ಉದ್ಯಮಿಯೊಬ್ಬರಿಗೆ (Industrialist) ಬಿಜೆಪಿ ಟಿಕೆಟ್ (BJP Ticket) ಕೊಡಿಸೋದಾಗಿ ನಂಬಿಸಿ, ಕೋಟಿ ಕೋಟಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು (CCB police) ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ (Hindu fame Chaithra Kundapura) ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬೈಂದೂರುನ ಸಮಾಜ ಸೇವಕ & ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರುಪಾಯಿ ವಂಚಿಸಿರುವ ಆರೋಪದ ಮೇರೆಗೆ ಚೈತ್ರರನ್ನು (Chaithra Kundapura) ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ (Udupi Krishna mutt) ಏರಿಯಾದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಇಬ್ಬರು ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಚೈತ್ರಾ (Chaithra Kundapura) ಸಹಿತ 8 ಮಂದಿಯ ವಿರುದ್ಧ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ (Bandepalya police station) ದೂರು ನೀಡಿದ್ದರು.
ಚೈತ್ರ ಹಾಗೂ ಅವರ ಸಂಗಡಿಗರು ಕೇಂದ್ರದ ನಾಯಕರು ಹಾಗೂ ಆರೆಸ್ಸೆಸ್ ಮುಖಂಡರ (RSS Leaders) ಹೆಸರಲ್ಲಿ ಈ ಮೋಸ ಮಾಡಿದ್ದಾರೆ. ಚೈತ್ರ ಹಾಗೂ ನಾಲ್ಕೈದು ಜನರ ತಂಡ ಆರ್ ಎಸ್ ಎಸ್ ಪ್ರಮುಖರು ಎಂದು ನಕಲಿ ನಾಯಕರ ತಂಡವನ್ನೂ ಸೃಷ್ಟಿಮಾಡಿದ್ದರು ಎನ್ನಲಾಗಿದೆ. ಈಗ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ನಾಯಕ್ ಪೆಲತ್ತೂರು ಪೊಲೀಸರ ಅತಿಥಿಯಾಗಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗಗನ್ ಕಡೂರು ಹಾಗೂ ಪ್ರಸಾದ್ ರನ್ನು ವಶಕ್ಕೆ ಪಡೆಯಲಾಗಿತ್ತು.
ಹೇಗೆ ನಡೆದಿತ್ತು ಚೀಟಿಂಗ್..?
ಉದ್ಯಮಿಗೆ ನಾಮ ಹಾಕುವುದಕ್ಕೆ ನಕಲಿ ನಾಯಕರನ್ನೇ ಸೃಷ್ಟಿಸಿದ್ದ (Chaithra Kundapura) ತಂಡದಲ್ಲಿ ಕಡೂರಿನ ಸೆಲೂನ್ ಶಾಪ್ ನಲ್ಲಿ ಮೇಕಪ್ ಮಾಡೋ ವ್ಯಕ್ತಿ, ಆರ್‍ಎಸ್‍ಎಸ್ (RSS Pracharak) ಪ್ರಚಾರಕರನ್ನಾಗಿದ್ದರು. ರಮೇಶ್ ಹಾಗೂ ಧನರಾಜ್ ಆರ್‍ಎಸ್‍ಎಸ್ ಪ್ರಚಾರಕರಾಗಿದ್ದರು. ಕೆ.ಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ಆರೋಪಿ ನಾಯ್ಕ್ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನಾಗಿದ್ದ. ನಾಟಕವಾಡುವುದಕ್ಕೆ ಧನರಾಜ್, ರಮೇಸ್ ಅವರಿಗೆ ಚೈತ್ರಾ ಕುಂದಾಪುರ (Chaithra Kundapura) ಮತ್ತು ಗಗನ್ ಕಡೂರು ಟ್ರೈನಿಂಗ್ ಕೊಟ್ಟಿದ್ದರಂತೆ. ಜೊತೆಗೆ ಒಂದು ಲಕ್ಷದ 20 ಸಾವಿರ ದುಡ್ಡು ಕೊಟ್ಟಿದ್ದರಂತೆ. ಇನ್ನು ಆರ್‍ಎಸ್‍ಎಸ್ ವಾಹನವನ್ನೂ ಸಿದ್ಧ ಮಾಡಿ, ಅದಕ್ಕೆ ಎರಡೂವರೆ ಲಕ್ಷ ಹಣ ಕೊಟ್ಟಿದ್ದರಂತೆ. ಅಷ್ಟೇ ಅಲ್ಲ, ಬಿಜೆಪಿ ಚುನಾವಣಾ ಸಮಿತಿ ಸದಸ್ಯನಾಗಿದ್ದ ಕಬಾಬ್ ಮಾರುವವನಿಗೆ 93 ಸಾವಿರ ಹಣ ಕೊಟ್ಟಿದ್ದರಂತೆ. ಒಟ್ಟಿನಲ್ಲಿ ಎಲ್ಲರೂ ಈಗ ಪೊಲೀಸ್ ಅತಿಥಿಗಳಾಗಿದ್ದಾರೆ.



