ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದ ಮೇರುನಟ. ವಿಷ್ಣುವರ್ಧನ್ ಕೂಡಾ ಕನ್ನಡದವರೇ. ವಿಷ್ಣು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ.. ಡಾ.ರಾಜ್ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ರಾಜ್ ಅವರಿಗೆ ವಿಷ್ಣು ಪ್ರತಿಸ್ಪರ್ಧಿಯಾಗಿರಲಿಲ್ಲ. ಪೈಪೋಟಿಯೂ ಆಗಿರಲಿಲ್ಲ. ಹೀಗಿದ್ದರೂ.. ಒಂದಷ್ಟು ಜನ ಸುಳ್ಳು ಹೇಳುತ್ತಲೇ.. ಆ ಸುಳ್ಳನ್ನು ಪದೇ ಪದೇ ಹೇಳಿ.. ಅನಕ್ಷರತೆ, ಅಜ್ಞಾನ ತುಂಬಿರುವ ಮನಸ್ಸುಗಳಿಗೆ ವಿಷ ಬಿತ್ತಿಬಿಟ್ಟರು. ಅಂಥದ್ದೇ ವಿಕೃತಿ ಇದು.
ಕೆಲವರಿರುತ್ತಾರೆ. ಹಿಂದೆ ಗೊತ್ತಿರಲ್ಲ.. ಮುಂದೆ ಗೊತ್ತಿರಲ್ಲ. ತಮ್ಮನ್ನು ತಾವು ಅಭಿಮಾನಿಗಳು ಎಂದು ಹೇಳಿಕೊಂಡು ವಿಕೃತಿ ಮೆರೆಯುತ್ತಾರೆ. ಅಂತಹ ಅಭಿಮಾನಿಯೊಬ್ಬ ಈಗ ವಿಷ್ಣು ಸ್ಮಾರಕ ಧ್ವಂಸ ವಿವಾದದಲ್ಲಿ ಎಂಟ್ರಿ ಕೊಟ್ಟಿದ್ದಾನೆ. ತನ್ನನ್ನು ಅಭಿಮಾನಿ ಎಂದು ಹೇಳಿಕೊಳ್ತಿರೋ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಡಾ.ರಾಜ್ ಹಾಗೂ ಅವರ ಮನೆ ಮಕ್ಕಳ ಬಗ್ಗೆ ಎಲ್ಲ ಅಸಹ್ಯವಾಗಿ ಮಾತನಾಡಿದ್ದಾನೆ. ಅಸಹ್ಯ ಎಂದರೆ.. ಈತನ ಮಾತುಗಳ ಮೇಲೆ ಕನಿಷ್ಠ ಐದಾರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಬಹುದು.
ಆತನ ಮಾತಿನ ಪ್ರಕಾರ.. ವಿಷ್ಣುವರ್ಧನ್ ಅವರ ಸಮಾಧಿ ಧ್ವಂಸಕ್ಕೆ ರಾಜ್ ಕುಟುಂಬವೇ ಕಾರಣವಂತೆ. ಆತನಿಗೆ ಇದೇ ಸ್ಮಾರಕಕ್ಕಾಗಿ ಶಿವರಾಜ್ ಕುಮಾರ್ ಕೂಡಾ ಪ್ರಯತ್ನಿಸಿದ್ದ ವಿಷಯ ಗೊತ್ತಿಲ್ಲ. ನಟ ರಾಘವೇಂದ್ರ ರಾಜ್ ಕುಮಾರ್, ಅವರ ಪುತ್ರ ವಿನಯ್ ರಾಜ್ ಕುಮಾರ್ ಅವರೂ ಕೂಡಾ ವಿಷ್ಣುವರ್ಧನ್ ಅವರಿಗೆ ಸೂಕ್ತ ಗೌರವ ಸಿಗಲೇಬೇಕು ಎಂದು ಒತ್ತಾಯಿಸಿರುವುದೂ ಗೊತ್ತಿಲ್ಲ. ಒಟ್ಟಿನಲ್ಲಿ ಏನೋ ಒಂದು ವಿಕೃತಿ ಹಂಚಿಕೊಳ್ಳಬೇಕು, ಹಂಚಿಕೊಂಡಿದ್ದಾನೆ, ಅಷ್ಟೇ.
ಈತನ ವಿಕೃತಿ ಅಷ್ಟಕ್ಕೇ ನಿಂತಿಲ್ಲ. ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಬಗ್ಗೆ ಕೂಡಾ ಕೆಟ್ಟಾ ಕೊಳಕ ಮಾತುಗಳನ್ನಾಡಿದ್ದಾನೆ. ವಿನೋದ್ ರಾಜ್ ಡಾ.ರಾಜ್ ಅವರಿಗೆ ಹುಟ್ಟಿದ್ದಾನೆ ಎಂದೆಲ್ಲ ಆರೋಪಿಸಿದ್ದಾನೆ. ಇದು ಅತಿ ಆಗುತ್ತಿರುವುದಂತೂ ನಿಜ. ಲೀಲಾವತಿ, ಬದುಕಿದ್ದಾಗ ಹೇಳಲಿಲ್ಲ. ವಿನೋದ್ ರಾಜ್ ಹೇಳುತ್ತಿಲ್ಲ. ಯಾವಾಗ ಕೇಳಿದರೂ.. ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಹೇಳುವುದು ಮಾಮೂಲಿಯಾಗಿಬಿಟ್ಟಿದೆ. ಇದು ಇನ್ನಷ್ಟು ಊಹಾಪೋಹ, ಕಲ್ಪನೆಗಳಿಗೆ ದಾರಿ ಮಾಡಿ ಕೊಡ್ತಾನೇ ಇದೆ. ಅವರವರು ಅವರ ಕಲ್ಪನೆಗೆ ತಕ್ಕಂತೆ ಕಥೆ ಕಟ್ಟಿಕೊಳ್ಳೋದಕ್ಕೆ ಸಹಾಯವಾಗುತ್ತದೆ, ಅಷ್ಟೇ.
ಇನ್ನು ನಟಿ ಗೀತಾ ಅವರಿಗೂ.. ಡಾ.ರಾಜ್ ಕುಮಾರ್ ಅವರಿಗೂ ಸಂಬಂಧ ಕಲ್ಪಿಸಿದ್ದಾನೆ. ಇವನನ್ನ ಇವನು ಏನ್ ಅಂದ್ಕೊಂಡಿದ್ದಾನೋ.. ಗೊತ್ತಿಲ್ಲ. ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದವರೆಲ್ಲರ ಜೊತೆ ಸಂಬಂಧ ಇರುತ್ತೆ ಅಂದ್ಕೊಂಡ್ ಬಿಟ್ಟಿದ್ದಾನೆ ಈ ಅಜ್ಞಾನಿ. ವಿಚಿತ್ರ ಅಂದ್ರೆ.. ದರ್ಶನ್ ಅಭಿಮಾನಿ ಎನ್ನಿಸಿಕೊಂಡವನು ಅದನ್ನು ಷೇರ್ ಮಾಡಿದ್ದಾನೆ.
ಒಂದೊಳ್ಳೆ ವಿಷಯ ಅಂದ್ರೆ.. ವಿಷ್ಣುವರ್ಧನ್ ಅಭಿಮಾನಿಗಳೂ ಸೇರಿದಂತೆ ಬಹುತೇಕ ನಟರ ಅಭಿಮಾನಿಗಳು ಇದನ್ನು ಖಂಡಿಸುತ್ತಿದ್ದಾರೆ. ನಟಿ ರಮ್ಯಾ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ಕಂಪ್ಲೇಂಟ್ ಮಾಡಿ.. ಕೆಲವರು ಅರೆಸ್ಟ್ ಆಗಿದ್ದರೂ.. ಈ ಮಾತಿನ ಚಪಲ ನಿಂತಿಲ್ಲ. ಇಂತಹ ತಿಳಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆಯಂತೂ ಇದೆ.
ಇದಕ್ಕೊಂದು ಕೊನೆ ಕಾಣಿಸದೇ ಹೋದರೆ.. ಇಂತಹ ಅಜ್ಞಾನಿಗಳೇ ತುಂಬಿಕೊಂಡು ಈಗಾಗಲೇ ಹೊಲಸೆದ್ದು ಹೋಗಿರುವ ಚಿತ್ರರಂಗವನ್ನು, ಇನ್ನಷ್ಟು ಹೊಲಸು ಮಾಡುತ್ತಾರೆ. ಇಂತಹವರು ಯಾವ ನಟನಿಗೂ ಅಭಿಮಾನಿಗಳಾಗೋಕೆ ಯೋಗ್ಯರಲ್ಲ.



