ಡಾ.ರಾಜ್ ಕುಮಾರ್ (Dr. Rajkumar). ಅದೊಂದು ಹೆಸರು ಅದೆಷ್ಟು ಕಲಾವಿದರಿಗೆ ಜನ್ಮ ಕೊಟ್ಟಿದೆಯೋ.. ಲೆಕ್ಕ ಇಟ್ಟವರಿಲ್ಲ. ಅವರ ಕುಟುಂಬದಲ್ಲೂ ಅಷ್ಟೇ. ಡಾ.ರಾಜ್ (Dr. Rajkumar) ಬೆನ್ನಲ್ಲೇ ಚಿತ್ರರಂಗಕ್ಕೆ ಬಂದಿದ್ದು ತಮ್ಮ ವರದರಾಜ್ (Vardappa) ಮತ್ತು ಪತ್ನಿ ಪಾರ್ವತಮ್ಮ ರಾಜಕುಮಾರ್(Parvathamma Rajkumar). ನಿರ್ಮಾಪಕರಾಗಿ ರಾಜ್ ಬೆನ್ನೆಲುಬಾಗಿ ನಿಂತಿದ್ದವರು. ಪಾರ್ವತಮ್ಮನವರಿಗೆ ಶಕ್ತಿ ತುಂಬುತ್ತಿದ್ದವರು ವರದಪ್ಪ.
ಅದಾದ ಮೇಲೆ ಇಂಡಸ್ಟ್ರಿಗೆ ಬಂದವರು ಶಿವ ರಾಜ್ ಕುಮಾರ್(Dr. Shiva Rajkumar) , ರಾಘವೇಂದ್ರ ರಾಜ್`ಕುಮಾರ್(Raghavendra Rajkumar) , ಪುನೀತ್ ರಾಜ್`ಕುಮಾರ್(Dr.Puneeth Rajkumar) . ಇವರದ್ದು ಎರಡನೆಯ ತಲೆಮಾರು.
ಶಿವಣ್ಣ ಮಕ್ಕಳಾದ ನಿವೇದಿತಾ (Niveditha)ಮತ್ತು ನಿರುಪಮಾ (Nirupama) ಇಬ್ಬರೂ ನಿರ್ಮಾಪಕರಾಗಿ ಚಿತ್ರರಂಗದಲ್ಲೇ ಇದ್ದಾರೆ. ಶಿವಣ್ಣ ಪತ್ನಿ ಗೀತಾ (Geetha Shiva Rajkumar) ಅವರೂ ನಿರ್ಮಾಪಕಿ.
ಈಗಾಗಲೇ ವಿನಯ್ ರಾಜಕುಮಾರ್ (Vinay Rajkumar) ಬಂದಿದ್ದಾರೆ. ಯುವ ರಾಜ್`ಕುಮಾರ್ (Yuva Rajkumar) ಬರುತ್ತಿದ್ದಾರೆ. ಇಬ್ಬರೂ ರಾಘಣ್ಣನವರ ಮಕ್ಕಳು.
ಪುನೀತ್ ನಿಧನದ ನಂತರ ಅಶ್ವಿನಿಯವರೂ (Ashwini Puneeth Rajkumar) ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಬ್ಯುಸಿಯಾಗಿದ್ದಾರೆ. ಪುನೀತ್ ಮಕ್ಕಳಾದ ಧೃತಿ ಮತ್ತು ವಂದಿತಾ (Dhriti puneeth and Vanditha Puneeth) ಇಂಡಸ್ಟ್ರಿಯಲ್ಲಿಲ್ಲ.
ಮತ್ತೊಂದೆಡೆ ಡಾ.ರಾಜ್ ಮಗಳು ಪೂರ್ಣಿಮಾ (Poornima)ಮತ್ತು ರಾಮ್`ಕುಮಾರ್(Ramkumar) . ರಾಮ್`ಕುಮಾರ್ ಹೀರೋ ಆಗಿದ್ದವರು. ಪೂರ್ಣಿಮಾ ನಿರ್ಮಾಪಕಿ. ಇವರ ಮಕ್ಕಳಾದ ಧೀರನ್ ಹೀರೋ (Dhiren Ramkumar)ಆದರೆ, ಧನ್ಯಾ (Dhanya Ramkumar) ಹೀರೋಯಿನ್. ರಾಮ್`ಕುಮಾರ್ ತಂದೆ ಶೃಂಗಾರ್ ನಾಗರಾಜ್ (Shirngara nagaraj) ಕೂಡಾ ನಿರ್ಮಾಪಕರು.
ಇನ್ನು ಎಸ್.ಎ.ಗೋವಿಂದರಾಜ್(SA Govindaraj), ಚಿನ್ನೇಗೌಡ್ರು Srimurali (ಶ್ರೀಮುರಳಿ, (Vijay Raghavendra and Srimurali) ವಿಜಯ್ ರಾಘವೇಂದ್ರ ತಂದೆ) ಹಾಗೂ ಎಸ್.ಎ. ಶ್ರೀನಿವಾಸ್ ಪಾರ್ವತಮ್ಮನವರ ಸಹೋದರರು. ಚಿತ್ರ ನಿರ್ಮಾಪಕರು. ನಟರಾದ ಬಾಲರಾಜ್, ಸೂರಜ್ ಕೂಡಾ ರಾಜ್ ಕುಟುಂಬದವರೇ.
ಇನ್ನು ಗೀತಾ ಅವರ ಸಹೋದರರಾದ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಕೂಡಾ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದವರೇ.
ಕನ್ನಡದಲ್ಲಿ ಅತೀ ಹೆಚ್ಚು ಕಲಾವಿದರು ಇರುವ ಕುಟುಂಬ ಡಾ.ರಾಜ್ ಅವರದ್ದು. ಡಾ.ರಾಜ್ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸಿನಿಮಾದಲ್ಲಿಯೇ ಹೆಚ್ಚಿದ್ದಾರೆ. ಇದೀಗ ಮತ್ತೊಬ್ಬ ಹೀರೋ ಆಗಲು ಹೊರಟಿದ್ದಾರೆ. ಅಣ್ಣಾವ್ರ ಹಿರಿಯ ಪುತ್ರಿ ಲಕ್ಷ್ಮೀ ಹಾಗೂ ಗೋವಿಂದರಾಜ್ ದಂಪತಿಯ ಪುತ್ರ ಷಣ್ಮುಖ ಗೋವಿಂದರಾಜ್ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಷಣ್ಮುಖ ಗೋವಿಂದರಾಜ್ ಅವರ ಚೊಚ್ಚಲ ಸಿನಿಮಾ `ನಿಂಬಿಯಾ ಬನಾದ ಮ್ಯಾಗ’
ಶೂಟಿಂಗ್ ನಡೆದಿದೆ. ಈ ಚಿತ್ರಕ್ಕೆ ಅಶೋಕ್ ಕಡಬ ನಿರ್ದೇಶನ ಮಾಡಿದ್ದಾರೆ. `ನಿಂಬಿಯಾ ಬನಾದ ಮ್ಯಾಗ’ (Nimbeeya banada myaga) ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಎರಡನೇ ಚಿತ್ರಕ್ಕೆ ಷಣ್ಮುಖ ಗೋವಿಂದರಾಜ್ ಚಾಲನೆ ಕೊಟ್ಟಿದ್ದಾರೆ. ಷಣ್ಮುಖ ಗೋವಿಂದರಾಜ್ (Shanmukha Govindaraj) ನಟನೆಯ ಎರಡನೇ ಚಿತ್ರದ ಹೆಸರು (Chinnada Mallige Hoove) ಚಿನ್ನದ ಮಲ್ಲಿಗೆ ಹೂವೇ.
ಡಾ.ರಾಜ್, ಜಯಪ್ರದ(Jayaprada) , ಜಯಚಿತ್ರ, ವಜ್ರಮುನಿ, ಬಾಲಕೃಷ್ಣ, ಶ್ರೀನಿವಾಸ ಮೂರ್ತಿ, ಪ್ರಭಾಕರ್.. ಮೊದಲಾದವರು ನಟಿಸಿದ್ದ ಚಿತ್ರದ ಹಾಡಿನ ಮೊದಲ ಸಾಲು ಚಿನ್ನದ ಮಲ್ಲಿಗೆ ಹೂವೆ. ಚೆಂಗುಮಣಿ ಮತ್ತು ಪೂವಿಯ ನಡುವಿನ ಪ್ರೇಮಗೀತೆಯನ್ನು ಚಿತ್ರದ ಟೈಟಲ್ ಆಗಿಟ್ಟುಕೊಂಡಿದ್ದಾರೆ ನವಿಲುಗರಿ ನವೀನ್. ಚಿತ್ರದ ಡೈರೆಕ್ಟರ್ ಇವರೇ.. ನವೀನ್ ಗರಿ.
ಚಿನ್ನದ ಮಲ್ಲಿಗೆ ಹೂವೆ’ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ ಖ್ಯಾತ ಸಾಹಿತಿ ಡಾ ವಿ ನಾಗೇಂದ್ರ ಪ್ರಸಾದ್ ಬರೆದುಕೊಟ್ಟರು. ನಟ ಡಾ ರಾಘವೇಂದ್ರ ರಾಜ್ ಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು. ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ ‘ಸಾರಾ ವಜ್ರ’ ಚಿತ್ರವನ್ನು ನಿರ್ದೇಶಿಸಿದ್ದ ಆರ್ನಾ ಸಾಧ್ಯ ಈಗ ನಿರ್ಮಾಪಕಿಯಾಗಿದ್ದಾರೆ. ಸಂಭ್ರಮ ಮೀಡಿಯಾ ಹೌಸ್ ಎಂಬ ಸಂಸ್ಥೆಯ ಮೂಲಕ ‘ಚಿನ್ನದ ಮಲ್ಲಿಗೆ ಹೂವೇ’ ಚಿತ್ರವನ್ನು ಆರ್ನಾ ಸಾಧ್ಯ ನಿರ್ಮಾಣ ಮಾಡುತ್ತಿದ್ದಾರೆ.



