ದ್ವಾರಕೀಶ್ ಅವರ ಸಾವು ಅವರ ಪತ್ನಿ ಮೃತಪಟ್ಟ ದಿನವೇ ಆಗಬೇಕೆಂದು ವಿಧಿಯೇ ಬರೆದಿತ್ತೋ.. ಅಥವಾ.. ಹೆಂಡತಿಯನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ದ್ವಾರಕೀಶ್ ಅವರೇ ಅದನ್ನು ನಿರ್ಧಾರ ಮಾಡಿದ್ದರೋ.. ಗೊತ್ತಿಲ್ಲ. ಇನ್ನು ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ.. ಹಾಸ್ಯಕ್ಕೆ ಮತ್ತೊಂದು ಹೆಸರಾಗಿದ್ದ ದ್ವಾರಕೀಶ್ ಅವರ ಸಾವಿನ ದಿನ ಮತ್ತು ಚಾರ್ಲಿ ಚಾಪ್ಲಿನ್ ಜನ್ಮ ದಿನ ಎರಡೂ ಒಂದೇ.
ದ್ವಾರಕೀಶ್ ಅವರಿಗೆ ಇಬ್ಬರು ಪತ್ನಿಯರು. ಮೊದಲನೆಯವರು ಅಂಬುಜಾ. ಎರಡನೇ ಪತ್ನಿ ಶೈಲಜಾ. ಮೊದಲ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ದ್ವಾರಕೀಶ್, ಎರಡನೇ ಮದುವೆಯಾಗಿದ್ದು ವಿಚಿತ್ರ ಸನ್ನಿವೇಶದಲ್ಲಿ. ನನ್ನ ಅಂಬುಜಾ ನಾನು ಶೈಲಜಾಳನ್ನು ಮದುವೆಯಾಗಿದ್ದಕ್ಕೆ ವಿರೋಧಿಸಲಿಲ್ಲ.. ಆದರೆ.. ತುಂಬಾ ಹರ್ಟ್ ಆಗಿದ್ದಳು ಎಂದು ಹೇಳಿಕೊಳ್ಳುತ್ತಿದ್ದ ದ್ವಾರಕೀಶ್, ಅಂಬುಜಾ ಅವರು ದೂರವಾದ ಮೇಲೆ ಖಿನ್ನತೆಗೆ ಜಾರಿದ್ದುದೂ ಹೌದು.
ಏಪ್ರಿಲ್ 16, 2021ರಂದು ಅಂಬುಜಾ ಸಾವನ್ನಪ್ಪಿದರು. ಎರಡನೇ ಪತ್ನಿ ಮತ್ತು ಮಕ್ಕಳು ಇದ್ದರೂ.. ಒಂಟಿತನದಿಂದ ಒದ್ದಾಡುತ್ತಿದ್ದ ದ್ವಾರಕೀಶ್.. ಒಬ್ಬಂಟಿಯಾಗಿ ಜೀವನ ಮಾಡೋದು ಕಷ್ಟ. ಬೇಗ ಅವಳನ್ನ ಸೇರಿಕೊಳ್ಳಬೇಕು ಎಂದು ಹೇಳಿಕೊಳ್ಳುತ್ತಿದ್ದರು.
ಏಪ್ರಿಲ್ 16, ಮಂಗಳವಾರ ಬೆಳಗ್ಗೆ 9.45 ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ದ್ವಾರಕೀಶ್ ಚಿರನಿದ್ರೆಗೆ ಜಾರಿದ್ದಾರೆ. ವಿಧಿಬರಹ ನೋಡಿ.. ಮೊದಲ ಪತ್ನಿ ಅಂಬುಜಾ ಸರಿಯಾಗಿ ಮೂರು ವರ್ಷಗಳ ಹಿಂದೆ ಅದೇ ಸಮಯಕ್ಕೆ ಮೃತಪಟ್ಟಿದ್ದರು. ಅದೇ ದಿನ.
ಏಪ್ರಿಲ್ 16, 2021 ರಂದು ಬೆಳಗ್ಗೆ 9.45 ಸುಮಾರಿಗೆ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ಮೃತಪಟ್ಟ ದಿನ ಮತ್ತು ಸಮಯ. ದ್ವಾರಕೀಶ್ ಅವರು ಮೃತಪಟ್ಟ ಸಮಯ ಮತ್ತು ದಿನವೂ ಅದೇ.
ದ್ವಾರಕೀಶ್ ಅವರಿಗಿಂತ ಅಂಬುಜಾ 6 ತಿಂಗಳು ಹಿರಿಯರು. ಆಗಿನ ಕಾಲಕ್ಕೇ ಎಂಎಸ್‌ಸಿ ಮಾಡಿದ್ದ ಅಂಬುಜಾ ಕಾಲೇಜ್ ಲೆಕ್ಚರರ್ ಆಗಿದ್ದರು. ದ್ವಾರಕೀಶ್ ಅವರನ್ನು ಲವ್ ಮಾಡಿ ಮದುವೆಯಾಗಿದ್ದರು. ಮದುವೆಯಾದ ಮೇಲೆ ಕೆಲಸ ಬಿಟ್ಟಿದ್ದರು. ಅಂಬುಜಾ-ದ್ವಾರಕೀಶ್ ದಂಪತಿಗೆ ಒಟ್ಟು ಐವರು ಮಕ್ಕಳು. ಸಂತೋಷ್, ಯೋಗೀಶ್, ಗಿರೀಶ್, ಸುಖೀಶ್, ಅಭಿಲಾಷ್.
ಇನ್ನು ಎರಡನೇ ಪತ್ನಿ ಶೈಲಜಾ. ಬಿಎಸ್‌ಸಿ ಪದವೀಧರೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ತಮ್ಮ ಅಕ್ಕನ ಮಗಳಿಗೆ ಚಿತ್ರದಲ್ಲಿ ಅವಕಾಶ ಕೇಳಿಕೊಂಡು ಬಂದಿದ್ದವರು. ಆದರೆ.. ಅಕ್ಕನ ಮಗಳಿಗೆ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲವಾದರೂ.. ದ್ವಾರಕೀಶ್ ಅವರ ಜೊತೆ ಪ್ರೀತಿ ಬೆಳೆಯಿತು. ಅದು ಗೌರಿ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯ. ಅಂಬುಜಾ ಅವರ ಅನುಮತಿ ಪಡೆದುಕೊಂಡೇ ಶೈಲಜಾ ಅವರನ್ನು ಮದುವೆಯಾಗಿದ್ದರು ದ್ವಾರಕೀಶ್.
ಇನ್ನು ಕಾಕತಾಳೀಯ ಎಂಬಂತೆ.. ಚಾರ್ಲಿ ಚಾಪ್ಲಿನ್ ಜನ್ಮದಿನದಂದೇ ದ್ವಾರಕೀಶ್ ನಿಧನರಾಗಿದ್ಧಾರೆ. ಸಾವು ಕೂಡಾ ಚಾಪ್ಲಿನ್ ಅವರಿಗೆ ಬಂದ ಹಾಗೆಯೇ ಬಂದಿದೆ. ಚಾರ್ಲಿ ಚಾಪ್ಲಿನ್ ಹೆಸರು ಕೇಳಿದರೆ..ಜಗತ್ತಿನ ಚಿತ್ರ ಪ್ರೇಮಿಗಳ ತುಟಿಯಂಚಿನಲ್ಲಿ ಸಣ್ಣದೊಂದು ನಗು ಮೂಡುತ್ತದೆ. ಮೂಕಿ ಚಿತ್ರಗಳ ಕಾಲದಲ್ಲಿ ಒಂದೇ ಒಂದು ಮಾತಿಲ್ಲದೆ ನಕ್ಕು ನಲಿಸಿದ ಚಾರ್ಲಿ ಚಾಪ್ಲಿನ್, ಅಂತಹ ಹಿಟ್ಲರ್ʻನಂತಹ ಹಿಟ್ಲರ್ʻಗೂ ಭಯ ಹುಟ್ಟಿಸಿದ್ದ.
ಜಗತ್ತು ಕಂಡ ಪರಮಕ್ರೂರಿ ಸರ್ವಾಧಿಕಾರಿ ಲಕ್ಷಾಂತರ ಅಮಾಯಕರ ಮಾರಣ ಹೋಮ ನಡೆಸಿದ ಪಾತಕಿಯೊಬ್ಬನನ್ನು ಹೆದರಿಸಿದ್ದು ಚಾರ್ಲಿ ಚಾಪ್ಲಿನ್ ಎಂಬ ಹಾಸ್ಯ ಕಲಾವಿದ. ಯಾರೇ ಚೆನ್ನಾಗಿ ಕಾಮಿಡಿ ಮಾಡಲಿ.. ಅವರನ್ನು ಚಾರ್ಲಿ ಚಾಪ್ಲಿನ್ ಅವರಿಗೆ ಹೋಲಿಸುವುದು ಸಂಪ್ರದಾಯವೇ ಆಗಿ ಹೋಗಿದೆ.
ಕನ್ನಡದಲ್ಲಿ ಚಾರ್ಲಿ ಚಾಪ್ಲಿನ್ ಅವರಿಗೆ ಹೋಲಿಕೆ ಮಾಡಿದ್ದು ಇಬ್ಬರನ್ನು. ಒಬ್ಬರು ದ್ವಾರಕೀಶ್. ಮತ್ತೊಬ್ಬರು ನರಸಿಂಹ ರಾಜು. ಹಾಗೆ ನೋಡಿದರೆ.. ನರಸಿಂಹ ರಾಜು ಅವರು ಚಾಪ್ಲಿನ್ ಅವರಿಗಿಂತ ಹೆಚ್ಚು ವಿಶಿಷ್ಟ ಪಾತ್ರಗಳನ್ನು ಮಾಡಿದವರು. ದ್ವಾರಕೀಶ್ ಕೂಡಾ ನರಸಿಂಹ ರಾಜು ಅವರ ಜಾಗವನ್ನು ಸಮರ್ಥವಾಗಿ ತುಂಬಿದ್ದವರು.
ದ್ವಾರಕೀಶ್ ನಿಧನರಾಗಿದ್ದಾರೆ. ಅದೂ ಏಪ್ರಿಲ್ 16ನೇ ತಾರೀಕು. ಏಪ್ರಿಲ್ 16, 2024. ದ್ವಾರಕೀಶ್ ಮೃತಪಟ್ಟ ದಿನ.
ಏಪ್ರಿಲ್ 16, 1977. ಚಾರ್ಲಿ ಚಾಪ್ಲಿನ್ ಜನಿಸಿದ ದಿನ.
ಅಷ್ಟೇ ಅಲ್ಲ.. ಚಾಪ್ಲಿನ್ ಮೃತಪಟ್ಟಿದ್ದು ಕ್ರಿಸ್ ಮಸ್ ದಿನ. ಡಿಸೆಂಬರ್ 25ನೇ ತಾರೀಕು. ದ್ವಾರಕೀಶ್ ಅವರಂತೆಯೇ ಚಾಪ್ಲಿನ್ ಕೂಡಾ ಮೃತಪಟ್ಟಿದ್ದು ನಿದ್ರೆಯಲ್ಲಿ.
ಪತ್ನಿ ಮೃತಪಟ್ಟ ಅದೇ ದಿನ.. ಅದೇ ಸಮಯದ ಸಾವಿನಲ್ಲೇ ಇಹಲೋಕಕ್ಕೆ ವಿದಾಯ ಹೇಳಿದ ವಿಚಿತತ್ರ ಕಾಕತಾಳೀಯಗಳ ಜೊತೆ ಇದು ಇನ್ನೊಂದು.
ಅಂಬುಜಾ ಅವರು ಮೃತಪಟ್ಟ ದಿನ.. ಅದೇ ಸಮಯದಕ್ಕೆ ದ್ವಾರಕೀಶ್ ಅವರೂ ಇನ್ನಿಲ್ಲವಾದರು ಎನ್ನುವುದು ವಿಧಿಬರಹವೋ.. ಕಾಕತಾಳೀಯವೋ..



