ಆಧಾರ್ ಕಾರ್ಡ್ ತೋರಿಸಿ ಎಂದು ಕೇಳಿದ ಬಸ್ ಕಂಡಕ್ಟರ್ ಒಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಯಾದಗಿರಿ-ಕಲಬುರ್ಗಿ ಮಾರ್ಗದಲ್ಲಿ ಸಂಚರಿಸುವ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KKRTC) ಬಸ್‌ನ ಕಂಡಕ್ಟರ್, ಮಹಿಳೆಯ ಕಡೆಯವರಿಂದ ಹೊಡೆತ ತಿಂದಿದ್ದಾರೆ. ಆಧಾರ್ ಕಾರ್ಡ್ ತೋರಿಸಬೇಕಿದ್ದ ವ್ಯಕ್ತಿ ಒಬ್ಬ ಮುಸ್ಲಿಂ ಮಹಿಳೆ.
ಘಟನೆ ಹೇಗಾಯ್ತು..?
ವಾಡಿ ಬಳಿಯ ರಾವೂರ್‌ನಲ್ಲಿ KKRTC ಬಸ್‌ಗೆ ಓರ್ವ ಮುಸ್ಲಿಂ ಮಹಿಳೆ ಹತ್ತಿದ್ದಾರೆ. ಬಸ್ ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಆಧಾರ್ ಕಾರ್ಡ್ ತೋರಿಸಲು ಕೇಳಿದ್ದಾರೆ. ಶಕ್ತಿ ಸ್ಕೀಂನಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ. ಆದರೆ.. ಆಧಾರ್ ಕಾರ್ಡ್ ಇರಬೇಕು. ಅರ್ಜುನ್ ಕಟ್ಟಿಮನಿ ಅದನ್ನೇ ಕೇಳಿದ್ದಾರೆ. ಆಗ ಮಹಿಳೆ ತಮ್ಮ ಆಧಾರ್ ಕಾರ್ಡ್‌ನ ಝೆರಾಕ್ಸ್ ಪ್ರತಿಯನ್ನು ನೀಡಿದ್ದಾರೆ. ಆದರೆ, ಕಂಡಕ್ಟರ್ ಒರಿಜಿನಲ್ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ.
ಹಾಗೆ ಹೇಳಿದ ಕಂಡಕ್ಟರ್ ಬೇರೆಯವರಿಗೆ ಟಿಕೆಟ್ ಕೊಡುತ್ತಾ, ಆಧಾರ್ ಕಾರ್ಡ್ ಚೆಕ್ ಮಾಡುತ್ತಾ ಮುಂದೆ ಹೋಗಿದ್ದಾರೆ. ನಂತರ ವಾಪಸ್ ಬಂದು ಮತ್ತೊಮ್ಮೆ ಒರಿಜಿನಲ್ ಆಧಾರ್ ತೋರಿಸಲು ಕೇಳಿದ್ದಾರೆ.
ಮಹಿಳೆಯೇನೋ ಆಧಾರ್ ತೋರಿಸಿದ್ದಾರೆ. ಆದರೆ.. ಬೇರೆಯವರ ಆಧಾರ್ ತೋರಿಸಿದ್ದಾರೆ. ಕಂಡಕ್ಟರ್ ಸಿಟ್ಟಾಗಿ “ಇದು ನಿಮ್ಮ ಆಧಾರ್ ಕಾರ್ಡ್ ಅಲ್ಲ, ದಯವಿಟ್ಟು ಬಸ್‌ನಿಂದ ಇಳಿಯಿರಿ. ನೀವು ಇಂತಹ ಕೃತ್ಯ ಮಾಡಿದರೆ ನಮ್ಮ ಉದ್ಯೋಗಕ್ಕೆ ತೊಂದರೆಯಾಗುತ್ತದೆʼʼ ಎಂದು ಹೇಳಿದ್ದಾರೆ.
ತಕ್ಷಣ ಆ ಮಹಿಳೆ ತಮ್ಮ ಸಂಬಂಧಿಕರು, ನೆಂಟರು ಎಲ್ಲರನ್ನೂ ಫೋನ್ ಮಾಡಿ ಕರೆಸಿ ಜಗಳ ಮಾಡಿದ್ದಾರೆ. ವಾಡಿಯಲ್ಲಿ ಬಸ್ ಆಗಮಿಸಿದ ತಕ್ಷಣ, ಮಹಿಳೆಯ ಸಂಬಂಧಿಕರು ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಅವರ ಕೊರಳಪಟ್ಟಿ ಹಿಡಿದು ಮನಸೋ ಇಚ್ಛೆ ಥಳಿಸಿದ್ದಾರೆ. ಹಲ್ಲೆಯ ತೀವ್ರತೆಗೆ ಕಂಡಕ್ಟರ್ ಪ್ರಜ್ಞೆ ತಪ್ಪಿ ಕುಸಿದು ಬಿದ್ದರೂ, ಮಾನವೀಯತೆಯೇ ಇಲ್ಲದಂತೆ ಹಲ್ಲೆ ಮಾಡಿದ್ದಾರೆ.
ಸ್ಥಳೀಯರು ಹಾಗೂ ಪೊಲೀಸರು ಕಂಡಕ್ಟರ್‌ನನ್ನು ಬಿಡಿಸಿ, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಅರ್ಜುನ್ ಕಟ್ಟಿಮನಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೊಳಗಾದ ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಅವರ ಮೇಲೆ ನಡೆದ ಹಲ್ಲೆ ಕುರಿತಂತೆ ವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಶಕ್ತಿ ಯೋಜನೆಯಲ್ಲಿ ಮಹಿಳೆಯರು ರಾಜ್ಯದ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತ ಪ್ರಯಾಣ ಮಾಡಬಹುದು. ಆದರೆ.. ಕರ್ನಾಟಕದ ಸಿಟಿಜನ್ ಎಂಬುದಕ್ಕೆ ದಾಖಲೆ ತೋರಿಸುವುದು ಕಡ್ಡಾಯ. ಬೇರೆ ರಾಜ್ಯದ ನಾಗರಿಕರಿಗೆ ಈ ಸೌಲಭ್ಯ ಇರಲ್ಲ. ಹೀಗಾಗಿ ಕಂಡಕ್ಟರ್ ಆಧಾರ್ ಕಾರ್ಡ್ ತೋರಿಸುವಂತೆ ಕೇಳುತ್ತಾರೆ. ಕಂಡಕ್ಟರ್ ಕೇಳಿದಾಗ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ. ಇಲ್ಲದೇ ಹೋದಲ್ಲಿ ಟಿಕೆಟ್ ಖರೀದಿಸಬೇಕು. ಆದರೆ.. ಇಲ್ಲ ಆಧಾರ್ ತೋರಿಸೋದು ಬಿಡಿ. ಹಲ್ಲೆಯೇ ಆಗಿದೆ. ಇನ್ನೂ ಯಾರೊಬ್ಬರ ಅರೆಸ್ಟ್ ಕೂಡಾ ಆಗಿಲ್ಲ.



