ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (Ex.PM HD Devegowda) ಅವರೀಗ ಡಾಕ್ಟರ್ ದೇವೇಗೌಡ (Doctor Devegowda) ಆಗಿದ್ಧಾರೆ. ರಾಜ್ಯ ರಾಜಕೀಯದ ಮುತ್ಸದ್ದಿಗೀಗ (Bengaluru university) ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (Honorary doctorate) ನೀಡಿ ಗೌರವಿಸಿದೆ. ದೇವೇಗೌಡರ ಜೊತೆ ಗೌರವ ಡಾಕ್ಟರೇಟ್ ಸ್ವೀಕರಿಸಿದ ಇನ್ನೊಬ್ಬ ಮಹಾನುಭಾವರೆಂದರೆ (ISRO chiet S.Somanath) ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್.
ವಿದ್ಯೆ ವಿನಯವನ್ನು ನೀಡುತ್ತದೆ. ವಿನಯದಿಂದ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಸಂಪಾದಿಸಿದ ಹಣದಿಂದ ಧರ್ಮ ಕಾರ್ಯಗಳನ್ನು ನಡೆಸಿದಾಗ ಮಾತ್ರ ಮನಸ್ಸಿಗೆ ತೃಪ್ತಿ ಸಿಗುತ್ತದೆ. ವಿದ್ಯಾರ್ಥಿ ಜೀವನ ತಪಸ್ಸಿದ್ದಂತೆ. ಪ್ರತಿ ವಿದ್ಯಾರ್ಥಿಯ ಜೀವನ ಶಿಸ್ತಿನಿಂದ ಕೂಡಿರಬೇಕು. ವಿದ್ಯೆ ಜೀವನವನ್ನು ಕಟ್ಟಿಕೊಡುವುದರ ಜೊತೆಗೆ ದೇಶದ ಬೆಳವಣಿಗೆ, ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ವಿದ್ಯೆ ಸಂಪತ್ತಷ್ಟೇ ಅಲ್ಲ, ಸಂಸ್ಕಾರವೂ ಹೌದು ಇದು ಗೌರವ ಡಾಕ್ಟರೇಟ್ ಸ್ವೀಕರಿಸಿದ ಸಂಭ್ರಮದಲ್ಲಿ ದೇವೇಗೌಡರು ಹೇಳಿದ ಮಾತು. ಜೀವನದಲ್ಲಿ ವಿದ್ಯೆ ಮತ್ತು ಸಂಸ್ಕಾರ ಬೇರುಗಳಿದ್ದಂತೆ. ವಿದ್ಯೆ ಕೇವಲ ಪ್ರಮಾಣಪತ್ರಕ್ಕಷ್ಟೇ ಸೀಮಿತವಾಗಬಾರದು. ಸಂಸ್ಕಾರವನ್ನೂ ಕಲಿಸಬೇಕು. ವಿದ್ಯೆಯು ಹಣ ಗಳಿಸುವ ಸಾಧನವಾಗದೆ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾದಾಗ ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದಿದ್ದಾರೆ ದೇವೇಗೌಡ.
ದೇವೇಗೌಡ ಹಾಗೂ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (governor Thavar Chand gehlot) ಕರ್ನಾಟಕವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಅನೇಕ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿವೆ. ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಒಂದು ಎಂದು ವಿವಿಯ ಪ್ರಾಮುಖ್ಯತೆಯನ್ನು ಹೊಗಳಿದರು.
ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಮಾತನಾಡಿ, ದೇಶದ ಪ್ರಧಾನಿಗಳಾಗಿದ್ದ ದೇವೇಗೌಡರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ಇಷ್ಟು ವರ್ಷ ಬೇಕಿತ್ತಾ? ಎಂಬುದೇ ಗಮನಾರ್ಹ ಸಂಗತಿ ಎಂದು ಅಚ್ಚರಿಪಟ್ಟರು.
ಅಂದಹಾಗೆ ಇನ್ನು ಮುಂದೆ ದೇವೇಗೌಡರನ್ನು ಡಾಕ್ಟರ್ ದೇವೇಗೌಡ್ರು ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯಬಹುದು.



