ದೇಶಾದ್ಯಂತ ಗ್ಯಾಸ್ ಎಮರ್ಜೆನ್ಸಿ ಇದೆ. ಡೋಂಟ್ ವರಿ, ಎಲ್ಲವೂ ಕಂಟ್ರೋಲಿನಲ್ಲಿದೆ ಎನ್ನುತ್ತಿರುವ ಕೇಂದ್ರ ಸರ್ಕಾರ, ವಾಸ್ತವವನ್ನು ದೇಶದ ಜನತೆ ಎದುರು ಇಡುತ್ತಿಲ್ಲ. ರಾಜಕೀಯ ಹೇಳಿಕೆಗಳಿಗೇ ಸೀಮಿತವಾಗಿರುವ ಮೋದಿ ಸರ್ಕಾರ, ವಾಸ್ತವವನ್ನು ಮರೆತಿದೆ. ಪರಿಸ್ಥಿತಿ ಹದಗೆಟ್ಟಿರುವುದ ಕೇವಲ ಕರ್ನಾಟಕದಲ್ಲಿ ಅಲ್ಲ. ಹೀಗಿದ್ದರೂ ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎನ್ನುತ್ತಿರುವ ಕೇಂದ್ರ ಸರ್ಕಾರ ಕೇವಲ ಮಾತುಗಳಲ್ಲಿ ಹೇಳುತ್ತಿದೆಯೇ ಹೊರತು, ವಾಸ್ತವ ಹಾಗಿಲ್ಲ.
ಇಷ್ಟಕ್ಕೂ ಯುದ್ಧದಲ್ಲಿ ಭಾರತದ ಪಾತ್ರ ಇಲ್ಲ. ಪರಿಸ್ಥಿತಿ ಭಾರತದ ಕಂಟ್ರೋಲಿನಲ್ಲೂ ಇಲ್ಲ. ವಾಸ್ತವವನ್ನು ಹೇಳಿದರೆ ಜನ ಅರ್ಥ ಮಾಡಿಕೊಳ್ಳುತ್ತಾರೆ. ಸುಮ್ಮನೆ ಪೊಲಿಟಿಕಲ್ ಮಾಡುವುದು ಏಕೆ.. ಸಮಸ್ಯೆಯೇ ಇಲ್ಲ ಎನ್ನುವುದು ಏಕೆ..
ಗ್ಯಾಸ್ ಎಮರ್ಜೆನ್ಸಿ ಯಾವ್ಯಾವ ರಾಜ್ಯಗಳಲ್ಲಿ ಹೇಗಿದೆ..?
ಕರ್ನಾಟಕ (ಬೆಂಗಳೂರು): ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ತೀವ್ರ ಕೊರತೆ. ಹಲವು ಹೋಟೆಲ್ ಬಂದ್. ಬೆಲೆ ಏರಿಕೆ. ಆಟೋಗಳಿಗೂ ಗ್ಯಾಸ್ ಪೂರೈಕೆ. ಹೋಟೆಲ್, ಆಟೋ, ಟ್ಯಾಕ್ಸಿ, ಕೈಗಾರಿಕೆಗಳಲ್ಲಿ ಗ್ಯಾಸ್ ಪೂರೈಕೆ ಸ್ಥಗಿತ.
ಮಹಾರಾಷ್ಟ್ರ (ಮುಂಬೈ, ಪುಣೆ): ಮುಂಬೈಯಲ್ಲಿ 20% ಹೋಟೆಲ್/ರೆಸ್ಟೋರೆಂಟ್‌ಗಳು ಮುಚ್ಚಿವೆ. ಕಮರ್ಷಿಯಲ್ ಸಪ್ಲೈ ಹಲವು ದಿನಗಳಿಂದ ಸ್ಥಗಿತ.
ತಮಿಳುನಾಡು (ಚೆನ್ನೈ): ಹೋಟೆಲ್ ಸಂಘಟನೆಗಳು ಕೊರತೆ ಘೋಷಿಸಿವೆ. ಹಲವು ಸ್ಥಾಪನೆಗಳು ಮುಚ್ಚುವ ಅಪಾಯದಲ್ಲಿವೆ.
ಪಶ್ಚಿಮ ಬಂಗಾಳ (ಕೋಲ್ಕತ್ತಾ): ಕಮರ್ಷಿಯಲ್ ಸಿಲಿಂಡರ್‌ಗಳ ತೀವ್ರ ಕೊರತೆ; ರೆಸ್ಟೋರೆಂಟ್‌ಗಳು ಬಂದ್ ಆಗಿವೆ.
ತೆಲಂಗಾಣ (ಹೈದರಾಬಾದ್): ಕಮರ್ಷಿಯಲ್ ಸಪ್ಲೈ 75% ಕಡಿಮೆ.
ಕೇರಳ: ಹೋಟೆಲ್/ಕ್ಯಾಟರಿಂಗ್ ಯೂನಿಟ್‌ಗಳು ಮುಚ್ಚುವ ಅಪಾಯ; ಸ್ಟಾಕ್ ಕಡಿಮೆಯಾಗುತ್ತಿದೆ.
ಪಂಜಾಬ್, ಹರಿಯಾಣಾ, ಹಿಮಾಚಲ ಪ್ರದೇಶ: ಪ್ರಮುಖ ಪ್ರವಾಸಿ ನಗರಗಳು ಮತ್ತು ಔದ್ಯೋಗಿಕ ಪ್ರದೇಶಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಕೊರತೆ; ಹೋಟೆಲ್/ದಾಬಾಗಳು ಮುಚ್ಚುತ್ತಿವೆ. ಬಿಹಾರ, ರಾಜಸ್ತಾನ್ (ಜೈಪುರ), ದೆಹಲಿ ಮತ್ತು ಇತರ ಕೆಲವು ನಗರಗಳಲ್ಲಿ ಕೂಡ ವರದಿಗಳಿವೆ. ಸಿಲಿಂಡರ್ಗಳು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದರೂ ಅವುಗಳ ಲಭ್ಯತೆಯೂ ಕಷ್ಟಸಾಧ್ಯವಾಗಿದೆ. ಇದರಿಂದ ಹಲವು ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ತಲುಪಿವೆ ಅಥವಾ ತಮ್ಮ ಮೆನುವಿನ ಐಟಂಗಳನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಇದರಿಂದಾಗಿ ಹೋಟೆಲ್‌ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಹೇಳುತ್ತಿರುವುದೇ ಬೇರೆ.
ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅನಿಲ ಪೂರೈಕೆ ಮತ್ತಷ್ಟು ಸುಧಾರಿಸಲಿದೆ. ಹೀಗಾಗಿ ಜನರು ಭಯ ಬೀಳುವ ಅಗತ್ಯವಿಲ್ಲ, ಸಿಲಿಂಡರ್ ಗಾಗಿ ಮುಗಿಬೀಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದೇವೇಳೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ. ಕೇಂದ್ರದ ಪ್ರಕಾರ ಇದೆಲ್ಲ ಸುಳ್ಳು ಸುದ್ದಿ.
ಅಂದಹಾಗೆ ಸಮಸ್ಯೆ ಕೇವಲ ಬಿಜೆಪಿ ವಿರೋಧಿಗಳಿಗಷ್ಟೇ ಆಗಿಲ್ಲ. ಎಲ್ಲರಿಗೂ ಆಗಿದೆ. ಬ್ಲಾಕ್ ಮಾರ್ಕೆಟ್ ಸೃಷ್ಟಿಯಾಗಿದೆ. ಸಮಸ್ಯೆ ಇರುವುದು ಸತ್ಯ. ಏಕೆಂದರೆ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಶನಿವಾರದಿಂದ ಸಪ್ಲೈ ಕೊರತೆ ಎದುರಾಗಿ, ಬುಧವಾರ ಒಂದು ಲೋಡ್ ಕೂಡಾ ಬಂದಿಲ್ಲ. ಸಮಸ್ಯೆ ಇರುವುದು ಸತ್ಯ.
ಇಷ್ಟಕ್ಕೂ ಯುದ್ಧದಲ್ಲಿ ಭಾರತದ ಪಾತ್ರ ಇಲ್ಲ. ಪರಿಸ್ಥಿತಿ ಭಾರತದ ಕಂಟ್ರೋಲಿನಲ್ಲೂ ಇಲ್ಲ. ವಾಸ್ತವವನ್ನು ಹೇಳಿದರೆ ಜನ ಅರ್ಥ ಮಾಡಿಕೊಳ್ಳುತ್ತಾರೆ. ಸುಮ್ಮನೆ ಪೊಲಿಟಿಕಲ್ ಮಾಡುವುದು ಏಕೆ.. ಸಮಸ್ಯೆಯೇ ಇಲ್ಲ ಎನ್ನುವುದು ಏಕೆ..
ಮುಂದಿನ ಎರಡು ದಿನಗಳಲ್ಲಿ ಸಿಲಿಂಡರ್ಗಳನ್ನು ಮನೆಗಳಿಗೆ ವಿತರಿಸಲಾಗುವುದು. ಅಲ್ಲದೆ, ಎಲ್‌ಪಿಜಿ ಸಿಲಿಂಡರ್ ಉತ್ಪಾದನೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗಿದೆ ಮತ್ತು ಹೊಸ ಮೂಲಗಳಿಂದ ಎಲ್‌ಎನ್‌ಜಿ ಸರಕುಗಳನ್ನು ಖರೀದಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.



