Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಸಿಎಂ ಆಗಿದ್ದ ಎಸ್‌ ಎಂ ಕೃಷ್ಣಗೆ ಕಣ್ಣೀರು ಹಾಕಿಸಿದ್ದ ಡಾ.ರಾಜ್‌ ಕಿಡ್ನಾಪ್‌ ಕೇಸ್‌ : ವಿಲನ್‌ ವೀರಪ್ಪನ್..!‌

SpeciallU by SpeciallU
December 10, 2024
in News, Politics
0 0
0
ಸಿಎಂ ಆಗಿದ್ದ ಎಸ್‌ ಎಂ ಕೃಷ್ಣಗೆ ಕಣ್ಣೀರು ಹಾಕಿಸಿದ್ದ ಡಾ.ರಾಜ್‌ ಕಿಡ್ನಾಪ್‌ ಕೇಸ್‌ : ವಿಲನ್‌ ವೀರಪ್ಪನ್..!‌

ವಿಧಿವಶರಾಗಿರುವ ಎಸ್‌ ಎಂ ಕೃಷ್ಣ ರಾಜಕೀಯದಲ್ಲಿದ್ದಷ್ಟೂ ದಿನ ಒಂದಲ್ಲ ಒಂದು ಅಧಿಕಾರದಲ್ಲಿದ್ದವರು. ಶಾಸಕ, ಸಂಸದ, ಸ್ಪೀಕರ್‌, ಡೆಪ್ಯುಟಿ ಸಿಎಂ, ಸಿಎಂ, ಗವರ್ನರ್‌, ವಿದೇಶಾಂಗ ಸಚಿವ… ಹೀಗೆ.. ಅಂತಹ ಎಸ್‌ ಎಂ ಕೃಷ್ಣ ಅವರು ಕರ್ನಾಟಕ ಮುಖ್ಯಮಂತ್ರಿ ಆಗಿದ್ರಲ್ಲ, ಆಗ ಅವರನ್ನ ಇನ್ನಿಲ್ಲದಂತೆ ವಿಲನ್‌ ಆಗಿ ಕಾಡಿದ್ದವನು ವೀರಪ್ಪನ್.‌ ಸಿಎಂ ಆಗಿದ್ದೇ ಆಗಿದ್ದು, ಕೃಷ್ಣ ಅವರ ನೆಮ್ಮದಿಯನ್ನ ಕಿತ್ತುಕೊಂಡಿದ್ದವನು ಮಿಸ್ಟರ್‌ ನರಹಂತಕ, ದಂತಚೋರ, ಗಂಧದ ಕಳ್ಳ, ಗ್ಯಾಂಗ್ ಸ್ಟರ್‌ ವೀರಪ್ಪನ್.

ಸಿಎಂ ಆಗಿದ್ದ ನಾಲ್ಕೂವರೆ ವರ್ಷ ಅವಧಿಯಲ್ಲಿ ಇವತ್ತಿಗೂ ಜನ ನೆನಪು ಮಾಡ್ಕೊಳ್ಳೋದು ಡಾ.ರಾಜ್‌ ಪ್ರಕರಣವನ್ನ. ಅಫ್ಕೋರ್ಸ್‌ ಅದಕ್ಕೂ ಮೊದಲು ವೀರಪ್ಪನ್‌ ಪೊಲೀಸರನ್ನ ಕಿಡ್ನಾಪ್‌ ಮಾಡ್ತಿದ್ದ, ಕೊಲ್ತಿದ್ದ. ಆದರೆ ಡಾ.ರಾಜ್‌ ಕುಮಾರ್‌ ಪ್ರಕರಣವನ್ನ ಜನ ಮರೆಯೋ ಹಾಗೇ ಇಲ್ಲ. ಯಾಕಂದ್ರೆ 108 ದಿನಗಳ ಕಾಲ ರಾಜ್‌ ಕುಮಾರ್, ವೀರಪ್ಪನ್‌ ವಶದಲ್ಲಿದ್ದರು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಇಂತಹ ಎಸ್‌ ಎಂ ಕೃಷ್ಣ ಅವರನ್ನ ಅಧಿಕಾರ ಅವಧಿಯ ಉದ್ದಕ್ಕೂ ಕಾಡಿದ್ದು ಇಬ್ಬರೇ ವಿಲನ್ನುಗಳು. ಒಂದು ಬರ. ಮತ್ತೊಬ್ಬ ವೀರಪ್ಪನ್.‌  ಎಸ್‌ ಎಂ ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಇಡೀ ಅವಧಿ ಕಾಟ ಕೊಟ್ಟಿದ್ದವನು ನರಹಂತಕ ದಂತಚೋರ ವೀರಪ್ಪನ್ ಎರಡು ದೊಡ್ಡ ಕಿಡ್ನಾಪ್‌ ಮಾಡಿದ್ದ. ಮೊದಲನೆಯದ್ದು ಡಾ.ರಾಜ್‌ ಕುಮಾರ್‌, ನಾಗಪ್ಪ, ನಾಗೇಶ್‌ ಕುಮಾರ್‌ ಅವರದ್ದು, ಮತ್ತೊಂದು ಹನೂರು ನಾಗಪ್ಪ ಅವರದ್ದು.

ಡಾ.ರಾಜ್‌ ಕುಮಾರ್‌ ಅವರನ್ನ ಕಿಡ್ನಾಪ್‌ ಮಾಡಿದ್ನಲ್ಲ, ಆಗ ಸಿಎಂ ಆಗಿದ್ದವರು ಇದೇ ಎಸ್‌ ಎಂ ಕೃಷ್ಣ. ಒಂದು ಕಡೆ ಪಾರ್ವತಮ್ಮ ರಾಜ್‌ ಕುಮಾರ್‌, ಮತ್ತವರ ಕುಟುಂಬವನ್ನ ನಿಭಾಯಿಸ್ತಾನೇ, ಮತ್ತೊಂದು ಕಡೆ ನೆಡುಮಾರನ್‌, ನಕ್ಕೀರನ್‌ ಗೋಪಾಲ್‌ ಅಂತಹವರನ್ನೆಲ್ಲ ನಿಭಾಯಿಸಿ ಬಿಡುಗಡೆ ಮಾಡಿಸಿದ್ದು ಎಸ್‌ ಎಂ ಕೃಷ್ಣ ಅವರಿಗೂ ಒಂದು ಸವಾಲಾಗಿತ್ತು.

ಅಭಿಮಾನಿಗಳು ಒಂದು ಕಡೆ ನಾವೇ ಬಿಡಿಸ್ಕೊಂಡು ಬರ್ತೀವಿ ಅಂತಾ ಕಾಡಿಗೇ ನುಗ್ಗೋಕೆ ಹೋಗ್ತಿದ್ರು. ಒಂದು ಕಡೆ ಅಭಿಮಾನಿಗಳ ಆ ಹುಂಬತನವನ್ನೂ ನಿಭಾಯಿಸಬೇಕಿತ್ತು. ಡಾ.ರಾಜ್‌ ಕಿಡ್ನಾಪ್‌ ಆದ ನಂತರ ಸುಮಾರು ಒಂದು ತಿಂಗಳು ಇಡೀ ಕರ್ನಾಟಕ ಸ್ತಬ್ಧವಾಗಿತ್ತು. ಚಿತ್ರರಂಗವಂತೂ ಏನೂ ಮಾಡದೆ ಕುಳಿತುಬಿಟ್ಟಿತ್ತು.‌ ಕಾರಣ ಕಿಡ್ನಾಪ್‌ ಅಗಿದ್ದವರು ಡಾ.ರಾಜ್‌ ಕುಮಾರ್.  ಎಸ್‌ ಎಂ ಕೃಷ್ಣ ಅವರಿಗೂ ಇಂತಹ ಪ್ರಕರಣ ಹೊಸದು. ಪೊಲೀಸರಿಗೂ ಹೊಸದು. ಕಿಡ್ನಾಪ್‌ ಆಗಿದ್ದ ವ್ಯಕ್ತಿ ಸಾಮಾನ್ಯನಲ್ಲ. ಕರ್ನಾಟಕ ರತ್ನ.

ಎಸ್‌ ಎಂ ಕೃಷ್ಣ ಅವರಿಗೆ ರಾಜಕೀಯವಾಗಿ ವಿರೋಧ ಏನೂ ಇರಲಿಲ್ಲ, ಏನು ಬೇಕಾದರೂ ಮಾಡಿ ಮುಖ್ಯಮಂತ್ರಿಗಳೇ, ನಿಮ್ಮ ಜೊತೆ ನಾವಿದ್ದೀವಿ ಎನ್ನುತ್ತಿದ್ದವರೆಲ್ಲ, ಕಾನೂನು ಪ್ರಕಾರವಾಗಿ ಇರಲಿ, ಅಷ್ಟೇ ಅನ್ನೋ ಸೇಫ್‌ ಮೋಡಿಗೆ ಜಾರ್ತಾ ಇದ್ರು. ಅಂತಹ ಸಂದರ್ಭದಲ್ಲಿ ಟೀಕೆಗಳಿಗೆ ಹೆದರದೆ, ಕೆಲವು ಕಾನೂನು ಮೀರಿದ ಹೆಜ್ಜೆ ಇಟ್ಟವರು ಎಸ್‌ ಎಂ ಕೃಷ್ಣ. ಡಾ.ರಾಜ್‌ ಬಿಡುಗಡೆಗಾಗಿ 300 ಕೋಟಿಗೂ ಹೆಚ್ಚು ದುಡ್ಡು ಕೊಟ್ಟಿದ್ದಾರೆ ಅನ್ನೋ ಕಥೆಗಳಿವೆಯಾದ್ರೂ, ಅದನ್ನ ಡಾ.ರಾಜ್‌ ಕುಟುಂಬ, ಎಸ್‌ ಎಂ ಕೃಷ್ಣ ಸೇರಿದಂತೆ ಯಾರೂ ಅದನ್ನ ಒಪ್ಪೋದಿಲ್ಲ.

೧೦೮ ದಿನಗಳ ನಂತರ ಡಾ.ರಾಜ್‌ ಕುಮಾರ್‌ ಅವರನ್ನು ವಾಪಸ್‌ ಕಳಿಸಿಕೊಟ್ಟಿದ್ದ ವೀರಪ್ಪನ್.‌ ಈ ಹಾದಿಯಲ್ಲಿ ಒಂದು ಕಡೆ ನ್ಯಾಯಾಲಯಗಳ ಹದ್ದಿನ ಕಣ್ಣು, ಮತ್ತೊಂದು ಕಡೆ ಎಲ್‌ಟಿಟಿಈ ಜೊತೆ ಸಂಪರ್ಕ ಇರುವವರನ್ನೂ ಮಾತನಾಡಿಸಿ ಒಪ್ಪಿಸಬೇಕಾದ ಅನಿವಾರ್ಯತೆಗಳೆಲ್ಲವನ್ನೂ ಕೃಷ್ಣ ನಾಜೂಕಾಗಿ ನಿಭಾಯಿಸಿದ್ದರು.

ಡಾ.ರಾಜ್‌ ಪ್ರರಣವನ್ನೇನೋ ನಿಭಾಯಿಸಿದ್ದ ಎಸ್‌ ಎಂ ಕೃಷ್ಣ ಅವರಿಗೆ ಅದೇ ಅದೃಷ್ಟ ಹನೂರು ನಾಗಪ್ಪ ಕಿಡ್ನಾಪ್‌ ಆದಾಗ ಇರಲಿಲ್ಲ. ಬಂಡೆಯೊಂದರ ಹಿಂದೆ ಕತ್ತು ಕೊಯ್ದು ಹೋಗಿದ್ದ ವೀರಪ್ಪನ್‌, ಎಸ್‌ ಎಂ ಕೃಷ್ಣ ಅವರನ್ನ ಇನ್ನಿಲ್ಲದಂತೆ ಕಾಡಿಬಿಟ್ಟಿದ್ದ.

Tags: #ಎಸ್‌ಎಂಕೃಷ್ಣ #ಸಾವು #ವಿಧಿವಶ #ಡಾ.ರಾಜ್‌ #ಕಿಡ್ನಾಪ್‌ಕೇಸ್‌ #SMKrishna #death #Dr.Raj #KidnapCase
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.