ಶಿವ ರಾಜ್ ಕುಮಾರ್. ಪುಟ್ಟಸ್ವಾಮಿ ಎಂಬ ಹುಡುಗ ಹೀರೋ ಆಗಿದ್ದು ಆನಂದ್ ಸಿನಿಮಾದಿಂದ. ಆ ಸಿನಿಮಾ 100 ಡೇಸ್. ನಂತರ ಬಂದಿದ್ದು ರಥಸಪ್ತಮಿ. ಆ ಸಿನಿಮಾ ಕೂಡಾ 100 ಡೇಸ್. 3ನೇ ಸಿನಿಮಾ ಮನ ಮೆಚ್ಚಿದ ಹುಡುಗಿ. ಆ ಸಿನಿಮಾ ಕೂಡಾ 100 ಡೇಸ್. ಒಬ್ಬ ನಟ ನಟಿಸಿದ ಮೊದಲ ಚಿತ್ರಗಳು ಹ್ಯಾಟ್ರಿಕ್ ಸೆಂಚುರಿ ಹೊಡೆದಿದ್ದುಅದೇ ಮೊದಲು. ಕೇವಲ ಕನ್ನಡದಲ್ಲಿ ಅಲ್ಲ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಚಿತ್ರಗಳಲ್ಲೇ ಹ್ಯಾಟ್ರಿಕ್ ಹಿಟ್ ಕೊಟ್ಟ ಮೊದಲ ಹೀರೋ ಶಿವ ರಾಜ್ ಕುಮಾರ್. ಹೀಗಾಗಿಯೇ ಸಿಕ್ಕ ಬಿರುದು ಹ್ಯಾಟ್ರಿಕ್ ಹೀರೋ. ಆ ಹ್ಯಾಟ್ರಿಕ್ ಹೀರೋ ಈಗ ಸೆಂಚುರಿ ಸ್ಟಾರ್ ಶಿವಣ್ಣ ಆಗಿದ್ದಾರೆ. ಹ್ಯಾಟ್ರಿಕ್ ಶುರುವಾದ ಆನಂದ್ ಚಿತ್ರಕ್ಕೀಗ 38 ವರ್ಷ. ಶಿವಣ್ಣ ವೃತ್ತಿ ಬದುಕಿಗೂ 38 ವರ್ಷ.
ಅಂದಹಾಗೆ ಶಿವಣ್ಣ ಮೊದಲ ಮೂರು ಚಿತ್ರಗಳನ್ನಷ್ಟೇ ಅಲ್ಲ, ಸತತವಾಗಿ 10 ಹಿಟ್ ಸಿನಿಮಾ ಕೊಟ್ಟವರು. ಅವರ ಮೊದಲ ಚಿತ್ರಗಳಾದ ಆನಂದ್, ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಅಷ್ಟೇ ಅಲ್ಲ, ಶಿವ ಮೆಚ್ಚಿದ ಕಣ್ಣಪ್ಪ, ಸಂಯುಕ್ತ, ರಣರಂಗ, ಇನ್ಸ್ʻಪೆಕ್ಟರ್ ವಿಕ್ರಂ, ಅದೇ ರಾಗ ಅದೇ ಹಾಡು, ಆಸೆಗೊಬ್ಬ ಮೀಸೆಗೊಬ್ಬ, ಮೃತ್ಯುಂಜಯ ಚಿತ್ರಗಳೆಲ್ಲವೂ 100 ಡೇಸ್. ಆರಂಭದ 10 ಚಿತ್ರಗಳಲ್ಲಿ ಸತತವಾಗಿ ಇಷ್ಟೊಂದು ಹಿಟ್ ಕೊಟ್ಟ ಇನ್ನೊಬ್ಬ ಹೀರೋ ಇಡೀ ಭಾರತದಲ್ಲಿ ಸಿಕ್ಕಲ್ಲ. 38 ವರ್ಷಗಳಲ್ಲೂ ಅಷ್ಟೆ.
ಈ ಅವಧಿಯಲ್ಲಿ ಶಿವಣ್ಣ ಒಂದಲ್ಲ ಎರಡಲ್ಲ.. ಹಲವು ಮಾಸ್ ಹಿಟ್ ಕೊಟ್ಟಿದ್ಧಾರೆ. ಓಂನಂತಹ ಟ್ರೆಂಡ್ ಸೆಟ್ಟರ್, ಜನುಮದ ಜೋಡಿಯಂತಹ ಹಳ್ಳಿಯ ಪ್ರೇಮಕಥೆ, ಜೋಗಿಯಂತಹ ರೌಡಿಸಂ ಸಿನಿಮಾ, ಭಜರಂಗಿಯಂತಹ ಫ್ಯಾಕ್ಷನ್ ಸಿನಿಮಾ, ತವರಿಗೆ ಬಾ ತಂಗಿಯಂತಹ ಸೆಂಟಿಮೆಂಟ್, ಆಸೆಗೊಬ್ಬ ಮೀಸೆಗೊಬ್ಬದಂತಹ ಕಾಮಿಡಿ, ದೊರೆಯಂತಹ ಕಾದಂಬರಿ ಆಧರಿತ ಚಿತ್ರ, ಚಿಗುರಿದ ಕನಸುವಿನಂತಹ ಬ್ರಿಡ್ಜ್ ಸಿನಿಮಾ, ಎಕೆ 47ನಂತಹ ಆಕ್ಷನ್ ಮೂವಿ, ಗಂಡುಗಲಿ ಕುಮಾರರಾಮದಂತಹ ಐತಿಹಾಸಿ ಪೌರಾಣಿಕ ಸಿನಿಮಾ, ಮಫ್ತಿಯಂತ ಡಾರ್ಕ್ ಆಕ್ಷನ್ ಸಿನಿಮಾ, ಟಗರುನಂತಹ ಮಾಸ್ ಸಿನಿಮಾ, ಮಿ.ಪುಟ್ಸಾಮಿಯಂತಹ ಫ್ಯಾಂಟಸಿ, ಶಿವಲಿಂಗದಂತಹ ದೆವ್ವದ ಸಿನಿಮಾ, ಸುಗ್ರೀವದಂತಹ ಪ್ರಯೋಗಾತ್ಮಕ ಚಿತ್ರ.. ಹೀಗೆ ಹತ್ತಾರು ಸಿನಿಮಾಗಳಾಗಿವೆ.
ಇವುಗಳ ಮಧ್ಯೆ ಹ್ಯಾಟ್ರಿಕ್ ಹೊಡಿಮಗ, ನಂದಾ, ಪರಮೇಶಿ ಪಾನ್‌ವಾಲ, ಮಾದೇಶ, ಬಂಧು ಬಳಗ, ಲವ ಕುಶ, ಗಂಡನ ಮನೆ, ತಾಯಿಯ ಮಡಿಲು, ವಾಲ್ಮೀಕಿ, ರಾಜ, ಭಾಗ್ಯದ ಬಳೆಗಾರ, ಶಿವದಂತಹ ಹೆಸರೇ ಗೊತ್ತಿಲ್ಲದ ಚಿತ್ರಗಳಲ್ಲೂ ನಟಿಸಿದ್ದಾರೆ. ಶಿವಣ್ಣರನ್ನು ಯೂಸ್ ಮಾಡಿಕೊಂಡು ಬೆಳೆದವರೆಷ್ಟು ಜನರಿದ್ದಾರೋ.. ಮಿಸ್ ಯೂಸ್ ಮಾಡಿಕೊಂಡು ಬೆಳೆದವರೂ ಇದ್ಧಾರೆ.
ಅಂತಹ ಶಿವಣ್ಣ ಅಭಿನಯದ ಈಗಲೂ ವರ್ಷಕ್ಕೆ ಮಿನಿಮಮ್ 2ರಿಂದ 3 ಸಿನಿಮಾ ಬರುತ್ತವೆ. ಗೆಲುವೋ.. ಸೋಲೋ.. ನಟಿಸುತ್ತಲೇ ಇರಬೇಕು ಅನ್ನೋದು ಶಿವಣ್ಣ ಪಾಲಿಸಿ. ಇಷ್ಟು ವರ್ಷದಲ್ಲಿ ಒಂದೆರಡು ವರ್ಷ ಹೊರತುಪಡಿಸಿದ್ರೆ, ಪ್ರತೀ ವರ್ಷ 3 ಸಿನಿಮಾ ಪಕ್ಕಾ ಇದೆ. ಕೆಲವು ವರ್ಷಗಳಲ್ಲಿ ಏಳೆಂಟು ಸಿನಿಮಾ ಬಂದ ಉದಾಹರಣೆಯೂ ಇದೆ.
ಇನ್ನೇನು ಶಿವಣ್ಣನ ಜಮಾನಾ ಮುಗಿಯಿತು ಅನ್ನೋವಾಗ ಧುತ್ತನೆ ಎದ್ದು ನಿಲ್ಲುವ, ಇಂಡಸ್ಟ್ರಿಯೇ ಬೆರಗಾಗುವಂತಹ ಹಿಟ್ ಕೊಡುವುದು ಶಿವಣ್ಣನ ಪಾಲಿಸಿ. ಓಂ, ಜೋಗಿ, ಜನುಮದ ಜೋಡಿ, ಭಜರಂಗಿ, ತವರಿಗೆ ಬಾ ತಂಗಿ, ಇತ್ತೀಚೆಗೆ ವೇದ, ಜೈಲರ್ ಬಂದಿದ್ದೆಲ್ಲವೂ ಹಾಗೆಯೇ.
ಶಿವಣ್ಣರದ್ದು ಡೋಂಟ್ ಕೇರ್ ಪರ್ಸನಾಲಿಟಿ. ಶಿವಣ್ಣ ಅವರನ್ನ ಬೈಕೊಳ್ತಾ ಇದ್ರೆ ಹೌದಾ.. ಯಾಕಂತೆ ಅನ್ನೋ ಶಿವಣ್ಣ, ಉತ್ತರವನ್ನೂ ಕೇಳೋದಿಲ್ಲ. ಫೀಲ್ ಹ್ಯಾಪಿ. ಅವರನ್ನು ಹೊಗಳ್ತಾ ಇದ್ರೆ.. ಹೌದಾ.. ಏನೋಪ್ಪಾ.. ಅದ್ಯಾಕ್ ಹೊಗಳ್ತಿದ್ಧಾರೆ ಅನ್ನೋ ಶಿವಣ್ಣ.. ಅದರ ವಿವರವನ್ನೂ ತಲೆಗೆ ಹಾಕ್ಕೊಳ್ಳಲ್ಲ. ಹೀಗಾಗಿಯೇ.. ಇವತ್ತಿಗೂ ಶಿವಣ್ಣ ಅಂದ್ರೆ ಚಿತ್ರರಂಗದವ್ರು ಮೆಚ್ಚಿಕೊಳ್ತಾರೆ.



