ಹಸ್ತಸಾಮುದ್ರಿಕವನ್ನು ಅಂಗೈಯಲ್ಲಿರುವ ಜ್ಯೋತಿಷ್ಯದ ಕಣ್ಣು ಎಂದೇ ನಂಬುವವರಿದ್ದಾರೆ. ಜಾತಕ, ಹುಟ್ಟಿದ ದಿನಾಂಕದ ಪ್ರಕಾರ ಜ್ಯೋತಿಷ್ಯ ನುಡಿಯುವುದೇ ಬೇರೆ. ಹಸ್ತಸಾಮುದ್ರಿಕವೇ ಬೇರೆ. ಅಂಗೈಯಲ್ಲಿನ ರೇಖೆಗಳು ಮತ್ತು ಗುರುತುಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಳುವುದು ಹಸ್ತಸಾಮುದ್ರಿಕದ ಶಕ್ತಿ.
ಅಂಗೈಯಲ್ಲಿನ ರೇಖೆಗಳ ಮೂಲಕ ವರ್ತಮಾನವನ್ನು ತಿಳಿದುಕೊಳ್ಳಬಹುದು. ಭವಿಷ್ಯವನ್ನು ಗುರುತಿಸಬಹುದು. ರಾಜಯೋಗ, ಲಕ್ಷ್ಮೀಯೋಗ, ಅನ್ನ ಭಾಗ್ಯ.. ಹೀಗೆ ಎಲ್ಲವನ್ನೂ ತಿಳಿದುಕೊಳ್ಳಬಹುದು.
ಹೆಬ್ಬೆರಳ ಮೇಲೆ ಮೀನು.. ವೀಣೆ.. ಸರೋವರದ ಚಿಹ್ನೆ ಇದ್ದರೆ..
ಹೆಬ್ಬೆರಳಿನ ಮೇಲೆ ಮೀನು, ವೀಣೆ ಅಥವಾ ಸರೋವರದ ಚಿಹ್ನೆ ಹೊಂದಿರುವ ವ್ಯಕ್ತಿಗಳು ದೊಡ್ಡ ಉದ್ಯಮಿಗಳಾಗಿ ಲಕ್ಷ್ಮೀ ಪುತ್ರರಾಗುತ್ತಾರೆ. ಈ ಚಿಹ್ನೆ ಹೊಂದಿರುವ ಜನರು ಕೈ ಹಾಕಿದ ಎಲ್ಲಾ ಕೆಲಸದಲ್ಲಿಯೂ ಸಕ್ಸಸ್ ಕಾಣುತ್ತಾರೆ. ಸಮಾಜದಲ್ಲಿಯೂ ಖ್ಯಾತ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಇವರು ಗೌರವ ಸ್ಥಾನದಲ್ಲಿರುತ್ತಾರೆ. ಈ ಗುರುತುಗಳು ಬಹಳ ಸೂಕ್ಷ್ಮ. ಇವುಗಳನ್ನು ತುಂಬಾ ಹತ್ತಿರದಿಂದ ಅಥವಾ ಭೂತಗನ್ನಡಿಯ ಸಹಾಯದಿಂದ ನೋಡಿದಾಗ ಮಾತ್ರ ಕಾಣಸುತ್ತವೆ.
ಬಲ ಅಂಗೈ ಮಧ್ಯಭಾಗದಲ್ಲಿ ಈ ಗುರುತುಗಳಿದ್ದರೆ..
ಬಲ ಅಂಗೈಯ ಮಧ್ಯ ಭಾಗದಲ್ಲಿ ಕಮಾನು, ಬಾಣ, ರಥ, ಚಕ್ರ ಅಥವಾ ಧ್ವಜದ ರೀತಿಯ ಹೋಲುವ ಚಿಹ್ನೆಗಳಿದ್ದರೆ ಅವರು ತುಂಬಾ ಅದೃಷ್ಟವಂತರು. ಅಂಗೈಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ರೀತಿಯ ಚಿಹ್ನೆಗಳು ಕಾಣಿಸುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಈ ಚಿಹ್ನೆಗಳನ್ನು ಹೊಂದಿರುವವರು ಸರ್ಕಾರಿ ಆಡಳಿತದಲ್ಲಿ ಉನ್ನತ ಸ್ಥಾನ ತಲುಪುವ ಅವಕಾಶಗಳಿರುತ್ತವೆ. ಇವರ ಜೀವನದಲ್ಲಿ ಯಶಸ್ಸು ಎಂಬುವುದು ಸದಾ ಜೊತೆಯಲ್ಲಿಯೇ ಇರುತ್ತದೆ. ಒಂದು ರೀತಿ ಇವರು ರಾಜರಂತೆ ಸುಖವಾಗಿ ಜೀವನ ನಡೆಸುತ್ತಾರೆ. ಅಪಾರ ಸಂಪತ್ತು ಹೊಂದಿರುವ ಇವರು ಎಲ್ಲಾ ಸುಖ ಅನುಭವಿಸುತ್ತಾರೆ.
ಪುಣ್ಯ ರೇಖೆ ಎಲ್ಲಿರುತ್ತದೆ ಗೊತ್ತಾ..?
ಅಂಗೈಯಲ್ಲಿನ ಪುಣ್ಯ ರೇಖೆಯು ಉಂಗುರದ ಬೆರಳಿನ ಕೆಳಗೆ ಮತ್ತು ಶನಿ ರೇಖೆಯು ಮಣಿಕಟ್ಟಿನಿಂದ ಮಧ್ಯದ ಬೆರಳಿಗೆ ಹೋದರೆ ನೀವು ರಾಜಯೋಗಕ್ಕೆ ಅರ್ಹರು ಎಂದರ್ಥ. ಈ ರೀತಿಯ ವಿಶೇಷ ರೇಖೆ ಹೊಂದಿರುವವರ ಮೇಲೆ ಶನಿದೇವನ ಅನುಗ್ರಹ ಇರುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಈ ರೇಖೆಯನ್ನು ಹೊಂದಿರುವ ಜನರು ಆಡಳಿತಾತ್ಮಕ ವಿಭಾಗದಲ್ಲಿ ಉನ್ನತ ಸ್ಥಾನ ಹೊಂದಿರುತ್ತಾರೆ. ಹಾಗೆಯೇ ಅಪಾರ ಸಂಪತ್ತಿನ ಒಡೆಯರಾಗಿರುತ್ತಾರೆ. ಈ ರೇಖೆ ಉದ್ಧವಾಗಿದ್ದರೆ ಅದು ಆತ್ಮವಿಶ್ವಾಸ ಹಾಗೂ ಗೆಲುವಿನ ಸಂಕೇತವೂ ಹೌದು.
ತ್ರಿಶೂಲದ ಚಿಹ್ನೆ ಇದ್ದರೆ.. ಲೀಡರ್..!
ಅಂಗೈಯಲ್ಲಿ ತ್ರಿಶೂಲದ ಚಿಹ್ನೆ ಹೊಂದಿರುವವರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ. ತ್ರಿಶೂಲದ ಚಿಹ್ನೆಯು ಹೃದಯ ರೇಖೆಯ ಕೊನೆಯಲ್ಲಿ ಗುರು ಪರ್ವತದ ಬಳಿ ಇದ್ದರೆ ಆ ವ್ಯಕ್ತಿಯು ರಾಜಕೀಯದಲ್ಲಿ ದೊಡ್ಡ ಸ್ಥಾನವನ್ನು ಪಡೆಯುವ ಮೂಲಕ ಜನಪ್ರಿಯ ವ್ಯಕ್ತಿಯಾಗುತ್ತಾರೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ.
ಯಾವುದೇ ವ್ಯಕ್ತಿಯ ಅಂಗೈಯಲ್ಲಿರುವ ಅಡ್ಡ ರೇಖೆಗಳು ಆರೋಗ್ಯ, ವೃತ್ತಿ, ಮದುವೆ, ವ್ಯಕ್ತಿತ್ವ, ಸಂಪತ್ತು ಸೇರಿದಂತೆ ಹಲವು ರಹಸ್ಯಗಳನ್ನು ಹೇಳುತ್ತವೆ. ಈ ರೇಖೆಗಳು ವ್ಯಕ್ತಿಯ ಜೀವನದ ಭವಿಷ್ಯ ಹೇಳುವ ಕಣ್ಣುಗಳು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸುತ್ತಾರೆ. ಅಂಗೈಯಲ್ಲಿನ ರೇಖೆಗಳು ಮತ್ತು ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ ತಿಳಿಸುತ್ತವೆ.



