ಜಗತ್ತು ವಿಲೇಜ್ ಆಗುತ್ತಿದೆ. ಗ್ಲೋಬಲ್ ವಿಲೇಜ್ ಆಗಿರುವ ಸಮಯದಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಆಪ್ ಇವೆ. ವಿಶೇಷವೆಂದರೆ, ಓದು, ಬರಹ ಬಾರದ ರೈತರಿಗಾಗಿಯೂ ಪ್ರತ್ಯೇಕ ಆಪ್ʻಗಳಿವೆ. ಈ ಆಪ್ʻಗಳನ್ನು ಬಳಸಿಕೊಂಡು ಬೇಕಿರುವ ಮಾಹಿತಿ ಪಡೆದುಕೊಳ್ಳಬಹುದು. ಏಕೆಂದರೆ ಈ ಆಪ್ಸ್ ಇರುವುದೇ ಕೃಷಿಕರಿಗಾಗಿ, ಕೃಷಿಕರಿಗೋಸ್ಕರ.
ಕೃಷಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯಲ್ಲಿ ಡಜನ್ ಆ್ಯಪ್‌ಗಳಿವೆ. ಆದರೆ ಇವೆಲ್ಲ ಬಹುತೇಕ ರೈತರಿಗೆ ಗೊತ್ತಿರಲ್ಲ. ಇವುಗಳನ್ನು ಬಳಸಿಕೊಂಡರೆ, ರೈತರು ಕೂಡಾ ಹಲವು ಯೋಜನೆಗಳ ಸಹಾಯ ಪಡೆಯಬಹುದು.
ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್
ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ರೈತರೇ ಆಯಾ ಹಂಗಾಮುವಾರು ಸಮೀಕ್ಷೆ ನಡೆಸಬಹುದು. ಕೃಷಿ ಇಲಾಖೆಯವರೂ ಮಾಹಿತಿ ಕೊಡ್ತಾರೆ. ನೀವೂ ಕೃಷಿ ಇಲಾಖೆಗೆ ಮಾಹಿತಿ ಕೊಡಬಹುದು. ಯಾವ ಸಮಯ, ಯಾವ ಭೂಮಿಯಲ್ಲಿ ಯಾವ ಬೆಳೆ ಬೆಳೆದರೆ ಲಾಭ ಎಂಬ ಮಾಹಿತಿಯೂ ಇದರಲ್ಲಿ ಸಿಗುತ್ತದೆ.
ಬೆಳೆ ದರ್ಶಕ ಆ್ಯಪ್
ಜಿಪಿಎಸ್ ಎಂದರೆ ಕೇವಲ ರೋಡ್ ಮ್ಯಾಪ್ ತೋರಿಸುವುದಲ್ಲ. ತಮ್ಮ ಜಮೀನು ಒಣ ಇಲ್ಲವೇ ನೀರಾವರಿ ಬೇಸಾಯ ಎಂಬುದನ್ನು ಆಯ್ಕೆ ಮಾಡಿಕೊಂಡು, ಜಿಪಿಎಸ್ ಮೂಲಕ ಎಷ್ಟು ಎಕರೆ ಹಿಡುವಳಿಯಲ್ಲಿ ಯಾವ ಬೆಳೆ ಬೆಳೆದಿದ್ದೇನೆ ಎಂಬುದನ್ನು ಬೆಳೆ ದರ್ಶಕ ಆ್ಯಪ್‌ನಲ್ಲಿ ದಾಖಲಿಸಬಹುದು. ಕೃಷಿ ಇಲಾಖೆ ಪರವಾಗಿ ಆಯಾ ಗ್ರಾಮದ ಖಾಸಗಿ ನಿವಾಸಿಗಳು ಈ ಆ್ಯಪ್‌ನಲ್ಲಿ ತಪ್ಪಾಗಿ ನಮೂದಿಸಿದ್ದರೆ, ಈ ಆ್ಯಪ್ ಮೂಲಕ ರೈತರು ಆಕ್ಷೇಪ ಸಲ್ಲಿಸಬಹುದು. ಇದು ಇನ್ಷೂರೆನ್ಸ್, ಮತ್ತಿತರ ಯೋಜನೆಗಳ ನೆರವು ಪಡೆಯುವುದಕ್ಕೆ ಅನುಕೂಲ.
ಪಿಎಂ ಕಿಸಾನ್
ಕೃಷಿ ಇಲಾಖೆಯ ಜನಪ್ರಿಯ ಯೋಜನೆಯಾಗಿರುವ ಪಿಎಂ ಕಿಸಾನ್ ಪಬ್ಲಿಕ್ ಪೋರ್ಟಲ್ ವಿಷಯ ಬಹುತೇಕ ರೈತರಿಗೆ ಗೊತ್ತಿದೆ. ಗೊತ್ತಿಲ್ಲದೆ ಇರುವವರಿಗೆ ತಿಳಿಸಿ. ಪ್ರತಿ 4 ತಿಂಗಳಿಗೊಮ್ಮೆ 2 ಸಾವಿರ ರೂ. ದಂತೆ ವರ್ಷಕ್ಕೆ 6 ಸಾವಿರ ರೂ. ರೈತರ ಬ್ಯಾಂಕ್ ಖಾತೆಗೆ ದೇಶಾದ್ಯಂತ ಡಿಬಿಟಿ ಮೂಲಕ ನೇರವಾಗಿ ಜಮೆಯಾಗುವ ಮೊತ್ತವನ್ನು ಪರಿಶೀಲಿಸಿಕೊಳ್ಳಬಹುದು.
ಫಸಲ್ ಭಿಮಾ ಯೋಜನೆ
ಕೃಷಿ ಇಲಾಖೆಯ ಮತ್ತೊಂದು ಜನಪ್ರಿಯ ಯೋಜನೆ ಈ ಫಸಲ್ ಬಿಮಾ ಯೋಜನೆ ಆ್ಯಪ್ ಬಳಸುವುದರಲ್ಲಿರೈತರು ಮುಂದಿದ್ದಾರೆ. ಈ ಯೋಜನೆಯಡಿ ಪ್ರಿಮಿಯಂ ಹಣ ಕಟ್ಟಿದ್ದು, ನಂತರ ಸರಕಾರದಿಂದ ಜಮೆಯಾಗಿದ್ದನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ದಿಶಾಂಕ ಆ್ಯಪ್
ಮೊಬೈಲ್‌ನಲ್ಲಿ ದಿಶಾಂಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅವರ ಜಮೀನಿನಲ್ಲಿಈ ಆ್ಯಪ್ ಓಪನ್ ಮಾಡಿ, ತಮ್ಮ ಸರ್ವೇ ನಂಬರ್ ಮನದಟ್ಟು ಮಾಡಿಕೊಳ್ಳುತ್ತಿದ್ದಾರೆ. ಅಂದರೆ ನಿಮ್ಮ ನಿಮ್ಮ ಜಮೀನಿನ ಚಕ್ಕುಬಂದಿಯನ್ನೂ ಸೇರಿದಂತೆ ಎಲ್ಲವನ್ನೂ ಪರೀಕ್ಷೆ ಮಾಡಿಕೊಳ್ಳಬಹುದು.
ಗ್ರಾಮ ಒನ್ ಸೆಂಟರ್
ಗ್ರಾಮ ಒನ್ ಸೆಂಟರ್ ಇದೆ. ನಿಮ್ಮ ಹಳ್ಳಿಯಲ್ಲಿಯೋ.. ಅಕ್ಕಪಕ್ಕದಲ್ಲಿಯೋ ಇದ್ದರೆ, ಹೋಗಿ ನೋಡಿ. ಮೊಬೈಲ್ ಇಲ್ಲದವರಿಗೂ ನೆರವು ಸಿಗಲಿದೆ. ಅಥವಾ ಮೊಬೈಲ್ ಇದ್ದೂ ಬಳಸುವುದು ಗೊತ್ತಿಲ್ಲದವರಿಗೆ ನೆರವಾಗಲಿದೆ.
ಗೂಗಲ್ ಮೀಟ್
ಇನ್ನು ಗೂಗಲ್ ಮೀಟ್ʻನಲ್ಲಿಯೂ ಭಾಗವಹಿಸಬಹುದು. ಆದರೆ ಈ ವಿಷಯದಲ್ಲಿ ರೈತರು ಎಕ್ಸ್‌ಪರ್ಟ್ ಇರಬೇಕು. ಕೃಷಿ ಇಲಾಖೆ ಅಧಿಕಾರಿಗಳು ಕಾಲ-ಕಾಲಕ್ಕೆ ಆಯೋಜಿಸುತ್ತಿರುವ ಗೂಗಲ್ ಮೀಟ್ ತರಬೇತಿಯಲ್ಲಿ ಪಾಲ್ಗೊಂಡು ಎಲ್ಲ ಮಾಹಿತಿ ಪಡೆದುಕೊಳ್ಳಬಹುದು.
ಮೊಬೈಲ್ ಆ್ಯಪ್ ಹಾಗೂ ಪಬ್ಲಿಕ್ ಪೋರ್ಟಲ್‌ಗಳ ಸಂಖ್ಯೆ ಇನ್ನೂ ಹೆಚ್ಚಿದೆ. ರೈತರು ಕೂಡಾ ಹೆಚ್ಚು ಹೆಚ್ಚು ಇಂತಹವುಗಳನ್ನು ಬಳಸಿಕೊಂಡರೆ ಅವರಿಗೂ ಲಾಭ. ಇಲ್ಲಿ ಹೇಳಿರುವುದು ಕೆಲವೇ ಕೆಲವು ಆಪ್ ವಿವರಗಳಷ್ಟೇ.



