ರಾಜಕೀಯ ಸಂಸಾರ, ಕುಟುಂಬಗಳನ್ನು ಬೇರೆ ಮಾಡುವುದು ಹೊಸದೇನಲ್ಲ. ರಾಜಕೀಯದಲ್ಲಿ ಅಣ್ಣ ತಮ್ಮ ಶತ್ರುಗಳಾಗುತ್ತಾರೆ. ಗಂಡ ಹೆಂಡತಿಯರೇ ವೈರಿಗಳಾಗುತ್ತಾರೆ. ಈಗ ಮತ್ತೊಂದು ಕುಟುಂಬ ಒಡೆದು ಹೋಗಿದೆ. ಬಾಗಲಕೋಟೆಯ ಸಚಿವ ಶಿವಾನಂದ ಪಾಟೀಲ್ ಅವರ ಕುಟುಂಬ ಇಂತಾದ್ದೊಂದು ವಿಪ್ಲವಕ್ಕೆ ಸಾಕ್ಷಿಯಾಗುತ್ತಿದೆ.
ಶಿವಾನಂದ ಪಾಟೀಲ್ ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಮಿನಿಸ್ಟರ್. ಮಗಳು ಸಂಯುಕ್ತಾ ಪಾಟೀಲ್ ಅವರಿಗೆ ಹೊಡೆದಾಡಿ ಬಡಿದಾಡಿ ಟಿಕೆಟ್ ಗಿಟ್ಟಿಸಿಕೊಂಡಿದ್ಧಾರೆ. ಆ ವಿಷಯಕ್ಕೆ ಒಂದು ಹಂತಕ್ಕೆ ಆಪ್ತರಾಗಿದ್ದ ಶಾಸಕ ವಿಜಯಾನಂದ ಪಾಟೀಲ್, ಅವರ ಪತ್ನಿ ವೀಣಾ ಕಾಶಪ್ಪನವರ್ ಅವರು ಶಿವಾನಂದ ಪಾಟೀಲ್ ಅವರಿಂದ ದೂರವಾಗಿದ್ಧಾರೆ. ಮತ್ತೊಂದೆಡೆ ಅವರ ಮಗ ಹರ್ಷ ಪಾಟೀಲ್ ಬಿಜೆಪಿ ಸೇರಿದ್ಧಾರೆ. ತಂಗಿಯ ವಿರುದ್ಧವೇ ಪ್ರಚಾರ ಮಾಡಲಿದ್ಧಾರೆ.
ಅಣ್ಣ ವಿರುದ್ಧ ಪ್ರಚಾರ ಮಾಡುತ್ತಿದ್ದರೆ, ಅಪ್ಪ ತಮ್ಮ ಪ್ರಚಾರ ಮಾಡುತ್ತಿದ್ಧಾರೆ.. ನಮ್ಮ ತಂದೆ (ಶಿವಾನಂದ ಪಾಟೀಲ್) ನಾ ಚಿಕ್ಕವಳಿದ್ದಾಗ ಬಹಳ ಬ್ಯೂಸಿಯಾಗಿರುತ್ತಿದ್ದರು. ಹೀಗಾಗಿ ನಾನು ಬೆಳೆದಿರುವುದು ನಮ್ಮ ದೊಡ್ಡಪ್ಪ ಶಿವಶರಣಗೌಡ (ಹರ್ಷಗೌಡ) ಅವರ ಮಡಿಲಲ್ಲಿ. ತುಂಬಾ ಸಮಯ ಅವರ ಜೊತೆ ಕಳೆದಿದ್ದೇನೆ. ಈಗಲೂ ಅವರು ನಮ್ಮ ತಂದೆಗಿಂತಲೂ ಹೆಚ್ಚು ನನ್ನನ್ನು ಪ್ರೀತಿ ಮಾಡುತ್ತಾರೆ. ನಾನು ಎಲ್ಲೆ ಹೋದರೂ ಅವರು ನನ್ನ ಪರವಾಗಿ ಬರುತ್ತಾರೆ. ಇದೀಗ ಚುನಾವಣೆಗೆ ನಿಂತಿದ್ದೇನೆ ಮಗಳಿಗೋಸ್ಕರ ಬರದೆ ಮತ್ಯಾರಿಗೋಸ್ಕರ ಬರುತ್ತಾರೆ. ಅವರಿಗೆ ನನ್ನ ಮೇಲೆ ಜಾಸ್ತಿ ಪ್ರೀತಿ. ಹರ್ಷಗೌಡ ನನ್ನ ದೊಡ್ಡಪ್ಪನ ಮಗ, ಸ್ವಂತ ಅಣ್ಣ ಅಲ್ಲ. ಅವರು ಮೊದಲಿನಿಂದಲೂ ಬಿಜೆಪಿ ಆರ್ಎಸ್ಎಸ್ನಲ್ಲಿ ಗುರುತಿಸಿಕೊಂಡಿದ್ದಾರೆ. ಇವಾಗ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಕ್ಕೆ ಹೊಸದು ಅನಿಸುತ್ತಿದೆ ಎಂದಿದ್ದಾರೆ.
ಶಿವಾನಂದ ಪಾಟೀಲ್ ಹಿರಿಯ ರಾಜಕಾರಣಿಯಾಗಿದ್ದು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಮ್ಮದೆಯಾದ ಪ್ರಭಾವವನ್ನು ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮಗಳನ್ನು ಕಣಕ್ಕೆ ಇಳಿಸಿದ್ದಾರೆ.
ಅವರು ಬಿಜೆಪಿ ಸೇರಿರುವುದು ತಮ್ಮ ಕುಟುಂಬಕ್ಕೆ ಆಸ್ಚರ್ಯವೇನೂ ತಂದಿಲ್ಲ, ಬಿಜೆಪಿ ನಾಯಕರ ಜೊತೆ ಒಡನಾಟವಿಟ್ಟುಕೊಂಡಿದ್ದು ಗೊತ್ತಿತ್ತು ಎಂದರು. ಕುಟುಂಬಕ್ಕಾಗಲಿ ಪಕ್ಷಕ್ಕಾಗಲಿ ಮುಜುಗುರ ಉಂಟಾಗುವ ಸ್ಥಿತಿಯೇನೂ ನಿರ್ಮಾಣವಾಗಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಮಗೆ ಇಷ್ಟವಾಗುವ ಪಕ್ಷವನ್ನು ಆಯ್ಕೆಮಾಡಿಕೊಳ್ಳುವ ಮತ್ತು ನಿಷ್ಠೆ ಪ್ರದರ್ಶಿಸುವ ಸ್ವಾತಂತ್ರ್ಯ ಮತ್ತು ಹಕ್ಕಿದೆ ಎಂದಿದ್ಧಾರೆ ಸಂಯುಕ್ತಾ. ಅಂದಹಾಗೆ ಸಂಯುಕ್ತಾ ಪಾಟೀಲ್ ಶಿವಾನಂದ ಪಾಟೀಲ್ ಅವರ ಮಗಳಾದರೆ, ಶಿವಾನಂದ ಪಾಟೀಲರ ಅಣ್ಣ ದೊಡ್ಡಪ್ಪ ಶಿವಶರಣಗೌಡ ಪಾಟೀಲ್ ಅವರ ಮಗ ಹರ್ಷ ಪಾಟೀಲ್. ಆದರೆ.. ಹರ್ಷ ಅವರ ತಂದೆ ಶಿವಶರಣಗೌಡ ಪಾಟೀಲ್ ಕಾಂಗ್ರೆಸ್ ಪರ ಅಂದರೆ.. ತಮ್ಮನ ಮಗಳ ಪರ ಪ್ರಚಾರ ಮಾಡ್ತಿದ್ದಾರೆ.
ಇದು ಹೊಸದೇನಲ್ಲ. ಕರ್ನಾಟಕದಲ್ಲಿಯೇ ಬಂಗಾರಪ್ಪನವರ ಕುಟುಂಬ ಕಾಂಗ್ರೆಸ್, ಬಿಜೆಪಿಯಲ್ಲಿ ಒಡೆದು ಹೋಗಿದೆ. ಮಧು ಬಂಗಾರಪ್ಪ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ. ಅಕ್ಕ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ. ಆದರೆ.. ಅಣ್ಣ ಕುಮಾರ್ ಬಂಗಾರಪ್ಪ ಬಿಜೆಪಿಯ ನಾಯಕ.
ರಾಷ್ಟ್ರ ಮಟ್ಟದಲ್ಲೂ ಅಷ್ಟೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕಾಂಗ್ರೆಸ್ಸಿನವರಾದರೆ.. ರಾಜೀವ್ ಗಾಂಧಿಯವರ ತಮ್ಮ ಸಂಜಯ್ ಗಾಂಧಿಯವರ ಪತ್ನಿ ಮನೇಕಾ ಗಾಂಧಿ, ವರುಣ್ ಗಾಂಧಿ ಬಿಜೆಪಿಯಲ್ಲಿದ್ದಾರೆ.
ಇನ್ನು ಜಾರಕಿಹೊಳಿ ಕುಟುಂಬದಲ್ಲಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದರೆ, ಸತೀಶ್ ಜಾರಕಿಹೊಳಿ ಕಾಂಗ್ರೆಸ್ಸಿನಲ್ಲಿದ್ದಾರೆ.
ರೆಡ್ಡಿ ಬ್ರದರ್ಸ್ ಕೂಡಾ ಈಗ.. ಒಂದೇ ಕಡೆ ಸೇರಿದ್ಧಾರೆ. ಇದಕ್ಕೆ ಮೊದಲು ಜನಾರ್ದನ ರೆಡ್ಡಿಯೇ ಸಪರೇಟ್, ಸೋಮಶೇಖರ್ ಹಾಗೂ ಕರುಣಾಕರ ರೆಡ್ಡಿಯೇ ಸಪರೇಟ್ ಆಗಿದ್ದರು.
ಇನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ಬಿಜೆಪಿಯ ಆರ್ಥಿಕ ನೀತಿಗಳನ್ನು ಟೀಕಿಸುತ್ತಲೇ ಇರುತ್ತಾರೆ. ಒಂದೇ ಮನೆಯಲ್ಲಿದ್ಧಾರೆ.
ಇಂತಹ ಒಡೆದು ಹೋದ ಕುಟುಂಬಗಳು ದೇಶಾದ್ಯಂತ ಹಲವು ಕಡೆ ಇವೆ.



