ಪೊಲೀಸರ ಕಣ್ತಪ್ಪಿಸಲು ನಂಬರ್ ಪ್ಲೇಟ್ (Number plate) ತೆಗೆದಿಟ್ಟು ವಾಹನ ಚಲಾಯಿಸುವವರಿಗೆ, ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವವರಿಗೆ, ನೋಂದಣಿ ಫಲಕವನ್ನೇ (registration Number) ಹೊಂದಿಲ್ಲದ ವಾಹನ ಎಲ್ಲರಿಗೂ ದಂಡ ಕಾದಿದೆ. ಅಕ್ಟೋಬರ್ 1ರಿಂದ ಇಂತಹ ವಾಹನಗಳನ್ನು ಸಿಕ್ಕಸಿಕ್ಕಲ್ಲಿ ಹಿಡಿದು ದಂಡ ಕಟ್ಟಿಸಲಿದ್ದಾರೆ ಪೊಲೀಸರು.
ಸಾರಿಗೆ ಇಲಾಖೆ ನಿಯಮಾನುಸಾರ ಏ.1, 2019 ರ ನಂತರ ನೊಂದಣಿ ಮಾಡಿಕೊಂಡ ಎಲ್ಲಾ ವಿಧದ ವಾಹನಗಳಿಗೆ ನ.17ರ ಒಳಗಾಗಿ (HSRP) ಹೆಚ್ಎಸ್ಆರ್ಪಿ (ಹೈ-ಸೆಕ್ಯುರಿಟಿ ರಿಜಿಸ್ಪ್ರೇಷನ್ ಪ್ಲೇಟ್ಸ್) ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ. ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಪಡೆಯಲು ಕರ್ನಾಟಕ ಸಾರಿಗೆ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ, ವೆಬ್ಸೈಟ್ನಲ್ಲಿ ವಾಹನದ ಉತ್ಪಾದಕ ಕಂಪನಿ ಹಾಗೂ ಇತರೆ ಮೂಲಭೂತ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಹತ್ತಿರ ಡೀಲರ್ ಸ್ಥಳವನ್ನು ನಿಗದಿ ಮಾಡಿಕೊಂಡು, ಆನ್ಲೈನ್ ಮೂಲಕವೇ ಹಣ ಪಾವತಿಸಿಬೇಕು. ನಂತರ ವಾಹನ ಮಾಲೀಕರ ಮೊಬೈಲ್ ನಂಬರ್ಗೆ ಬರುವ ಒಟಿಪಿ ಮಾಹಿತಿ ನಮೂದಿಸಿ, ದಿನಾಂಕ ಹಾಗೂ ಸಮಯ ನಿಗದಿ ಮಾಡಿಕೊಂಡು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದು. ಸಾರಿಗೆ ಇಲಾಖೆಯಿಂದ ಗುರುತಿಸಿದ ಮೂಲ ವಾಹನ ಉತ್ಪಾದನಕ ಕಂಪನಿಗಳು ಹಾಗೂ ಅಧಿಕೃತ ವಾಹನ ಡೀಲರ್ಗಳು ಮಾತ್ರ HSRP ನಂಬರ್ ಪ್ಲೇಟ್ ಅಳವಡಿಸಲು ಮಾನ್ಯತೆ ಹೊಂದಿರುತ್ತಾರೆ. ವಾಹನ ಮಾಲೀಕರು ವೆಬ್ಸೈಟ್ ಮೂಲಕವೇ ನೊಂದಣಿ ಮಾಡಿಕೊಂಡು HSRP ನಂಬರ್ ಪ್ಲೇಟ್ ವಾಹನಗಳಿಗೆ ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆ ತಿಳಿಸಿದೆ.
ಇದನ್ನು ಮಾಡಬೇಡಿ
ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹಾಲೋಗ್ರಾಮ್, ಐಎನ್ಡಿ ಮಾರ್ಕ್/ಇಂಡಿಯಾ ಎಂದು ಕೆತ್ತಿದ ಅನುಕರಣೆಯ HSRP ಪ್ಲೇಟ್ಗಳು, ಸ್ಮಾರ್ಟ್ ನಂಬರ್ ಪ್ಲೇಟ್ಗಳನ್ನು ಅಳವಡಿಸಬಾರದು.
ವರ್ಗಾವಣೆ ಕಷ್ಟ
HSRP ಅಳವಡಿಸದಿದ್ದರೆ ವಾಹನ ಮಾಲೀಕತ್ವ, ವಿಳಾಸ ವರ್ಗಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಸೇವೆಗೆ ಅನುಮತಿ ಇಲ್ಲ
ದಂಡಕ್ಕೆ ರಿಯಾಯತಿ
ಶುಲ್ಕ ಪಾವತಿಸಿರುವ ಪ್ರಕರಣಗಳಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ HSRP ರಸೀದಿ ಇಟ್ಟುಕೊಂಡರೆ ಯಾವುದೇ ದಂಡ ವಿಧಿಸುವುದಿಲ್ಲ.
ಪೇಟ್ ಅಳವಡಿಕೆ ಸ್ಥಳ
ವಾಹನ ಮಾಲೀಕರ ಕಚೇರಿ ಆವರಣ, ಮನೆಯ ಸಮೀಪದ ಸ್ಥಳವನ್ನು ಎಚ್ಎಸ್ಆರ್ಪಿ ಅಳವಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದು.
ಎಚ್ಎಸ್ಆರ್ಪಿ ಅಳವಡಿಕೆ ವಿಧಾನ:
https://transpot.karnataka.gov.in ಅಥವಾ www.siam.in ಭೇಟಿ ನೀಡಿ, ಬುಕ್ ಎಚ್ಎಸ್ಆರ್ಪಿ ಕ್ಲಿಕ್ ಮಾಡಿ
* ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ
* ವಾಹನದ ಮೂಲ ವಿವರ ಭರ್ತಿ ಮಾಡಿ
* ನಿಮ್ಮ ಅನುಕೂಲಕ್ಕೆ ತಕ್ಕ ಡೀಲರ್ ಸ್ಥಳ ಆಯ್ಕೆ ಮಾಡಬೇಕು
* ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಬೇಕು.
* ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುತ್ತದೆ
* ನಿಮ್ಮ ಅನುಕೂಲಕ್ಕಾಗಿ ಎಚ್ಎಸ್ಆರ್ಪಿ ಅಳವಡಿಕೆಯ ದಿನಾಂಕ, ಸಮಯ,ಸ್ಥಳ ಆಯ್ಕೆ ಮಾಡಬೇಕು



