ನಿನ್ನಂತ ಅಪ್ಪಾ ಇಲ್ಲ..
ಎಂದು ಮಗಳು ಹಾಡುತ್ತಿದ್ದರೆ..
ನಿನ್ನಂತ ಮಗಳು ಇಲ್ಲ..
ಎಂದು ಕುಣಿದು ಕುಪ್ಪಳಿಸುತ್ತಾನೆ ಅಪ್ಪ. ಇದು ಕೇವಲ ಡಾ.ರಾಜ್, ಸುಧಾರಾಣಿ ನಟಿಸಿದ್ದ ಸಿನಿಮಾ ದೃಶ್ಯವಷ್ಟೇ ಅಲ್ಲ, ರಿಯಲ್ ಹಲವು ಕುಟುಂಬಗಳಲ್ಲಿನ ಅಪ್ಪ ಮತ್ತು ಮಗಳ ಕಥೆಯೂ ಹೌದು. ಸಾಮಾನ್ಯವಾಗಿ ಅಪ್ಪ ಅಮ್ಮಂದಿರಿಗೆ ಮಕ್ಕಳೇ ಸರ್ವಸ್ವ. ಸಾಮಾನ್ಯವಾಗಿ ಪುಟ್ಟ ವಯಸ್ಸಿನಲ್ಲಿದ್ದಾಗ ಗಂಡು ಮಕ್ಕಳು ಅಮ್ಮನ ಜೊತೆ ಹಾಗೂ ಹೆಣ್ಣು ಮಕ್ಕಳು ಅಪ್ಪನ ಜೊತೆ ಒಡನಾಡ ಹೆಚ್ಚಿಟ್ಟುಕೊಂಡಿರುತ್ತಾರೆ. ಅದು ಸೈಕಾಲಜಿಕಲಿ ವೆರಿ ಕಾಮನ್ ವಿಷಯವೂ ಹೌದು. ಹೆಣ್ಣು ಮಗು ಎಂದರೆ ಭ್ರೂಣದಲ್ಲೇ ಕೊಲ್ಲುವ ಪಾಪಿಗಳೂ ಇದ್ಧಾರೆ. ಆದರೆ.. ಹೆಣ್ಣು ಮಗು ಜನಿಸಿದರೆ ಸಾಕ್ಷಾತ್ ಲಕ್ಷ್ಮಿ ದೇವಿ ಮನೆಗೆ ಬಂದಿದ್ದಾಳೆ ಎಂದು ಪೂಜಿಸುವವರೂ ಇದ್ದಾರೆ. ಹೆಣ್ಮಕ್ಕಳಿಗೆ ಅಪ್ಪಂದಿರು ಅಂದರೆ ತುಂಬಾ ಇಷ್ಟ . ಅಪ್ಪನೂ ಅಷ್ಟೆ ಮಗಳನ್ನು ಕಣ್ಣಿನಂತೆ ಜೋಪಾನ ಮಾಡುತ್ತಾನೆ. ಕೆಲವೊಮ್ಮೆ ಉಡುಗೊರೆ ನೀಡಿ ಅಚ್ಚರಿ ಮೂಡಿಸುತ್ತಾರೆ. ಕೆಲವರು ತಮ್ಮ ಮಗಳನ್ನು ರಾಜಕುಮಾರಿಯಂತೆ ನಡೆಸಿಕೊಳ್ಳುತ್ತಾರೆ. ಮಗುವಿನ ಬಗ್ಗೆ ಅವರು ತೋರಿಸುವ ಪ್ರೀತಿ ಮತ್ತು ಕಾಳಜಿ ಅಪಾರ. ಹಾಗೆ ಹೆಣ್ಣು ಮಕ್ಕಳನ್ನು ಪಂಚಪ್ರಾಣವಾಗಿ, ರಾಜಕುಮಾರಿಯಂತೆ ನೋಡಿಕೊಳ್ಳುವ ರಾಶಿಯವರನ್ನು ಲೆಕ್ಕ ಹಾಕಿ ನೋಡಿದಾಗ…
ಮಕರ ರಾಶಿ :
ಈ ರಾಶಿಯ ತಂದೆಯಂದಿರು ಸದಾ ತಮ್ಮ ಮಕ್ಕಳನ್ನು ಅದರಲ್ಲೂ ವಿಶೇಷವಾಗಿ ಮಗಳನ್ನು ಹೇಗೆ ಬೆಳೆಸಬೇಕೆಂದು ಯೋಚಿಸುತ್ತಲೇ ಇರುತ್ತಾರೆ. ಮಗಳಿಗೆ ಮನೆಯಲ್ಲಿ ಸೂಕ್ತ ವಾತಾವರಣ ಕಲ್ಪಿಸುತ್ತಾರೆ. ತಮ್ಮ ಮಗಳು ಸಂತೋಷದಿಂದ ಬದುಕುವುವಂತೆ ಮಾಡುವುದೇ ತಮ್ಮ ಜೀವನದ ಪರಮ ಗುರಿ ಎಂದು ಭಾವಿಸುತ್ತಾರೆ. ತಮ್ಮ ಹೆತ್ತವರು ಪೂರೈಸಲಾಗದ ಸಮಸ್ಯೆಗಳನ್ನು ತಮ್ಮ ಮಕ್ಕಳ ಆಕಾಂಕ್ಷೆಗಳು ಮತ್ತು ಆಸೆಗಳನ್ನು ಪೂರೈಸುವುದೇ ಸಾಧನೆ ಎಂದು ಅವರು ಪರಿಗಣಿಸುತ್ತಾರೆ. ಮಕ್ಕಳ ಕನಸುಗಳನ್ನು ನನಸು ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ.
ಕುಂಭ ರಾಶಿ :
ಕುಂಭದವರು ಮಗಳಲ್ಲಿ ಸದಾ ವಿಶ್ವಾಸಾರ್ಹತೆ ಮೂಡಿಸುವ ಕೆಲಸ ಮಾಡುತ್ತಾರೆ. ಮಗಳನ್ನು ಹೆಚ್ಚು ಗೌರವಿಸುತ್ತಾರೆ. ಇವರ ಪಾಲಿಗೆ ಹೆಣ್ಣು ಮಗಳು ಕೇವಲ ಮಗಳಲ್ಲ, ಮಹಾರಾಣಿ. ಅವಳಿಗೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುವುದು, ಅವಳ ಸಂತೋಷವಾಗಿರುವುದೇ ಇವರಿಗೆ ಮುಖ್ಯ. ತಮ್ಮ ಹೆಣ್ಣುಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುತ್ತಾರೆ. ಹೆಣ್ಣು ಮಕ್ಕಳನ್ನು ಮನೆಯ ಲಕ್ಷ್ಮಿ ದೇವತೆ ಮತ್ತು ಕುಟುಂಬಕ್ಕೆ ದೇವರು ಮಾಡಿದ ಆಶೀರ್ವಾದ ಎಂದೇ ಪರಿಗಣಿಸುತ್ತಾರೆ. ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸುತ್ತಾರೆ ಮತ್ತು ಅವರ ಬುದ್ಧಿವಂತಿಕೆಯನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ.
ಸಿಂಹ ರಾಶಿ :
ಇವರು ತಮ್ಮ ಮಕ್ಕಳಿಗೆ ಜೀವನದಲ್ಲಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರು ತಮ್ಮ ಸಂಗಾತಿಯ ಜೊತೆಗೆ ತಮ್ಮ ಮಕ್ಕಳ ಬಗ್ಗೆ ಪ್ರೀತಿಯನ್ನು ತೋರಿಸುತ್ತಾರೆ. ಹೆಣ್ಣು ಮಕ್ಕಳೊಂದಿಗೆ ಹರಟೆ ಹೊಡೆಯುವುದನ್ನು ಆನಂದಿಸುತ್ತಾರೆ. ಎಷ್ಟೇ ಬ್ಯುಸಿ ಇದ್ದರೂ ಅವರೊಂದಿಗೆ ಸಮಯ ಕಳೆಯುತ್ತಾರೆ. ಅವರು ಹೆಣ್ಣು ಮಕ್ಕಳನ್ನು ತಮ್ಮ ಜೀವನದ ಬೆಳಕು ಎಂದು ಪರಿಗಣಿಸುತ್ತಾರೆ. ಅವರಿಗೆ ಯಾವುದೇ ಕೊರತೆಯಿಲ್ಲದೆ ಎಲ್ಲವನ್ನೂ ನೀಡಲಾಗುತ್ತದೆ. ಸಿಂಹ ರಾಶಿಯವರು ಆಟಗಳಲ್ಲಿ ಮತ್ತು ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ಹೊಂದಿಲ್ಲದಿದ್ದರೂ, ಅವರು ತಮ್ಮ ಹೆಣ್ಣುಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಈ ಹವ್ಯಾಸಗಳಲ್ಲಿ ತೊಡಗುತ್ತಾರೆ. ಮಗಳಿಗೆ ಒಳ್ಳೆಯದಾಗುವ ಎಲ್ಲವನ್ನೂ ಮಾಡುವ ಈ ರಾಶಿಯವರು ಮಗಳಿಗಾಗಿ ಏನು ಮಾಡುವುದಕ್ಕೂ ಸೈ.
ಕರ್ಕಾಟಕ ರಾಶಿ :
ಇವರು ತಂದೆಯಾದಾಗ, ಸಂತೋಷ ಮತ್ತು ಉತ್ಸಾಹವು ಮಿತಿಯಲ್ಲಿರಲ್ಲ. ಮಕ್ಕಳ ಜನನದ ನಂತರ, ಅವುಗಳನ್ನು ಹೇಗೆ ಬೆಳೆಸುವುದು ಎಂಬುದರ ಕುರಿತು ಅನೇಕ ಆಲೋಚನೆ ಮಾಡ್ತಾರೆ. ಮಕ್ಕಳ ಭವಿಷ್ಯ ಸುಭದ್ರವಾಗಿರಲು ನಿರಂತರ ಶ್ರಮಿಸುತ್ತಾರೆ. ಹೆಣ್ಣು ಮಕ್ಕಳಿಗೆ ವಿಶೇಷ ಗಮನ ನೀಡುತ್ತಾರೆ. ಅವರನ್ನು ರಾಜಕುಮಾರಿಯರಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಸಾಕಷ್ಟು ಕಾಳಜಿ ವಹಿಸಲಾಗುತ್ತದೆ. ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಲು ಮಕ್ಕಳನ್ನು ಎಲ್ಲ ರೀತಿಯಲ್ಲೂ ತಯಾರು ಮಾಡುತ್ತಾರೆ. ಮಗಳ ಸ್ವಾಭಿಮಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ವಿಭಿನ್ನ ಆಸಕ್ತಿಗಳನ್ನು ತೆಗೆದುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ವ್ಯಕ್ತಿತ್ವ ಮತ್ತು ಗೌರವದ ಅರಿವು ಮೂಡಿಸುತ್ತಾರೆ. ಇವರದ್ದೊಂಥರಾ ಮಗಳನ್ನು ಜವಾಬ್ದಾರಿಯುತ ಹೆಣ್ಣಾಗಿಸುವ ಗುರಿಯಲ್ಲೆ ಬದುಕುವ ಜೀವ.



