ರಸ್ತೆಯಲ್ಲಿ ಅಪಘಾತಗಳಾದಾಗ.. ಜನ ರೊಚ್ಚಿಗೆದ್ದು ಡ್ರೈವರ್ ಮೇಲೆ ಹಲ್ಲೆ ನಡೆಸುವುದು ಕಾಮನ್ ಆಗಿ ಹೋಗಿದೆ. ಇದು ಕಾನೂನುಬಾಹಿರವಾದರೂ.. ಇಂತಹ ಘಟನೆಗಳು ಜರುಗುತ್ತಲೇ ಇರುತ್ತವೆ. ಆದರೆ, ಹಾಗೆ ಅಪಘಾತ ಮಾಡಿದವರು ಸೆಲಬ್ರಿಟಿಗಳಾದರೆ ಅಥವಾ ಅಪಘಾತ ಮಾಡಿದ ಕಾರಿನಲ್ಲಿ ಸೆಲಬ್ರಿಟಿಗಳಿದ್ದರೆ… ಹಲ್ಲೆ ಮಾಡುವವರೇ ಸೆಲ್ಫಿ ತೆಗೆದುಕೊಳ್ಳೋ ವಿಚಿತ್ರಗಳೂ ನಡೆಯುತ್ತವೆ. ಆದರೆ.. ಮುಂಬೈನಲ್ಲಿ ನಡೆದಿರುವುದು ಮಾತ್ರ ಬೇರೆ. ಕಾರಿನಲ್ಲಿರುವುದು ಬಾಲಿವುಡ್ʻನ ಖ್ಯಾತ ನಟಿ, ದೊಡ್ಡ ಸೆಲಬ್ರಿಟಿ ಎಂದು ಗೊತ್ತಾದ ನಂತರವೇ ಹೊಡೆದಿದ್ಧಾರೆ. ಕಾರಿನಲ್ಲಿದ್ದದ್ದು ನಟಿ ರವೀನಾ ಟಂಡನ್. ಹಾಗಂತ ಡ್ರೈವ್ ಮಾಡುತ್ತಿದ್ದವರು ಅವರಲ್ಲ. ವಾಸ್ತವವಾಗಿ ಅಲ್ಲೊಂದು ಅಪಘಾತವೇ ನಡೆದಿರಲಿಲ್ಲ.
ಘಟನೆಯ ವಿವರ :
‘ದಯವಿಟ್ಟು ನನಗೆ ಹೊಡೆಯಬೇಡಿ. ನನ್ನನ್ನು ತಳ್ಳಬೇಡಿ..’ ಎಂದು ಖ್ಯಾತ ನಟಿ ರವೀನಾ ಟಂಡನ್ ಅಂಗಲಾಚಿ ಬೇಡಿಕೊಂಡಿದ್ದಾರೆ. ಘಟನೆ ನಡೆದಿದ್ದು ಮುಂಬೈನ ಬಾಂದ್ರಾ ಏರಿಯಾದಲ್ಲಿ. ಘಟನೆಗೆ ಕಾರಣ ಎನ್ನಲಾಗುತ್ತಿರುವುದು ರಸ್ತೆ ಅಪಘಾತ. ರವೀನಾ ಟಂಡನ್ ಪ್ರಯಾಣಿಸುತ್ತಿದ್ದ ಕಾರ್ ಆಕ್ಸಿಡೆಂಟ್ ಮಾಡಿದೆ ಎಂದು ರೊಚ್ಚಿಗೆದ್ದ ಜನ ರವೀನಾ ಟಂಡನ್ ಅವರನ್ನು ಕಾರಿನಿಂದ ಹೊರಗೆ ಎಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಾರ್ ಡ್ರೈವ್ ಮಾಡುತ್ತಿದ್ದುದು ರವೀನಾ ಅಲ್ಲ. ಡ್ರೈವರ್. ಘಟನೆಯಲ್ಲಿ ಮೂವರು ಗಾಯಗೊಂಡಿದ್ಧಾರೆ. ಕಾರ್ ಡ್ರೈವರ್ ರಕ್ಷಣೆಗೆ ಧಾವಿಸಿದ ರವೀನಾ ಟಂಡನ್, ಡ್ರೈವರ್ʻನನ್ನು ಹೊಡೆಯಬೇಡಿ. ಅಪಘಾತದಿಂದ ಆ ಮಹಿಳೆಗೆ ರಕ್ತಸ್ರಾವವಾಗಿದೆ ಎಂಬುದು ನನಗೆ ತಿಳಿಸಿದೆ. ದಯವಿಟ್ಟು ನನ್ನ ಚಾಲಕನ್ನು ಹೊಡೆಯಬೇಡಿ, ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ” ಎಂದು ಅಲ್ಲಿದ್ದವರಿಗೆ ಕೇಳಿಕೊಂಡಿದ್ದಾರೆ. ಆದರೆ ಚಾಲಕನನ್ನು ರಕ್ಷಿಸಲು ಬಂದ ರವೀನಾ ಟಂಡನ್ ಮೇಲೆಯೇ ಮಹಿಳೆಯೊಬ್ಬರು ಹಲ್ಲೆ ಪ್ರಯತ್ನ ಮಾಡಿದ್ದಾರೆ. ಈ ಕುರಿತ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ಮೊಹಮ್ಮದ್ ಎಂಬುವವರು ಈ ಬಗ್ಗೆ ದೂರು ನೀಡುವುದಕ್ಕೆ ಮುಂದಾಗಿದ್ದು, ರವೀನಾ ಅವರು ಮದ್ಯಪಾನ ಮಾಡಿದ್ದರು ಎಂದು ಆರೋಪಿಸಿದ್ಧಾರೆ. ರವೀನಾ ಟಂಡನ್ ಮದ್ಯದ ಅಮಲಿನಲ್ಲಿದ್ದರು ಮತ್ತು ಅಪಘಾತಕ್ಕೀಡಾದ ಮಹಿಳೆಗೆ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಮೊಹಮ್ಮದ್, ಪೊಲೀಸರು ರವೀನಾ ವಿರುದ್ಧ ಕೇಸ್ ದಾಖಲಿಸಿಕೊಳ್ಳಲು ಹಾಗೂ ಎಫ್ʻಐಆರ್ ಹಾಕಲು ನಿರಾಕರಿಸಿದರು ಎಂದು ಆರೋಪಿಸಿದ್ಧಾರೆ.
ರವೀನಾ ಕಾರು ಆಕ್ಸಿಡೆಂಟ್ ಮಾಡಿಲ್ಲವಾ..?
ಇದೇ ವೇಳೆ ಘಟನೆಯ ಸಿಸಿಟಿವಿ ಎನ್ನಲಾದ ದೃಶ್ಯಗಳೂ ಆಗುತ್ತಿವೆ. ಆ ದೃಶ್ಯಗಳಲ್ಲಿ ರವೀನಾ ಅವರಿದ್ದ ಕಾರು ಯಾವುದೇ ಅಪಘಾತ ಮಾಡಿಲ್ಲ. ಆ ದೃಶ್ಯಗಳನ್ನು ನೋಡಿದರೆ ಬೇರೆಯದೇ ರೀತಿಯ ಅಟ್ಯಾಕ್ ಇರಬಹುದು ಎನ್ನಲಾಗುತ್ತಿದೆ. ಪೊಲೀಸರ ಪ್ರಕಾರವೂ ಕೂಡಾ ಯಾವುದೇ ಅಪಘಾತ ಜರುಗಿಲ್ಲ. ಪಾರ್ಕಿಂಗ್ʻನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಹಲ್ಲೆ ಮಾಡಿರುವ ಆರೋಪಿಗಳು ತಮಗೆ ಕಾರು ಟಚ್ ಆಯಿತು ಎಂದುಕೊಂಡು ಹಲ್ಲೆ ನಡೆಸಿದ್ದಾರೆ. ವಾಸ್ತವವಾಗಿ ಯಾವುದೇ ಆಕ್ಸಿಡೆಂಟ್ ಆಗಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸರು ಎಫ್ʻಐಆರ್ ಮಾಡಿಕೊಂಡಿದ್ಧಾರೆ. ಆದರೆ, ರವೀನಾ ಟಂಡನ್ ಅವರಾಗಲೀ.. ರವೀನಾ ಅವರ ಮೇಲೆ ಹಲ್ಲೆ ಮಾಡಿದ್ಧಾರೆ ಎನ್ನಲಾಗಿರುವ ಮೊಹಮ್ಮದ್ ಆಗಲೀ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ಧಾರೆ. ರವೀನಾ ಟಂಡನ್ ಹಿಂದೂ ಧರ್ಮದ ಪರ ಮಾತನಾಡುತ್ತಿರುತ್ತಾರೆ. ಹೀಗಾಗಿಯೇ ಮುಸ್ಲಿಮರು ಟಾರ್ಗೆಟ್ ಮಾಡಿ ಹೊಡೆದಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಆದರೆ.. ಒಂದಂತೂ ಸತ್ಯ. ಸಿಸಿಟಿವಿ ನೋಡಿದಾಗ.. ಅಲ್ಲಿ ಯಾವ ಅಪಘಾತವೂ ನಡೆದಿಲ್ಲ. ನಡೆಯದೇ ಇದ್ದ ಆಕ್ಸಿಡೆಂಟ್ʻನ್ನು ಆಕ್ಸಿಡೆಂಟ್ ಎಂದು ಬಿಂಬಿಸಿ, ಹಲ್ಲೆ ಮಾಡಿದ್ದೇಕೆ ಎನ್ನೋದು ಅರ್ಥವಾಗದ ವಿಷಯ.



