಾಟಕ ಹಾಲು ಮಹಾಮಂಡಳವು ಈಗ, ತುಪ್ಪ ಸರಬರಾಜು ಮಾಡುವುದಾಗಿ ಮುಂದೆ ಬಂದಿದೆ.
ನಮ್ಮದು (ಕೆಎಂಎಫ್) ಸಹಕಾರ ಸಂಸ್ಥೆಯಾಗಿದ್ದು ಟೆಂಡರ್ ನಲ್ಲಿ ಭಾಗಿಯಾಗಿಲ್ಲ. ತುಂಬಾ ಗುಣಮಟ್ಟದ ತುಪ್ಪವನ್ನು ನಂದಿನಿ ಗ್ರಾಹಕರಿಗೆ ತಲುಪಿಸುತ್ತಾ ಬಂದಿದೆ. ಹೀಗಾಗಿ, ಟಿಟಿಡಿಗೂ ಕೂಡ ತುಪ್ಪ ನೀಡಲು ನಾವು ಖುಷಿಯಿಂದ ಕಾತುರರಾಗಿದ್ದೇವೆ. ನಾವು ಪ್ರತಿ ವರ್ಷ 30 ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡುತ್ತೇವೆ. ನಾವು ನಿಮಗೆ ತುಪ್ಪ ಸರಬರಾಜು ಮಾಡಲು ತುಂಬಾ ಉತ್ಸುಕರಾಗಿದ್ದೇವೆ. ಅದಕ್ಕಿಂತ ಮುಂಚೆ ಒಂದು ಸಭೆಯನ್ನು ನಮ್ಮ ಜೊತೆ ಆಯೋಜನೆ ಮಾಡಿ. ಈ ಸಭೆಯಲ್ಲಿ ದರದ ಬಗ್ಗೆ ಚರ್ಚೆ ಮಾಡೋಣ. ದರ ನಿಗದಿಗೊಳಿಸಿದ ನಂತರ ತುಪ್ಪ ಸರಬರಾಜು ಮಾಡುತ್ತೇವೆ ಎಂದು ಟಿಟಿಡಿ ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆಯಲಾಗಿದೆ.
ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ತಯಾರಿಕೆಗೆ ಕಳೆದ 20 ವರ್ಷಗಳಿಂದ ಗುಣಮಟ್ಟದ ತುಪ್ಪ ಸರಬರಾಜು ಮಾಡಲಾಗಿದೆ. ಇದರಿಂದ ಲಡ್ಡುವಿನ ಸ್ವಾದ ಮತ್ತು ರುಚಿಯೂ ಅತ್ಯುತ್ತಮವಾಗಿತ್ತು. ಆದರೆ, ಇಲ್ಲಿ ಉತ್ಪಾದನೆ ಮಾಡುವ ಗುಣಮಟ್ಟದ ತುಪ್ಪವನ್ನು ಸ್ಪರ್ಧಾತ್ಮಕ ಬೆಲೆಯ ನಿಟ್ಟಿನಲ್ಲಿ ದೇವಸ್ಥಾನದ ಟೆಂಡರ್ನಲ್ಲಿ ಭಾಗವಹಿಸಿ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡುವುದು ಕಷ್ಟವಾಗಲಿದೆ. ಆದ್ದರಿಂದ ಒಂದು ಸುತ್ತಿನ ಸಭೆಯನ್ನು ನಡೆಸಿ, ಗುಣಮಟ್ಟದ ತುಪ್ಪವನ್ನು ಖರೀದಿಗೆ ಒಪ್ಪಿದಲ್ಲಿ ನಾವು ತುಪ್ಪ ಸರಬರಾಜು ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಏಒಈ)ದ ನಂದಿನಿ ಬ್ರ್ಯಾಂಡ್ ಇತ್ತೀಚಿನ ಕೆಲ ವರ್ಷಗಳಲ್ಲಿ ಹೆಚ್ಚು ಬೆಳೆದಿದೆ. ಈಗ ಇದು ದೇಶದ ಸಹಕಾರಿ ಡೈರಿ ಉದ್ಯಮದಲ್ಲಿ ಎರಡನೇ ಅತಿದೊಡ್ಡ ಬ್ರಾಂಡ್ ಆಗಿದೆ. . ಕೆಎಂಎಫ್ ಒಂದು ರೈತರ ಸಹಕಾರಿ ಒಕ್ಕೂಟವಾಗಿದ್ದು, ಈ ಮೂಲಕ ರೈತರು ಸೇರಿದಂತೆ ಸಂಸ್ತೆಯನ್ನು ಕೂಡ ಬಲಪಡಿಸಬೇಕಿದೆ.
ವಿಶೇಷವೆಂದರೆ ಕಳೆದ ಮಾರ್ಚ್ ತಿಂಗಳಲ್ಲಿ ಟಿಟಿಡಿಯವರು ಟೆಂಡರ್ ಕರೆದಿದ್ದು, ಟೆಂಡರ್`ನಲ್ಲಿ ಕೆಎಂಎಫ್ ಭಾಗವಹಿಸಲೇ ಇಲ್ಲ. ಅದಾದ ನಂತರ ಕಡಿಮೆ ರೇಟಿಗೆ ಕೇಳುತ್ತಾರೆ. ಕೊಡುವುದಕ್ಕೆ ಆಗಲ್ಲ ಎಂದು ಭೀಮಾನಾಯ್ಕ್ ಹೇಳಿದ್ದರು. ಟಿಟಿಡಿಯವರು ಅದಕ್ಕೆ ಪ್ರತಿಕ್ರಿಯೆ ನೀಡಿ ಇ-ಟೆಂಡರ್`ನಲ್ಲಿ ಭಾಗವಹಿಸಬೇಕು. ಕೆಎಂಎಫ್`ನವರು ಟೆಂಡರ್ ಹಾಕಿಲ್ಲ. ಟೆಂಡರ್`ನಲ್ಲಿ ಬಂದು ನಮ್ಮ ನಿಯಮಗಳಿಗೆ ತಕ್ಕಂತೆ ಇದ್ದರೆ ತುಪ್ಪ ಖರೀದಿಸುತ್ತೇವೆ ಎಂದಿತ್ತು. ವಿವಾದದ ನಂತರ ಈಗ ಪತ್ರದ ಹಂತಕ್ಕೆ ಬಂದು ನಿಂತಿದೆ.



