ಇತ್ತೀಚೆಗೆ ಮಂಗಳಮುಖಿಯರು (Mangalamukhi) ಎಂದು ಹೇಳಿಕೊಂಡು ಸುಲಿಗೆ ಮಾಡುವ ಪ್ರಕರಣಗಳು ಜೋರಾಗುತ್ತಿವೆ. ಮಂಗಳಮುಖಿಯರೆಂದರೆ ಅಸಹಾಯಕರು. ಏನೋ ದೇವರ ಶಾಪ ಬಿಡು ಎಂಬ ಅನುಕಂಪ ಮರೆಯಾಗುತ್ತಿದೆ. ಏಕೆಂದರೆ ಮಂಗಳಮುಖಿಯರಲ್ಲಿ (Mangalamukhi)ಇತ್ತೀಚೆಗೆ ಹೆಚ್ಚುತ್ತಿರುವ ಲೂಟಿ, ದೌರ್ಜನ್ಯ, ಸುಲಿಗೆ ವ್ಯಕ್ತಿತ್ವ.
ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಂಗಳಮುಖಿಯರ (Trance Gender) ಗ್ಯಾಂಗ್`ವೊಂದು ಗೃಹ ಪ್ರವೇಶ (Home opening cermony) ನಡೆಯುತ್ತಿದ್ದ ಮನೆಗೆ ನುಗ್ಗಿ ದಾಂಧಲೆ ನಡೆಸಿತ್ತು. ಮನೆಯ ಮಾಲೀಕ ಮನೆಗೆ ನುಗ್ಗಿದ ಐದಾರು ಜನರಿಗೆ ತಲಾ 5 ಸಾವಿರ ಕೊಟ್ಟರೂ, ಇನ್ನೂ ಕೊಡು ಎಂದು ಹೊಡೆದು, ಬಡಿದು, ಅಸಹ್ಯ ವರ್ತನೆ ತೋರಿಸಿತ್ತು. ಆರೋಪಿಗಳನ್ನು ಆಮೇಲೆ ಅರೆಸ್ಟ್ ಮಾಡಲಾಗಿತ್ತು. ವಿಡಿಯೋ ಸೋಷಿಯಲ್ ಮೀಡಿಯಾ ವೈರಲ್ ಆಗಿತ್ತು.
ಇನ್ನೊಂದು ಪ್ರಕರಣದಲ್ಲಿ ಒಂಟಿಯಾಗಿ ಓಡಾಡುವವರನ್ನು ಮಹಿಳೆಯರಾದರೂ ಸರಿ, ಗಂಡಸರಾದರೂ ಸರಿ.. ದರೋಡೆ ಮಾಡುವ ರಾಬರಿ ಗ್ಯಾಂಗ್ ಕಾಣಿಸಿಕೊಂಡಿತ್ತು. ಬಸ್ ನಿಲ್ದಾಣಗಳು, ರಸ್ತೆ ಬದಿ ನಡೆಯೋರನ್ನ ಮಾತ್ರ ಟಾರ್ಗೆಟ್ ಮಾಡಿ ಬೆಳ್ಳಂಬೆಳಗ್ಗೆ 5 ಗಂಟೆಗೂ ಮುಂಚಿತವಾಗಿ ಸಂವಚಾರ ಮಾಡುವ ಜನರನ್ನು ರಾಬರಿ ಮಾಡುತ್ತಿದ್ದರು. ಕೊಡಿಗೇಹಳ್ಳಿ ಪೊಲೀಸರಿಂದ ಸುಲಿಗೆ ಮಾಡ್ತಿದ್ದ ಮಂಗಳಮುಖಿಯರ (Trance Gender) ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದಾರೆ. ಓರ್ವ ಆಟೋ ಡ್ರೈವರ್ ಮೂವರು ಮಂಗಳಮುಖಿಯರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಸ್ನೇಹ, ಅವಿಷ್ಕಾ, ದೀಪಿಕಾ ಹಾಗೂ ಆಟೋ ಚಾಲಕ ಪ್ರಕಾಶ್ ಬಂಧಿತ ಆರೋಪಿಗಳು. ಮತ್ತೊಂದು ಪ್ರಕರಣದಲ್ಲಿ ವಯಸ್ಸಾದವರೊಬ್ಬರನ್ನು ಹಿಂಸೆ ನೀಡಿ ದೋಚಲಾಗಿತ್ತು.
ಒಟ್ಟಿನಲ್ಲಿ ಇತ್ತೀಚೆಗೆ ಮಂಗಳಮುಖಿಯರಿಂದ ಲೂಟಿ, ದರೋಡೆ, ಹಿಂಸೆಯ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಒಟ್ಟುಗೂಡಿ ಪ್ರತಿಭಟಿಸಿದರೆ ಅಸಹ್ಯವಾಗಿ ಬಟ್ಟೆ ಬಿಚ್ಚಿ, ಅಸಭ್ಯ ವರ್ತನೆ ತೋರಿಸುವ, ಕೆಟ್ಟಾ ಕೊಳಕ ಬೈಯ್ಯುವ ಪ್ರಕರಣಗಳೂ ವರದಿಯಾಗಿವೆ. ಹೀಗಾಘಿ ಹಲವು ಪ್ರಕರಣದಲ್ಲಿ ನೊಂದವರು ದೂರು ಕೊಡುವುದೇ ಇಲ್ಲ. ವಿಚಿತ್ರವೆಂದರೆ ಈ ಮಂಗಳಮುಖಿಯರು ಪೊಲೀಸರಿಗೂ ಕೇರ್ ಮಾಡುವುದಿಲ್ಲ. ಪೊಲೀಸ್ ಠಾಣೆಯಲ್ಲೂ ಅಸಭ್ಯ ವರ್ತನೆ ತೋರಿಸಿ, ಪೊಲೀಸರಿಗೇ ಟಾರ್ಚರ್ ಕೊಡ್ತಾರೆ.



