ರೇಷನ್ ಕಾರ್ಡ್ (ration card) ಇರುತ್ತೆ. ರೇಷನ್ ತಗೊಳ್ಳ್ಳಲ್ಲ. ಬಿಪಿಎಲ್ ಕಾರ್ಡ್ (BPL card) ಇರುತ್ತೆ. ಸೊಸೈಟಿ ಅಥವಾ ರೇಷನ್ ಅಂಗಡಿ ಕಡೆ ತಲೆಯನ್ನೇ ಹಾಕಲ್ಲ. ಅಂತಹವರ ಕಾರ್ಡ್ ರದ್ದು ಮಾಡೋಕೆ ರಾಜ್ಯ ಸರ್ಕಾರ ಮುಂದಾಗಿದೆ. ರೇಷನ್ ಕಾರ್ಡ್ ಇದ್ದರೂ 6 ತಿಂಗಳಿಂದ ರೇಷನ್ ಪಡೆಯದವರ ಕಾರ್ಡ್ ಅನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಈ ಬಿಪಿಎಲ್, ಅಂತ್ಯೋದಯ ಹಾಗೂ ಪಿಎಚ್ಎಚ್ ಕಾರ್ಡ್ಗಳಿಂದ (BPL card, anthyodaya card, PHH card) ರೇಷನ್ ಪಡೆಯದೇ ಆರು ತಿಂಗಳಾಗಿದ್ದರೆ ಅಂತಹ ರೇಷನ್ ಕಾರ್ಡ್ಗಳನ್ನು ಅಮಾನತು ಮಾಡಲು ಮುಂದಾಗಿದೆ.
6 ತಿಂಗಳಿಂದ ಪಡಿತರ ಪಡೆಯದ 3 ಲಕ್ಷದ 26 ಸಾವಿರ ರೇಷನ್ ಕಾರ್ಡ್ಗಳನ್ನು ಅಮಾನತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಎರಡು ತಿಂಗಳ ಹಿಂದೆ ಮೃತಪಟ್ಟವರ ಹೆಸರಿದ್ದ ರೇಷನ್ ಕಾರ್ಡ್ಗಳನ್ನು (ration card) ರದ್ದುಗೊಳಿಸಿ ಸಾರ್ವಜನಿಕರಿಗೆ ಆಹಾರ ಇಲಾಖೆ ಬಿಸಿ ಮುಟ್ಟಿಸಿತ್ತು. ಈಗ ಆರು ತಿಂಗಳಿನಿಂದ ಪಡಿತರ ಪಡೆಯದ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಲು ಮುಂದಾಗಿದೆ. ಆರು ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬಗಳು ಪಡಿತರವನ್ನೇ ಪಡೆದಿಲ್ಲ. ಈ ಹಿನ್ನೆಲೆ ಪಡಿತರ ಪಡೆಯದ ರೇಷನ್ ಕಾರ್ಡ್ಗಳ ಡೇಟಾ ಸಂಗ್ರಹಿಸಿ ಅವುಗಳ ಅಮಾನತಿಗೆ ಆದೇಶ ನೀಡಿದೆ. ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ರದ್ದಾಗಲಿವೆ.
ರೇಷನ್ ಕಾರ್ಡ್ ತಿದ್ದುಪಡಿ ಅವಧಿ ಮತ್ತೆ ವಿಸ್ತರಣೆ : ಕರ್ನಾಟಕದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಿದ್ದ ಡೆಡ್ಲೈನ್ ಅನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ತಿದ್ದುಪಡಿಗೆ ಹೊಸ ದಿನಾಂಕ ನಿಗದಿಪಡಿಸಿದೆ. ಈ ಮೊದಲು ಅಕ್ಟೋಬರ್ 5 ರಿಂದ 13ರವರೆಗೂ ಮೂರು ಹಂತಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಸರ್ವರ್ ಸಮಸ್ಯೆ ಉಂಟಾದ ಹಿನ್ನೆಲೆ ಕೆಲ ಜಿಲ್ಲೆಗಳಿಗೆ ತಿದ್ದುಪಡಿ ಅವಕಾಶ ನೀಡಲಾಗಿದೆ. ಅಕ್ಟೋಬರ್ 16,17,18ರಂದು ಕೆಲ ಜಿಲ್ಲೆಗಳಲ್ಲಿ, ಅಕ್ಟೋಬರ್ 19,20,21 ರಂದು ಕೆಲ ಜಿಲ್ಲೆಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ಗೊಂದಲ ಬಗೆಹರಿದಿಲ್ಲ : ಕೆಲವರು ರೇಷನ್ ಕಾರ್ಡ್ ಹೊಂದಿರುತ್ತಾರೆ. ಆದರೆ ರಾಜ್ಯ ಸರ್ಕಾರದ ಯಶಸ್ವಿನಿ/ಆಯುಷ್ಮಾನ್ ಭವ ಯೋಜನೆ ಅಥವಾ ಇನ್ನಿತರ ಕಾರಣಗಳಿಗಾಗಿ ಕಾರ್ಡ್ ಪಡೆದಿರುತ್ತಾರೆ. ರೇಷನ್ ಪಡೆಯುತ್ತಿರುವುದಿಲ್ಲ. ಇಂತಹವರ ಕಾರ್ಡ್ ಕೂಡಾ ರದ್ದಾಗುವ ಸಾಧ್ಯತೆ ಇದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಎಂಬ ಬಗ್ಗೆ ಸರ್ಕಾರ ಉತ್ತರ ಕೊಟ್ಟಿಲ್ಲ.
ಸದ್ಯ ರಾಜ್ಯದಲ್ಲಿ ಅಂತ್ಯೋದಯ, ಪಿಎಚ್ಎಚ್ ಹಾಗೂ ಎನ್ಪಿಎಚ್ಎಚ್ ಸೇರಿ ಒಟ್ಟು 52.34 ಲಕ್ಷ ರೇಷನ್ ಕಾರ್ಡ್ಗಳಿದ್ದು, 1 ಕೋಟಿ 52 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. ಬಿಪಿಎಲ್ನಲ್ಲಿ 1,27,82,893 ರೇಷನ್ ಕಾರ್ಡ್ಗಳಿದ್ದು ಒಟ್ಟು 4,37,65,128 ರಷ್ಟು ಫಲಾನುಭವಿಗಳಿದ್ದಾರೆ. ಇದರಿಂದ ಆಹಾರ ಇಲಾಖೆಗೆ ಅನುಕೂಲ ಆಗಲಿದ್ದು, ಹೊಸ ಕಾರ್ಡ್ ಸೇರ್ಪಡೆಗೂ ಸರ್ಕಾರ ಅವಕಾಶ ನೀಡುವ ನಿರೀಕ್ಷೆ ಇದೆ.



