Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಇಂದಿರಾ ಗಾಂಧಿ, ಸಿದ್ದರಾಮಯ್ಯ ಬಿಟ್ಟರೆ.. ಉಚ್ಚಾಟನೆಯಾಗಿ ಗೆದ್ದವರೇ ಇಲ್ಲ : ಯತ್ನಾಳ್‌ ಏನ್‌ ಮಾಡ್ತಾರೆ..?

SpeciallU by SpeciallU
March 29, 2025
in News, Politics
Reading Time: 1 min read
0 0
0
ಯತ್ನಾಳ್‌ ಹೊಸ ಪಕ್ಷ ಕಟ್ತಾರಂತೆ.. ಸಂಧಾನಕ್ಕೆ ಬಂದ್ರಾ ವಿಜಯೇಂದ್ರ..?

ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆ ಅನಿರೀಕ್ಷಿತವೇನಲ್ಲ. ತನ್ನನ್ನು ಹೈಕಮಾಂಡ್‌ ಉಚ್ಚಾಟನೆ ಮಾಡುವುದಿಲ್ಲ ಎಂದು ಯತ್ನಾಳ್‌ ನಂಬಿಕೊಂಡಿದ್ದರಷ್ಟೇ. ಆದರೆ, ಯತ್ನಾಳ್‌ ಜೊತೆಗಿದ್ದ ಬಹುತೇಕರಿಗೆ, ಯತ್ನಾಳ್‌ ವಿರೋಧಿಗಳಿಗೆ ಇದು ತುಂಬಾ ದಿನ ಆಗುವಂತದ್ದಲ್ಲ ಎನ್ನುವುದು ಗೊತ್ತಿತ್ತು.ಈಗ ಯತ್ನಾಳ್‌ ಮುಂದಿರುವುದು ಎರಡೇ ಆಯ್ಕೆ.

ಹೊಸ ರಾಜಕೀಯ ಪಕ್ಷ ಕಟ್ಟುವುದು ಅಥವಾ ತಪ್ಪಾಯ್ತು ಕ್ಷಮಿಸಿ ಎಂದು ಮತ್ತೊಮ್ಮೆ ಕೇಳಿಕೊಂಡು ಬಿಜೆಪಿಗೆ ವಾಪಸ್‌ ಹೋಗುವುದು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಕ್ಷಮೆ ಕೇಳ್ತಾರಾ ಯತ್ನಾಳ್..?

ತಪ್ಪಾಯ್ತು, ಕ್ಷಮಿಸಿ ಎಂದು ಕೇಳುವುದು ಯತ್ನಾಳ್‌ ಜಾಯಮಾನವಲ್ಲ. ವ್ಯಕ್ತಿತ್ವವೂ ಅಲ್ಲ. ಹಠಮಾರಿ. ಅದರಲ್ಲೂ ತಪ್ಪಾಯ್ತು ಎನ್ನಬೇಕಿರುವುದು ಯಡಿಯೂರಪ್ಪ, ವಿಜಯೇಂದ್ರ ಅವರಿಗೆ. ಕ್ಷಮಿಸುವುದಕ್ಕೇನೋ ಅವರು ರೆಡಿ ಆಗಬಹುದು. ಆದರೆ, ಯತ್ನಾಳ್‌ ಅವರಿಗೇ ಅದು ಸಾಧ್ಯವಾಗದ ಮಾತು. ಯಡಿಯೂರಪ್ಪನವರ ಶೈಲಿಯಲ್ಲೇ ಹೇಳಬೇಕೆಂದರೆ ಅದು ಸೂರ್ಯ ಚಂದ್ರ ಇರುವವರೆಗೂ ಸಾಧ್ಯವಿಲ್ಲ.

ಹೀಗಿರುವಾಗ ಉಳಿದಿರುವ ಆಯ್ಕೆ, ಹೊಸ ಪಕ್ಷ ಕಟ್ಟುವುದು.

ಹಾಗೇನಾದರೂ ಆದರೆ ರಾಜ್ಯ ರಾಜಕೀಯದ ದಿಕ್ಕು ಬದಲಿಸಬಹುದು. ದೇಶದ ರಾಜಕೀಯದಲ್ಲಿ ಹಲವು ಉಚ್ಚಾಟನೆಗಳು ನಡೆದಿವೆ. ಅವು ಐತಿಹಾಸಿಕ ತಿರುವಿಗೆ ಸಾಕ್ಷಿಯಾಗಿವೆ. ಉಚ್ಚಾಟನೆಯಾದವರು ಹೊಸ ಪಕ್ಷ ಕಟ್ಟಿದ್ದಾರೆ. ಪಕ್ಷವನ್ನೇ ಒಡೆದಿದ್ದಾರೆ. ಇಬ್ಭಾಗ ಮಾಡಿದ್ದಾರೆ. ಹೊಸ ಪಕ್ಷ ಸೇರಿದ್ದಾರೆ. ಆದರೆ.. ಇಷ್ಟೆಲ್ಲ ಆಗಿಯೂ ಗೆದ್ದಿದ್ದು ಇಬ್ಬರು ಮಾತ್ರ.

1969 : ಇಂದಿರಾ ಗಾಂಧಿ ಉಚ್ಚಾಟನೆ

ಇಂದಿರಾ ಗಾಂಧಿ ದೇಶದ ಪ್ರಧಾನಿಯಾಗಿದ್ದರು. ಪ್ರಧಾನಿಯಾಗಿದ್ದವರನ್ನೇ ಪಕ್ಷದಿಂದ ಹೊರಹಾಕಿದ್ದರು ಆಗಿನ ಕಾಂಗ್ರೆಸ್ ಅಧ್ಯಕ್ಷ ನಿಜಲಿಂಗಪ್ಪ. ಆಗಿನ್ನೂ ಕಾಂಗ್ರೆಸ್ ಪಕ್ಷಕ್ಕೆ ಚರಕ ನೂಲುತ್ತಿದ್ದ ಮಹಿಳೆಯ ಚಿಹ್ನೆ ಇತ್ತು. ಹಸ್ತವಲ್ಲ. ಇಂದಿರಾ ಗಾಂಧಿ ಉಚ್ಚಾಟನೆ ನಿರ್ಧಾರವಾಗಿದ್ದು ಬೆಂಗಳೂರಿನ ಗಾಜಿನ ಮನೆಯಲ್ಲಿ. ಅಲ್ಲಿ ಸಭೆ ಸೇರಿದ್ದ ಕಾಮರಾಜ್, ಸಂಜೀವ್ ರೆಡ್ಡಿ, ಮೊರಾರ್ಜಿ ದೇಸಾಯಿ ಅವರೆಲ್ಲ ಒಟ್ಟು ಸೇರಿ ಇಂದಿರಾ ಗಾಂಧಿ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.

ಮುಂದೆ ಇಂದಿರಾ ಗಾಂಧಿ ಕಾಂಗ್ರೆಸ್‌ ಪಕ್ಷವನ್ನೇ ಇಬ್ಭಾಗ ಮಾಡಿದರು. ಅವರದ್ದೇ ಒಂದು ಕಾಂಗ್ರೆಸ್ ಆಯ್ತು. ಕಾಂಗ್ರೆಸ್ ಕಮಿಟಿಯಲ್ಲಿದ್ದ 705 ಸದಸ್ಯರ ಪೈಕಿ, 446 ಕಾಂಗ್ರೆಸ್ಸಿಗರು ಇಂದಿರಾ ಪರ ನಿಂತರೆ, ಮಿಕ್ಕವರು ಕಾಮರಾಜ್, ಮೊರಾರ್ಜಿ ದೇಸಾಯಿ ಅವರ ಪರ ನಿಂತರು. ಈಗ ಇರುವುದು ಇಂದಿರಾ ಗಾಂಧಿ ಸ್ಥಾಪಿಸಿದ್ದ ಕಾಂಗ್ರೆಸ್ ಪಕ್ಷ.
ಉಚ್ಚಾಟನೆಯ ನಂತರ, ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಪ್ರಾಬಲ್ಯ ಹೆಚ್ಚಾಯ್ತು. ಪ್ರಶ್ನಿಸುವವರೇ ಇಲ್ಲವಾದರು. ಉಚ್ಚಾಟನೆಯ ನಂತರ ಇಂದಿರಾ ಗಾಂಧಿ ಇನ್ನಷ್ಟು ರಫ್‌ & ಟಫ್‌ ಲೀಡರ್‌ ಆದರು.

2005 : JDSನಿಂದ ಸಿದ್ದರಾಮಯ್ಯ ಉಚ್ಚಾಟನೆ

ಇಂದಿರಾ ಅವರ ನಂತರ ಆ ಲೆಕ್ಕದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದವರು ಸಿದ್ದರಾಮಯ್ಯ ಮಾತ್ರ. 2005ರಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉದ್ಭವವಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನೇ ದೇವೇಗೌಡರು ಉಚ್ಚಾಟಿಸಿದರು. ಅಹಿಂದ ಸಮಾವೇಶದ ನೆಪ  ಹೇಳಿ ಉಚ್ಚಾಟನೆ ಮಾಡಲಾಗಿತ್ತು. ಅದಾದ ನಂತರ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ, ಎರಡು ಬಾರಿ ಸಿಎಂ ಆಗಿ ಇತಿಹಾಸ ಸೃಷ್ಟಿಸಿದರು.

ಉಚ್ಚಾಟನೆಯಾಗಿ ಸೋತ ನಾಯಕರು..!

ಇವರನ್ನು ಬಿಟ್ಟರೆ, ಈಗ ಕಾಂಗ್ರೆಸ್ಸಿಗರು ಪದೇ ಪದೇ ದೇವರಾಜ ಅರಸು ಮಾಡೆಲ್‌ ಎನ್ನುತ್ತಾರಲ್ಲ, ಆ ದೇವರಾಜ ಅರಸು ಅವರನ್ನೇ 1979ರಲ್ಲಿ ಉಚ್ಚಾಟನೆ ಮಾಡಿದ್ದರು. ಅದೇ ಅರಸು ಅವರನ್ನು ಇಂದಿರಾ ಗಾಂಧಿಯವರೇ ಪಕ್ಷದಿಂದ ಉಚ್ಚಾಟಿಸಿದ್ದರು.

ಆಗ ಅರಸು ಅವರಿಗೆ ಗೊತ್ತೇ ಆಗದಂತೆ ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದ ಬಂಗಾರಪ್ಪನವರೇ ಷರಾ ಬರೆದಿದ್ದರು. ಬಂಗಾರಪ್ಪ  ನೇತೃತ್ವದ ಸಮಿತಿಯೇ ಅರಸು ಉಚ್ಚಾಟನೆಗೆ ಕಾರಣವಾಗಿತ್ತು. ಅರಸು ಕೆಳಗಿಳಿದರು. ಅರಸು ಅವರೇ ಬೆಳೆಸಿದ್ದ ನಾಯಕರು ಕೂಡಾ ಅರಸು ನೆರವಿಗೆ ಬರಲಿಲ್ಲ. ಬಂಗಾರಪ್ಪ ಕೂಡಾ ಅರಸು ಬೆಳೆಸಿದ್ದವರೇ ಆಗಿದ್ದರು.

ಇನ್ನು ಬಿಜೆಪಿಯಲ್ಲಿ ಅಧ್ಯಕ್ಷರಾಗಿದ್ದ ಎಕೆ ಸುಬ್ಬಯ್ಯ ಅವರನ್ನು 1984ರಲ್ಲಿ ಆರ್‌ ಎಸ್‌ ಎಸ್‌ ನಾಯಕರ ಬಗ್ಗೆ ಮಾತನಾಡಿದ್ದಕ್ಕೆ ಉಚ್ಚಾಟಿಸಲಾಗಿತ್ತು. ಅವರೂ ಅಷ್ಟೇ, ಅದಾದ ಮೇಲೆ ಹೊಸ ಪಕ್ಷ ಕಟ್ಟಿದರು. ಕನ್ನಡನಾಡು ಎಂಬ ಪಕ್ಷ ಕಟ್ಟಿದರೂ ಬೆಳೆಯಲಿಲ್ಲ. ಇನ್ನು 1997ರಲ್ಲಿ ಜನತಾದಳದಿಂದ ಹೆಗಡೆ ಉಚ್ಚಾಟನೆಯಾಯ್ತು. ದೇವೇಗೌಡರು ಪ್ರಧಾನಿಯಾಗಿ, ಲೋಕಸಭೆಯಲ್ಲಿ ವಿಶ್ವಾಸಮತ ಸಾಬೀತಾದ ಮರುದಿನವೇ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಿದ್ದರು. ವಿಚಿತ್ರ ಎಂದರೆ ಆಗ ದೇವೇಗೌಡರ ಜೊತೆ ನಿಂತಿದ್ದವರು ಈಗ ಕಾಂಗ್ರೆಸ್ಸಿನಲ್ಲಿರುವ ಸಿದ್ದರಾಮಯ್ಯ, ಜೆಹೆಚ್‌ ಪಟೇಲ್ ಮತ್ತಿತರ ನಾಯಕರು.
ಮುಂದಿನ ದಿನಗಳಲ್ಲಿ ಪಟೇಲ್‌,ಹೆಗಡೆ ಕೂಡಾ ಅಪ್ರಸ್ತುತರಾದರು. ಒಟ್ಟಿನಲ್ಲಿ ಉಚ್ಛಾಟನೆಗಳಿಗೆ ಹೊಸ ಇತಿಹಾಸವೇ ಇದೆ.

Tags: #ಸಿದ್ದರಾಮಯ್ಯ #ಇಂದಿರಾ ಗಾಂಧಿ #ಯತ್ನಾಳ್‌ #ಉಚ್ಚಾಟನೆ #Siddaramaiah #Indira Gandhi #Yatnal #Expulsion
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.