ಮುತ್ತುವಿನ ಆಟಕ್ಕೆ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ದೊಡ್ಮನೆ ಯುವರಾಜ್ ಕುಮಾರ್, ಎಕ್ಕ ಮಾರ್ ಮಾರ್ ಅಂತ ಮಸ್ತ್ ಮನರಂಜನೆ ಕೊಡ್ತಿದ್ದಾರೆ. ಬ್ಯಾಂಗಲ್ ಬಂಗಾರಿಯ ಸೌಂಡು ಸಖತ್ ಆಗಿದೆ. ಸಂಜನಾ ಆನಂದ್.. ಈ ಚಿತ್ರದ ನಂತರ ಕನ್ನಡದ ಯಂಗ್ ಹುಡುಗರ ಹೊಸ ಕ್ರಷ್ ಆಗಿದ್ದಾರೆ. ಎಲ್ಲ ಓಕೆ.. ಇಲ್ಲಿ ಯುವರಾಜ್ ಕುಮಾರ್, ಅಪ್ಪನ ಹಾದಿಯಲ್ಲೇ ಸಾಗ್ತಿದ್ದಾರೆ. ಹೌದು, ರಾಘವೇಂದ್ರ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಚಿರಂಜೀವಿ ಸುಧಾಕರ್ ಕೂಡಾ ಆವರೇಜ್ ಸಾಲಿಗೆ ಸೇರಿತ್ತು. ದೊಡ್ಡ ಹಿಟ್ ಆಗಿರಲಿಲ್ಲ. ಆದರೆ.. ಎರಡನೇ ಸಿನಿಮಾ ʻನಂಜುಂಡಿ ಕಲ್ಯಾಣʼ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು.
ಒಂದ್ ಕಡೆ ಜ್ಯೂನಿಯರ್ ಪವರ್ ಸ್ಟಾರ್ ಅಂತಲೇ ಕರೆಸಿಕೊಳ್ತಿರೋ ಯುವ ರಾಜ್ ಕುಮಾರ್, ಚಿತ್ರಮಂದಿರಗಳಿಂದ ದೂರ ಉಳಿದಿದ್ದ ಪ್ರೇಕ್ಷಕರನ್ನು ಥಿಯೇಟರಿಗೆ ಎಳೆದು ತಂದಿದ್ದಾರೆ ಎನ್ನಲಡ್ಡಿಯಿಲ್ಲ. ಈ ವರ್ಷ ದೊಡ್ಡ ಸಿನಿಮಾಗಳಿಲ್ಲದೇ ಸೊರಗಿದ್ದ ಕನ್ನಡ ಚಿತ್ರರಂಗದಲ್ಲೀಗ ‘ಎಕ್ಕ’ ಫ್ರೆಶ್ ಖುಷಿ ಕೊಟ್ಟಿದೆ.
ರೋಹಿತ್ ಪದಕಿ ನಿರ್ದೇಶನದ ಸಿನಿಮಾದಲ್ಲಿ ಸಂಜನಾ ಆನಂದ್, ಸಂಪದ ಮೋಡಿ ಮಾಡ್ತಿದ್ಧಾರೆ. ಶೃತಿ ಕಣ್ಣೀರು ಹಾಕಿಸ್ತಿದ್ದಾರೆ. ಆದಿತ್ಯ ಥ್ರಿಲ್ ಕೊಡ್ತಿದ್ದಾರೆ. ಅತುಲ್ ಕುಲಕರ್ಣಿ ಸೈಲೆಂಟ್ ಆಗಿ ಅಬ್ಬರಿಸಿದ್ದಾರೆ. ಮಗುವಾಗಿ.. ಮೃಗವಾಗಿ ಅಬ್ಬರಿಸಿರುವ ಯುವ ರಾಜ್ ಕುಮಾರ್, ಮನಸ್ಸಿನಲಿ ನಿಲ್ಲುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಕ್ಷಕರ ಎದೆಯಲ್ಲಿ ಇಳಿದಿದೆ.
ಸಿನಿಮಾ ಗೆದ್ದಿದೆ ಎಂದು ಹೇಳುವುದು ಹೇಗೆ.. ಹೇಗೆಂದರೆ.. ಸಿನಿಮಾ ನೋಡಿ ಹೊರಬಂದವರಿಗೆ ಚಿತ್ರದ ಪಾತ್ರಗಳ ಹೆಸರು ನೆನಪಾಗಬೇಕು. ಅಷ್ಟಾದರೆ ಸಿನಿಮಾ ಸಖತ್ ಎಂದರ್ಥ. ಇಲ್ಲಿ ಮುತ್ತು ಆಗಿ ಯುವ, ನಂದಿನಿಯಾಗಿ ಸಂಜನಾ (ಬ್ಯಾಂಗಲ್ ಬಂಗಾರಿ), ಪಮ್ಮಿ, ಅತುಲ್ ಕುಲಕರ್ಣಿಯ ಮಸ್ತಾನ್ ಪಾತ್ರ.. ಹೀಗೆ ಹಲವು ಪಾತ್ರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಸಣ್ಣ ಸಣ್ಣ ಪಂಚಿಂಗ್ ಡೈಲಾಗ್ಸ್ ಕಿಕ್ ಕೊಡುತ್ತವೆ.
ಆರಂಭದಲ್ಲಿ ಸಾಕಷ್ಟು ಟ್ವಿಸ್ಟ್ & ಟರ್ನ್‌ಗಳು ಇರುವುದರಿಂದ ಮೊದಲರ್ಧ ಸಲೀಸಾಗಿ ಸಾಗುತ್ತದೆ. ಆದರೆ ಸೆಕೆಂಡ್ ಹಾಫ್ ಜರ್ನಿ ಕೊಂಚ ತ್ರಾಸು ಎನಿಸುತ್ತದೆ. ಕೆಲ ಪಾತ್ರಗಳಿಗೆ ಗಟ್ಟಿಯಾದ ಅಡಿಪಾಯ ಕಾಣಿಸುವುದಿಲ್ಲ. ಇನ್ನು, ನಿರ್ದೇಶಕರು ಒಂದೇ ಸಿನಿಮಾದಲ್ಲಿ ಹೀರೋಯಿಸಂ, ರೌಡಿಸಂ, ಲವ್, ಫ್ಯಾಮಿಲಿ, ಮದರ್ ಸೆಂಟಿಮೆಂಟ್ ಎಲ್ಲದಕ್ಕೂ ಜಾಗ ಮಾಡಿಕೊಡುವ ಕಸರತ್ತು ಮಾಡಿದ್ದಾರೆ. ಒಟ್ಟಾರೆಯಾಗಿ, ಯಾವುದೇ ನಿರೀಕ್ಷೆ ಇಲ್ಲದೇ ಕಮರ್ಷಿಯಲ್ ಮಸಾಲಾ ಸಿನಿಮಾಗಳನ್ನು ಎಂಜಾಯ್ ಮಾಡುವವರಿಗೆ ‘ಎಕ್ಕ’ ರುಚಿಸುತ್ತದೆ.
ಸೆಕೆಂಡ್ ಹಾಫ್ ಬಗ್ಗೆ ಒಂದಿಷ್ಟು ಆಕ್ಷೇಪಗಳೂ ಇವೆ. ಇದೆಲ್ಲದರ ಮಧ್ಯೆಯೇ ಎಕ್ಕ ಹಿಟ್ ಆಗಿದೆ. ಸೂಪರ್ ಹಿಟ್ ಆಗುತ್ತಿದೆ. ಹಿಟ್ ಎನ್ನವುದರಲ್ಲಿ ಸದ್ಯಕ್ಕೆ ಯಾವುದೇ ಡೌಟ್ ಇಲ್ಲ. ಯುವ ಚಿತ್ರದ ಬಗ್ಗೆ ಇಂಥಾದ್ದೊಂದು ಡೌಟ್ ಇತ್ತು. ಅಂತಿಮವಾಗಿ ಅದು ನಿಜವೂ ಆಯಿತು. ಯುವ ಆವರೇಜ್ ಸಿನಿಮಾ ಆಗಷ್ಟೇ ಉಳೀತು. ಆದರೆ ಯುವ ಹಾಗಾಗಿಲ್ಲ.
ಒಟ್ಟಿನಲ್ಲಿ ಅಪ್ಪ ರಾಘವೇಂದ್ರ ರಾಜ್ ಕುಮಾರ್ ಮೊದಲ ಚಿತ್ರ ಆವರೇಜ್. 2ನೇ ಸಿನಿಮಾ ಬ್ಲಾಕ್ ಬಸ್ಟರ್. ಮಗ ಯುವ ಸಿನಿಮಾನೂ ಹಾಗೆಯೇ ಆಗಿದೆ. ಮೊದಲ ಚಿತ್ರ ಯುವ ಆವರೇಜ್. 2ನೇ ಸಿನಿಮಾ ಎಕ್ಕ ಸದ್ಯಕ್ಕೆ ಹಿಟ್. ಬ್ಲಾಕ್ ಬಸ್ಟರ್ ಆಗುತ್ತದಾ.. ಕಾದು ನೋಡೋಣ.



