ಮತ್ತೊಮ್ಮೆ ಅದೇ ಮಾತು ಹೇಳಿದ್ಧಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಧ್ರುವ ಸರ್ಜಾರ ಮೊದಲ ಸಿನಿಮಾ ಅದ್ಧೂರಿ ತೆರೆ ಕಂಡಿದ್ದು 2012ರಲ್ಲಿ. ಅದಾದ ಮೇಲೆ ಭರ್ಜರಿ ರಿಲೀಸ್ ಆಗಿದ್ದು 2014ರಲ್ಲಿ. ಎರಡು ವರ್ಷಗಳ ಅಂತರ. ಅದಾದ ಮೇಲೆ ಬಹದ್ದೂರ್ ಬಂತು. 2017ರಲ್ಲಿ. 3ನೇ ಸಿನಿಮಾಗೂ.. 2ನೇ ಸಿನಿಮಾಗೂ ನಡುವೆ 3 ವರ್ಷಗಳ ಗ್ಯಾಪ್ ಇತ್ತು.
4ನೇ ಸಿನಿಮಾ ರಿಲೀಸ್ ಆಗುವ ಹೊತ್ತಿಗೆ 2021. ಸರಿಯಾಗಿ 4 ವರ್ಷಗಳ ಗ್ಯಾಪ್. ಈಗ ಮಾರ್ಟಿನ್ ಬರುತ್ತಿದೆ. ಬರೋಬ್ಬರಿ 3 ವರ್ಷಗಳ ನಂತರ. ವಿಚಿತ್ರವೇನು ಗೊತ್ತೇ.. ಈ 12 ವರ್ಷಗಳಲ್ಲಿ ಕರ್ನಾಟಕ ಒಬ್ಬರಲ್ಲ.. ಅಂದರೆ 2012ರಿಂದ 2024ರ ಮಧ್ಯೆ 6 ಜನ ಸಿಎಂ ಆಗಿದ್ಧಾರೆ. ಆ 6ರಲ್ಲಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರದ್ದು ಎರಡೆರಡು ಬಾರಿ ಅಧಿಕಾರಾವಾದಿ.
ಸದಾನಂದ ಗೌಡ, ಜಗದೀಶ್ ಶೆಟ್ಟರ್, ಯಡಿಯೂರಪ್ಪ (2 ಬಾರಿ), ಸಿದ್ದರಾಮಯ್ಯ (2 ಬಾರಿ), ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ಧಾರೆ. ಆದರೆ.. ಧ್ರುವ ಸರ್ಜಾ ಟೋಟಲ್ ಸಿನಿಮಾಗಳ ಸಂಖ್ಯೆ ರಿಲೀಸ್ ಆಗಬೇಕಿರುವ ಮಾರ್ಟಿನ್ ಸೇರಿ 5. ಇನ್ನೊಂದು ಚಿತ್ರ ಪ್ರೇಮಬರಹದಲ್ಲಿ ಗೆಸ್ಟ್ ರೋಲ್. ಅಷ್ಟೆ. ಈಗ ಕೊನೆಗೂ ಮಾರ್ಟಿನ್ʻಗೆ ಕಾಲ ಕೂಡಿ ಬಂದಿದೆ. ಅಕ್ಟೋಬರ್ 11ಕ್ಕೆ ರಿಲೀಸ್ ಆಗುತ್ತಿದೆ ಮಾರ್ಟಿನ್.
ಇಂಥ ದಿನ ಟೀಸರು, ಟ್ರೇಲರು ಬರುತ್ತದೆ. ಇಂಥಾ ದಿನ ಹಾಡು, ಲಿರಿಕಲ್ ವಿಡಿಯೋ ರಿಲೀಸ್ ಮಾಡ್ತೇವೆ.. ಹೀಗೆಲ್ಲ ಹೇಳಿ ಚಿತ್ರವನ್ನು ಪ್ರಚಾರ ಮಾಡೋದು ಒಂದು ಸ್ಟೈಲ್ ಆದರೆ.. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರ ಬೇರೆಯದೇ ಹಾದಿ ಹಿಡಿದಿದೆ. ಹಾಡು, ಟ್ರೇಲರ್, ಸಾಂಗು, ವಿಡಿಯೋಗಳು, ಸೀನ್.. ಹೀಗೆ ಯಾವುದು ಬೇಕು ಹೇಳಿ.. ಅದನ್ನೇ ರಿಲೀಸ್ ಮಾಡ್ತೇವೆ ಅಂತಿದೆ ಮಾರ್ಟಿನ್ ಚಿತ್ರತಂಡ.
ಅಂತೂ ಇಂತೂ 3 ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ಮಾರ್ಟಿನ್ ರಿಲೀಸ್ ಆಗುತ್ತಿದೆ. 2021ರ ಏಪ್ರಿಲ್ʻನಲ್ಲಿ ಪೊಗರು ರಿಲೀಸ್ ಆಗಿತ್ತು. ಈಗ ಅಕ್ಟೋಬರ್ 11ಕ್ಕೆ ಮಾರ್ಟಿನ್ ಬರುತ್ತಿದೆ. ಧ್ರುವ ಸರ್ಜಾ ಅವರು ತಮ್ಮ ಎಂದಿನ ಸಂಪ್ರದಾಯದಂತೆ ಎರಡು ವರ್ಷವನ್ನೂ ಮೀರಿ.. 3 ವರ್ಷಕ್ಕೆ ಸಿನಿಮಾ ಮಾಡ್ತಿದ್ಧಾರೆ. ಎಂದಿನಂತೆ.. ಈ ಬಾರಿಯೂ ಮುಂದೆ ಹೀಗೆಲ್ಲ ಆಗಲ್ಲ ಎಂಬ ಪ್ರಾಮಿಸ್ ಕೂಡಾ ಮಾಡಿದ್ದಾರೆ.
ಅಂದಹಾಗೆ ವೋಟಿಂಗ್ ಮಾಡುವ ವಿಷಯಕ್ಕೆ ಬಂದರೆ.. ನಿರ್ದೇಶಕ ಎ.ಪಿ. ಅರ್ಜುನ್ ಈಗಾಗಲೇ ಚಿತ್ರದ ಪುಟ್ಟದೊಂದು ತುಣುಕು ಬಿಟ್ಟಿದ್ಧಾರೆ. ಅದೇ ಮಾದರಿಯಲ್ಲಿ ಮುಂದೆಯೂ ನಡೆಯುತ್ತದೆ. ಅಂದರೆ.. ನಿಮಗ್ಯಾವುದು ಬೇಕು ಎಂದು ಚಿತ್ರತಂಡ ರಿಕ್ವೆಸ್ಟ್ ಕೇಳುತ್ತದೆ. ಆ ಮನವಿಗೆ ಜನ ವೋಟ್ ಮಾಡಬೇಕು. ಯಾವುದಕ್ಕೆ ಹೆಚ್ಚು ಅಭಿಮಾನಿಗಳು ಜೈ ಅಂತಾರೋ.. ಅದೇ ರೀತಿ ರಿಲೀಸ್ ಮಾಡೋದು ಮಾರ್ಟಿನ್ ಟೀಂ ಪ್ಲಾನ್.
ಅಂದಹಾಗೆ ಅಕ್ಟೋಬರ್ 10ರಂದು ಎನ್ʻಟಿಆರ್ ಅಭಿನಯಿಸಿರುವ ದೇವರ ಸಿನಿಮಾ ಕೂಡಾ ರಿಲೀಸ್ ಆಗುತ್ತಿದೆ. ಎರಡು ದೊಡ್ಡ ಚಿತ್ರಗಳ ನಡುವೆ ಕ್ಲಾಶ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ವಿಜಯದಶಮಿ ಎಂಬುದು ಕನ್ನಡ ನಾಡಿನ ಅದ್ಭುತವಾದ ಹಬ್ಬ. ಈ ಹಬ್ಬಕ್ಕೆ ನಾವು ಏನಾದರೂ ಕೊಡಲೇಬೇಕು. ಆಗೆಲ್ಲ ಕನ್ನಡದಲ್ಲೇ ಮೂರು-ನಾಲ್ಕು ಸಿನಿಮಾ ರಿಲೀಸ್ ಆಗುತ್ತಿತ್ತು. ಈಗ ನಮ್ಮ ವಿಜಯದಶಮಿಗೆ ನಮ್ಮದೊಂದು ಸಿನಿಮಾ ರಿಲೀಸ್ ಮಾಡದಿದ್ದರೆ ಹೇಗೆ? ಕ್ಲ್ಯಾಶ್ ಎನ್ನೋದಕ್ಕಿಂತಲೂ ನಮ್ಮ ತಂಡದಿಂದ ನಮ್ಮ ಸಿನಿಮಾ ಬರುತ್ತಿದೆ, ಅವರ ತಂಡದಿಂದ ಅವರ ಸಿನಿಮಾ ಬರುತ್ತಿದೆ. ಎರಡು ಸಿನಿಮಾಗಳನ್ನು ತಡೆದುಕೊಳ್ಳುವಂತಹ ಸಾಮರ್ಥ್ಯ ಇರುವ ಚಿತ್ರಮಂದಿರಗಳು ಭಾರತದಲ್ಲಿ ಇವೆ. ಎರಡೂ ಸಿನಿಮಾವನ್ನು ವಿಜಯದಶಮಿ ಸಮಯದಲ್ಲಿ ನೋಡುವಂತಹ ಜನರು ಕೂಡ ನಮ್ಮ ದೇಶದಲ್ಲಿ ಇದ್ದಾರೆ ಎಂದು ಉತ್ತರ ಕೊಟ್ಟಿದ್ಧಾರೆ ಎ.ಪಿ.ಅರ್ಜುನ್.
ಉದಯ್ ಕೆ ಮೆಹ್ತಾ ನಿರ್ಮಾಣದ ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಎದುರು ವೈಭವಿ ಶಾಂಡಿಲ್ಯ ನಾಯಕಿ ಆಗಿದ್ಧಾರೆ.
ಎಲ್ಲ ಓಕೆ.. ಧ್ರುವ ಸರ್ಜಾ ಅವರು ವರ್ಷಕ್ಕೊಂದು ಅಥವಾ ಎರಡು ಸಿನಿಮಾ ಮಾಡುವ ಘೋಷಣೆಯನ್ನು ನಂಬೋದಾದ್ರೂ ಹೇಗೆ ಅಂತಿದ್ಧಾರೆ ಫ್ಯಾನ್ಸ್. ಏಕೆಂದರೆ.. ಧ್ರುವ ಸರ್ಜಾ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ.



