ಸಿಂಪಲ್ ಸುನಿ. ಸಿಂಪಲ್ಲಾಗ್ ಲವ್ ಸ್ಟೋರಿ ಹೇಳಿಯೇ ಸಿಂಪಲ್ ಸ್ಟಾರ್ ಆದವರು ಸುನಿ. ಇದೀಗ ಸರಳ ಪ್ರೇಮಕಥೆ ಹೇಳುತ್ತಿದ್ದಾರೆ. ಸರಳ ಪ್ರೇಮ ಕಥೆಯ ಮೊದಲ ಹಾಡು.. ಬಿಡುಗಡೆಗೆ ಸಮಯ ಸನ್ನಿಹಿತವಾಗಿದೆ. ಈ ಪ್ರೇಮಕಥೆಯ ಹೀರೋ ವಿನಯ್ ರಾಜಕುಮಾರ್.
ಸಿಂಪಲ್ ಸುನಿ ಹೊಸ ವರ್ಷಕ್ಕೆ ಅದ್ಧೂರಿಯಾಗಿಯೇ ಒಂದು ಸರಳ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ. ಜನವರಿ 1ಕ್ಕೆ ಒಂದು ಸರಳ ಪ್ರೇಮಕಥೆಯ ಮೊದಲ ಹಾಡು ಬಿಡುಗಡೆಯಾಗುತ್ತಿದೆ.
ನೀನ್ಯಾರೆಲೆ.. ನಿನಗಾಗಿಯೇ..
ಈ ಜೀವ ಭಾವ ಸೋಜಿಗ..
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ..
ಎಂಬ ಹಾಡು ಜನವರಿ 1ಕ್ಕೆ ರಿಲೀಸ್ ಆಗುತ್ತಿದೆ. ಅರ್ಮಾನ್ ಮಲಿಕ್ ಬರೆದಿರುವ ಹಾಡಿಗೆ ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯ ನೀಡಿದ್ದಾರೆ. ಮೈಸೂರು ರಮೇಶ್ ನಿರ್ಮಾಣದ ಚಿತ್ರಕ್ಕೆ ಸುನಿಯವರೇ ಡೈರೆಕ್ಟರ್.
ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋಗೆ ಡೈರೆಕ್ಷನ್ ಮಾಡಿದ್ದಾರೆ ಸುನಿ. ವಿನಯ್ ರಾಜಕುಮಾರ್ ಹೀರೋ ಆಗಿರುವ ಚಿತ್ರಕ್ಕೆ ಇಬ್ಬರು ನಾಯಕಿಯರು. ತಮಿಳಿನ ಸ್ವಾತಿಷ್ಠ ಕೃಷ್ಣನ್ ಹಾಗೂ ರಾಧಾಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಾಯಕಿಯರಾಗಿದ್ದಾರೆ.
ವಿನಯ್ ರಾಜಕುಮಾರ್ ಅವರ ಕೊನೆಯ ಸಿನಿಮಾ 10. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ 10 ಸಿನಿಮಾ 2022ರ ಡಿಸೆಂಬರ್ 16ರಂದು ರಿಲೀಸ್ ಆಗಿತ್ತು. ಖುದ್ದು ರಾಜವಂಶದ ಅಭಿಮಾನಿ ದೇವರುಗಳಿಗೂ ಚಿತ್ರ ಬಿಡುಗಡೆಯಾಗಿದ್ದು ಗೊತ್ತಾಗಿರಲಿಲ್ಲ. ಎರಡೇ ದಿನಕ್ಕೆ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿತ್ತು. ಆದರೆ ಈ ಬಾರಿ ಸಿಂಪಲ್ ಸುನಿ ಡೈರೆಕ್ಟರ್ ಆಗಿದ್ದಾರೆ.
ಸಿಂಪಲ್ ಸುನಿ ಚಿತ್ರಗಳು ಸಿಂಪಲ್ ಆಗಿರುತ್ತವಾದರೂ, ಪ್ರಮೋಷ್ ಇರುತ್ತೆ. ಅದ್ಧೂರಿ, ಆರ್ಭಟದ ಪ್ರಚಾರ ಇರುವುದಿಲ್ಲ. ಡೀಸೆಂಟ್ ಪ್ರಮೋಷನ್ ಮಾಡ್ತಾರೆ. ಹೀಗಾಗಿ ಒಂದು ಸರಳ ಪ್ರೇಮ ಕಥೆಯ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಹುದು.



