ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ʻನ್ನು ಟೀಕಿಸೋವಾಗ ಕಾಂಗ್ರೆಸ್ ಕುಟುಂಬಕ್ಕೆ ಸೇರಿದ ಪಕ್ಷ ಎಂದು ಟೀಕಿಸುವುದು ಸಾಮಾನ್ಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ʻನ್ನು ಕುಟುಂಬ ರಾಜಕೀಯದ ಹೆಸರು ಹೇಳಿ ಟೀಕಿಸಿದ್ದರು. ಆದರೆ.. ಬಿಜೆಪಿಯೇನೂ ಇದಕ್ಕೆ ಹೊರತಾಗಿಲ್ಲ. ಏಕೆಂದರೆ ಬಿಜೆಪಿಯಲ್ಲೂ ಕುಟುಂಬ ರಾಜಕೀಯ ಇದೆ. ಲೆಕ್ಕದ ಪ್ರಕಾರ ನೋಡಿದರೆ.. ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಲೆಕ್ಕವನ್ನೇ ತೆಗೆದುಕೊಂಡರೆ..
ಕಾಂಗ್ರೆಸ್ ನಂ.1.
ಬಿಜೆಪಿ ನಂ.2.
ಜೆಡಿಎಸ್ ನಂ.3
ಪಟ್ಟದಲ್ಲಿ ವಿರಾಮಮಾನವಾಗಿವೆ. ಸುಮ್ಮನೆ ಪಟ್ಟಿ ನೋಡಿ.
- ಡಿಕೆ ಸುರೇಶ್ – ( ಡಿಕೆ ಶಿವಕುಮಾರ್ ಸಹೋದರ)
- ಗೀತಾ ಶಿವರಾಜ್ ಕುಮಾರ್ ( ಸಚಿವ ಮಧುಬಂಗಾರಪ್ಪ ಸಹೋದರಿ)
- ಶ್ರೇಯಸ್ ಪಟೇಲ್ ( ಮಾಜಿ ಸಂಸದ ಜಿ ಪುಟ್ಟಸ್ವಾಮಿ ಅವರ ಮೊಮ್ಮಗ)
- ಸ್ಟಾರ್ ಚಂದ್ರು ( ಗೌರಿಬಿದನೂರು ಶಾಸಕ ಕೆ.ಎಚ್ ಪುಟ್ಟಸ್ವಾಮಿ ಅವರ ಸಹೋದರ)
- ಸೌಮ್ಯ ರೆಡ್ಡಿ ( ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ)
- ಮನ್ಸೂರ್ ಅಲಿ ಖಾನ್ (ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಪುತ್ರ )
- ಮೃಣಾಲ್ ಹೆಬ್ಬಾಳ್ಕರ್ ( ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ)
- ಪ್ರಿಯಾಂಕಾ ಜಾರಕಿಹೊಳಿ ( ಸಚಿವ ಸತೀಶ್ ಜಾರಕಿಹೊಳಿ ಪುತ್ರಿ)
- ಸಂಯುಕ್ತಾ ಪಾಟೀಲ್ ( ಸಚಿವ ಶಿವರಾನಂದ ಪಾಟೀಲ್ ಪುತ್ರಿ)
- ಪ್ರಭಾ ಮಲ್ಲಿಕಾರ್ಜುನ ( ಸಚಿವ ಎಸ್ ಎಸ್ ಮಲ್ಲಿಕಾರ್ಜುಣ ಅವರ ಪತ್ನಿ)
- ಸಾಗರ್ ಖಂಡ್ರೆ ( ಸಚಿವ ಈಶ್ವರ್ ಖಂಡ್ರೆ ಪುತ್ರ)
- ರಾಧಾಕೃಷ್ಣ ದೊಡ್ಡಮನಿ ( ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ)
- ಕೆ ರಾಜಶೇಖರ್ ಹಿಟ್ನಾಳ್ ( ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ)
- ರಾಜೀವ್ ಗೌಡ (ಮಾಜಿ ಸ್ಪೀಕರ್ ವೆಂಕಟರಮಣಪ್ಪ ಪುತ್ರ)
ಇನ್ನು ಬಳ್ಳಾರಿಯಲ್ಲಿ ಶಾಸಕ ತುಕರಾಮ್ ಪತ್ನಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಚಾಮರಾಜನಗರದಲ್ಲಿ ಎಚ್‌ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್ ಕೊಡಿಸುವ ಪ್ರಯತ್ನಗಳು ನಡೆಯುತ್ತಿವೆ. ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಅಳಿಯ ಇನ್ನೂ ಸರ್ಕಾರಿ ಸೇವೆಯಲ್ಲಿರುವ ಅಳಿಯನಿಗಾಗಿ ಟಿಕೆಟ್ ಪ್ರಯತ್ನ ನಡೆಸುತ್ತಿದ್ಧಾರೆ. ಲೆಕ್ಕದ ಪ್ರಕಾರ ಕಾಂಗ್ರೆಸ್ ಕೊಟ್ಟಿರುವ ಫ್ಯಾಮಿಲಿ ಟಿಕೆಟ್ ಸಂಖ್ಯೆ 14. ಇನ್ನೂ 4 ಕ್ಷೇತ್ರಗಳ ಟಿಕೆಟ್ ಬಾಕಿ ಇದೆ. ಅವುಗಳಲ್ಲಿಯೂ ಕುಟುಂಬದವರ ಲಾಬಿ ಜೋರಾಗಿಯೇ ಇದೆ. . ಸದ್ಯಕ್ಕೆ ಘೋಷಣೆಯಾಗಿರುವವರ ಪೈಕಿ 5 ಮಂದಿ ಅಭ್ಯರ್ಥಿಗಳು ಸಚಿವರ ಮಕ್ಕಳು, ಮತ್ತೋರ್ವ ಅಭ್ಯರ್ಥಿ ಸಚಿವರೊಬ್ಬರ ಪತ್ನಿ, ಮತ್ತೋರ್ವ ಅಭ್ಯರ್ಥಿ ಸಚವರೊಬ್ಬರ ಸಹೋದರಿ.
ಹಾಗಂತ ಬಿಜೆಪಿ ಏನೂ ಕುಟುಂಬ ರಾಜಕೀಯದಿಂದ ಹೊರಗೆ ಇಲ್ಲ.
- ಬಿ ವೈ ರಾಘವೇಂದ್ರ ( ಬಿಎಸ್ ಯಡಿಯೂರಪ್ಪ ಪುತ್ರ)
- ಗಾಯತ್ರಿ ಸಿದ್ದೇಶ್ವರ ( ಜಿ ಎಂ ಸಿದ್ದೇಶ್ವರ ಪತ್ನಿ)
- ತೇಜಸ್ವಿ ಸೂರ್ಯ ( ಶಾಸಕ ರವಿ ಸುಬ್ರಹ್ಣಣ್ಯ ಸಹೋದರನ ಪುತ್ರ)
- ಅಣ್ಣಾ ಸಾಹೇಬ್ ಜೊಲ್ಲೆ ( ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪತಿ)
- ಡಾ. ಸಿಎನ್ ಮಂಜುನಾಥ್ ( ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ)
- ಯದುವೀರ್ ಒಡೆಯರ್ (ಮಾಜಿ ಸಂಸದ ಶ್ರೀಕಂಠ ದತ್ತ ಒಡೆಯರ್ ಪುತ್ರ)
- ಬಸವರಾಜ ಬೊಮ್ಮಾಯಿ (ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿಯವರ ಪುತ್ರ)
ಹೀಗೆ ಬಿಜೆಪಿಯಲ್ಲಿ ಕುಟುಂಬದವರ ಸಂಖ್ಯೆ 6. ಇನ್ನು ಬೆಳಗಾವಿಗಾಗಿ ಜಗದೀಶ್ ಶೆಟ್ಟರ್ ಅವರ ಸೊಸೆಯ ಹೆಸರು ಚಾಲ್ತಿಯಲ್ಲಿದೆ. ಶೆಟ್ಟರ್ ಅವರ ಸೊಸೆ, ಹಾಲಿ ಸಂಸದೆ ಮಂಗಳಾ ಅಂಗಡಿಯವರ ಮಗಳು. ಇನ್ನು ಸುಮಲತಾ ಅಂಬರೀಷ್ ಅವರಿಗೆ ಟಿಕೆಟ್ ಕೊಟ್ಟರೆ, ಅವರದ್ದೂ ರಾಜಕೀಯ ಕುಟುಂಬದ ಲಿಸ್ಟಿಗೇ ಬರುತ್ತೆ.
ಜೆಡಿಎಸ್ʻನಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಟಿಕೆಟ್ ಘೋಷಣೆಯಾಗಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಅಭ್ಯೃಥಿಗಳಾದರೆ.. ಒನ್ಸ್ ಎಗೇನ್ ಅವರದ್ದೂ ಕುಟುಂಬ ರಾಜಕಾರಣವೇ.
ಲೋಕಸಭೆ ಇರಲಿ ವಿಧಾನಸಭೆ ಚುನಾವಣೆ ಇರಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೂರು ಪಕ್ಷಗಳಲ್ಲಿ ಕುಟುಂಬಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ಎರಡನೇ, ಮೂರನೇ ಹಂತದ ನಾಯಕರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದರೂ ಅದು ಅವರಿಗೆ ದಕ್ಕುವುದಿಲ್ಲ. ಆದರೆ ಸಚಿವರು, ಶಾಸಕರು, ಪ್ರಭಾವಿಗಳು ರಾಜಕೀಯ ಅನುಭವ ಇಲ್ಲದ ತಮ್ಮ ಪುತ್ರ ಪುತ್ರಿಯರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತನ್ನ ನಂತರದ ಪುತ್ರ, ಪುತ್ರಿ, ಪತ್ನಿ, ಸಹೋದರ ಎಂಬ ನಿಲುವಿನ ಮೂಲಕ ಅಧಿಕಾರರವನ್ನು ತಮ್ಮ ಕುಟುಂಬದ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಒಟ್ಟಿನಲ್ಲಿ ಈ ಹಿಂದೆ ರಾಜಪ್ರಭುತ್ವ ಇದ್ದಾಗ ರಾಜನ ಮಕ್ಕಳು ಮುಂದಿನ ರಾಜರಾಗುತ್ತಿದ್ದರು. ಈಗ ಪ್ರಜಾಪ್ರಭುತ್ವ ಇದೆ. ಇಂದಿನ ಶಾಸಕರು, ಸಂಸದರ ಮಕ್ಕಳೇ.. ಮುಂದಿನ ಶಾಸಕರು ಹಾಗೂ ಸಂಸದರು ಎನ್ನುವಂತಾಗಿದೆ.



