I Love you ಕಣೇ.. ಎಂದು ಹಾಡುತ್ತಾನೆ ಭೀಮ.. ಅರ್ಥಾತ್ ದುನಿಯಾ ವಿಜಯ್.
I love you too ಕಣೋ.. ಎನ್ನುತ್ತಾರೆ ಅಶ್ವಿನಿ. ಹೊಸ ಹುಡುಗಿ.
ಅವರಿಬ್ಬರ ಪ್ರಣಯಗೀತೆಯೇ ಭೀಮನ ರೊಮ್ಯಾನ್ಸ್. ಆದರೆ ಈ ಹಾಡು ಕೇಳುತ್ತಿದ್ದರೆ ಎಲ್ಲೋ ಕೇಳಿದಂತಿದೆಯಲ್ಲ ಎನ್ನುವುದು ಅಭಿಮಾನಿಗಳ ವಾದ.
ಬ್ಯಾಡ್ ಬಾಯ್ಸ್ ಹಾಡಿನ ಮೂಲಕ ಸೈಕ್ ಕಿಕ್ ಕೊಟ್ಟಿದ್ದ ಭೀಮ ಚಿತ್ರದ ರೊಮ್ಯಾಂಟಿಕ್ ಸಾಂಗ್ ಹಾಡು ರಿಲೀಸ್ ಆಗಿದೆ. ಲಿರಿಕಲ್ ಸಾಂಗ್ ಸಖತ್ ರೊಮ್ಯಾಂಟಿಕ್ ಆಗಿದೆ. ಭೀಮ ಚಿತ್ರ ಒಂದು ಆಕ್ಷನ್ ಡ್ರಾಮಾ. ಇಂತಹ ಚಿತ್ರದಲ್ಲೊಂದು ಚೆಂದದ ರೊಮ್ಯಾಂಟಿಕ್ ಸಾಂಗ್ ಇದೆ.
ಲವ್ ಯೂ ಕಣೇ ಎಂದು ದುನಿಯಾ ವಿಜಯ್ ಹಾಡಿದರೆ.. ಲವ್ ಯು ಟೂ ಕಣೇ.. ಎಂದು ಶೃಂಗಾರ ರಸ ಹರಿಸುತ್ತಾರೆ ಅಶ್ವಿನಿ. ವಿಜಯ್ ಶೃಂಗಾರ ರಾಜನಾದರೆ, ಅಶ್ವಿನಿ ಶೃಂಗಾರದ ಅರಸಿ. ಕವಿರಾಜ್ ಸಾಹಿತ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯ ಅನ್ನೋದು ಉತ್ತುಂಗಕ್ಕೇರಿದೆ.
ಪ್ರೇಮದ ಉತ್ತುಂಗದಲ್ಲಿ ದುನಿಯಾ ವಿಜಯ್ ಮತ್ತು ಅಶ್ವಿನಿ ಹಾಡುತ್ತಿದ್ದರೆ, ಹಿನ್ನೆಲೆಯಾಗಿ ಹಾಡಿರುವುದು ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ವೈಶ್. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಭೀಮ ಚಿತ್ರದ ರೊಮ್ಯಾಂಟಿಕ್ ಹಾಡು ಕೂಡಾ ಸೈಕ್ ಆಗಿಯೇ ಇದೆ.
ಲವ್ ಯೂ ಕಣೆ ಹಾಡಿನ ಮೇಲೆ ಇದೆಂತಾ ಡೌಟು ?
ಹಾಡಿನ ಧಾಟಿ ಕೇಳಿದರೆ ಕಡ್ಡಿಪುಡಿ ಚಿತ್ರದ ಸೌಂದರ್ಯ ಸಮರ.. ಹಾಡು ನೆನಪಾಗುತ್ತದೆ.. ಪಲ್ಲವಿ ಮುಗಿದ ನಂತರ ಬರುವ ಬೀಟ್ಸ್‌ಗಳು ಸೌಂದರ್ಯ ಸಮರ.. ಹಾಡಿನ ಬೀಟ್ಸ್‌ನ್ನು ನೆನಪಿಸುತ್ತವೆ. ಕಡ್ಡಿಪುಡಿ, ದುನಿಯಾ ಸೂರಿ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಸಿನಿಮಾ. ಸಂಗೀತ ನಿರ್ದೇಶಕ ಹರಿಕೃಷ್ಣ. ಆ ಹಾಡಿಗೆ ಸಾಹಿತ್ಯ ಬರೆದಿದ್ದವರು ಯೋಗರಾಜ್ ಭಟ್.
ಲವ್ ಯೂ ಕಣೇ ಎಂದು ಹಾಡುವಾಗ ಬೇಡ ಬೇಡ ಎಂದರೂ ಹಠವಾದಿ ಚಿತ್ರದ ಟೋನ್ʻಗಳ
ಗುಂಗು ನೆನಪಾಗುತ್ತದೆ. ಹಠವಾದಿಗೆ ಸಂಗೀತ ನೀಡಿದ್ದವರು ಸ್ವತಃ ವಿ.ರವಿಚಂದ್ರನ್.
ಆದರೆ ಇಲ್ಲಿ ಸಂಗೀತ ನೀಡಿರುವುದು ಚರಣ್ ರಾಜ್. ಇದುವರೆಗೆ ವೊರಿಜಿನಲ್ ಕೊಟ್ಟೇ ಖ್ಯಾತಿ ಪಡೆದವರು. ಹೀಗಾಗಿ ಹಾಗೇನಿಲ್ಲ. ಬಹುಶಃ ಹಠವಾದಿ ಮತ್ತು ಕಡ್ಡಿಪುಡಿಯ ಮ್ಯೂಸಿಕ್ ಕೇಳಿದವರು ಸಂಗೀತ ಪ್ರೇಮಿಗಳಷ್ಟೇ ಅಲ್ಲ, ತಜ್ಞರಾದವರು ಇಂತಹ ಆರೋಪ ಮಾಡಿದರೆ ಒಪ್ಪಬಹುದೇನೋ.. ಆದರೆ ಇದುವರೆಗೂ ಅಂತಹ ಅಭಿಪ್ರಾಯ ಯಾವುದೇ ಸಂಗೀತ ತಜ್ಞರಿಂದ ಹೊರಬಿದ್ದಿಲ್ಲ.



