ಗಂಡ ಹೆಂಡತಿ ಹೇಗಿರಬೇಕು ಅನ್ನೋದಕ್ಕೆ ಮಾದರಿ ಎನ್ನುವಂತಿತ್ತು ದೊಡ್ಮನೆ. ಡಾ.ರಾಜ್ ಕುಟುಂಬದಲ್ಲಿ ಎಲ್ಲರೂ ಆದರ್ಶ ದಂಪತಿಗಳೇ. ಡಾ.ರಾಜ್ ಪಾರ್ವತಮ್ಮ, ಶಿವಣ್ಣ-ಗೀತಾ, ರಾಘವೇಂದ್ರ ರಾಜ್ ಕುಮಾರ್-ಮಂಗಳಾ ಹಾಗೂ ಪುನೀತ್-ಅಶ್ವಿನಿ ಅವರು ಆದರ್ಶ ದಂಪತಿ ಎಂದೇ ಬಿಂಬಿಸಲ್ಪಟ್ಟಿದ್ದವರು. ಪುನೀತ್ ಆಘಾತಕಾರಿ ನಿಧನದ ನಂತರವೂ ಅಶ್ವಿನಿ, ದೊಡ್ಮನೆಯ ಹೆಮ್ಮೆಯ ಸೊಸೆ ಎಂದೇ ಅಭಿಮಾನಿಗಳು ಪ್ರೀತಿಸುತ್ತಾರೆ. ಇದುವರೆಗಿನ ದೊಡ್ಮನೆಯ ಇತಿಹಾಸದಲ್ಲಿಯೇ ಯಾರೂ ವಿಚ್ಚೇದನ ಪಡೆದುಕೊಂಡಿದ್ದು ಇಲ್ಲ.
ಅಂತಹ ಡೈವೋರ್ಸ್ ಅನ್ನೋದು ಇದೀಗ ದೊಡ್ಮನೆಗೂ ಕಾಲಿಟ್ಟಿದೆ. ಯುವ ರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಯುವ ರಾಜ ಕುಮಾರ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 6ರಂದು ಯುವ ರಾಜ್ಕುಮಾರ್ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಡಾ.ರಾಜ್ ಅವರ 2ನೇ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಮಗ ಗುರು ರಾಜ್ ಕುಮಾರ್. ಹಿರಿಯ ವಿನಯ್ ಅವರಿಗೆ ಇನ್ನೂ ಮದುವೆಯಾಗಿಲ್ಲ. ಚಿತ್ರರಂಗಕ್ಕೆ ಬಂದ ಮೇಲೆ ಯುವ ರಾಜ್ ಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದ ಯುವ ರಾಜ್ ಕುಮಾರ್ ಅವರೀಗ ವಿಚ್ಚೇದನಕ್ಕೆ ಮುಂದಾಗಿದ್ದಾರೆ.
MC ಌಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ. ವಿಚ್ಛೇದನದ ಕೇಸ್‌ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ.
2019ರಲ್ಲಿ ಯುವ ಅವರ ಮದುವೆ ಶ್ರೀದೇವಿ ಬೈರಪ್ಪ ಅವರ ಜೊತೆ ನೆರವೇರಿತ್ತು. ಒಂದು ವರ್ಷದಿಂದ ದಂಪತಿಯ ಮಧ್ಯೆ ಎಲ್ಲವೂ ಸರಿ ಇರಲಿಲ್ಲ ಪತಿ ಪತ್ನಿ ಪ್ರತ್ಯೇಕವಾಗಿದ್ದರು ಎನ್ನಲಾಗಿದೆ. ಎರಡೂ ಕುಟುಂಬದಿಂದ ಆಗಿರುವ ಭಿನ್ನಾಭಿಪ್ರಾಯ ಪರಿಹರಿಸಲು ಪ್ರಯತ್ನ ನಡೆದಿದ್ದರೂ ಪ್ರಯತ್ನಗಳೆಲ್ಲ ವಿಫಲವಾಗಿದ್ದವು.
ಪತ್ನಿಯಿಂದ ತನ ಮಾನಸಿಕ ಕಿರುಕುಳ ಆರೋಪ ನೀಡಿರುವ ಯುವ ರಾಜ್ ಕುಮಾರ್, ಪತ್ನಿಯಿಂದ ವಿಚ್ಚೇದನ ಬಯಸಿದ್ದಾರೆ. ಯುವ ರಾಜ್ ಕುಮಾರ್ ಅವರದ್ದು ಲವ್ ಮ್ಯಾರೇಜ್. ರಾಘವೇಂದ್ರ ರಾಜ್ ಕುಮಾರ್, ಪುನೀತ್ ಹಾಗೂ ಶಿವಣ್ಣ ಒಟ್ಟಿಗೇ ನಿಂತು ಮದುವೆ ನೆರವೇರಿಸಿದ್ದರು. ಸದ್ಯಕ್ಕೆ ಶ್ರೀದೇವಿ ವಿದೇಶದಲ್ಲಿದ್ದಾರೆ ಎನ್ನಲಾಗಿದೆ.
ಯುವ ಅವರ ಪ್ರೇಮ ವಿವಾಹಕ್ಕೆ ರಾಘವೇಂದ್ರ ಅವರು ಒಪ್ಪಿರಲಿಲ್ಲವಂತೆ. ಪುನೀತ್ ಅವರೊಂದಿಗೆ ಆತ್ಮೀಯವಾಗಿದ್ದ ಗುರು ಅರ್ಥಾತ್ ಯುವ, ಚಿಕ್ಕಪ್ಪನ ಎದುರು ಪ್ರೀತಿಯನ್ನು ಹೇಳಿಕೊಂಡಿದ್ದರು. ಅದಾದ ನಂತರ ಪುನೀತ್ ಅವರ ಇಬ್ಬರೂ ಅಣ್ಣಂದಿರನ್ನು ಒಪ್ಪಿಸಿ ಮದುವೆ ಮಾಡಿಸಿದ್ದರು ಎನ್ನಲಾಗಿದೆ.
ಶ್ರೀದೇವಿ ಭೈರಪ್ಪ ಅಣ್ಣಾವ್ರ ಕುಟುಂಬದ ಒಡೆತನದ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿ ವಹಿಸಿಕೊಂಡಿದ್ದರು. ಕಳೆದ ವರ್ಷ ವಿನಯ್ ಅವರ ಚಿತ್ರಗಳ ಪ್ರಚಾರದಲ್ಲೂ ಸಕ್ರಿಯರಾಗಿದ್ದ ಶ್ರೀದೇವಿ, ಆನಂತರ ಯುವ ಚಿತ್ರದ ಕಾರ್ಯಕ್ರಮದಲ್ಲಿ ಮಿಸ್ಸಿಂಗ್ ಆಗಿದ್ದರು.
ಯುವ ಚಿತ್ರದ ಮುಹೂರ್ತದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ, ಯುವ ಚಿತ್ರ ರಿಲೀಸ್ ವೇಳೆ ಶ್ರೀದೇವಿ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಆ ಸಂದರ್ಭದಲ್ಲಿ ಯುವ ಮತ್ತು ಶ್ರೀದೇವಿ ಮಧ್ಯೆ ಬಿರುಕು ಕಾಣಿಸಿಕೊಂಡಿತ್ತು. ಇಬ್ಬರ ನಡುವೆ ಮೂಡಿದ್ದ ಬಿರುಕನ್ನು ಸರಿ ಪಡಿಸಲು ರಾಘವೇಂದ್ರ ಮತ್ತು ಮಂಗಳ ದಂಪತಿ ವಿಫಲರಾದ ಮೇಲೆ, ಅಶ್ವಿನಿ, ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಕೂಡಾ ಪ್ರಯತ್ನಿಸಿದ್ದರು. ಆದರೆ, ಶ್ರೀದೇವಿ ಅವರು ಒಪ್ಪಿರಲಿಲ್ಲ ಎನ್ನಲಾಗಿದೆ. ಇದೀಗ ದಾಂಪತ್ಯ ವಿಚ್ಚೇದನದ ಅಂಚಿಗೆ ಬಂದು ನಿಂತಿದೆ.



