ಸಿದ್ದರಾಮಯ್ಯ ಅವರು ಸಿಎಂ ಪಟ್ಟ ಬಿಟ್ಟು ಕೊಡುವುದಕ್ಕೆ ಒಪ್ಪಿದ್ದಾರಂತೆ. ಆದರೆ.. ಸಿದ್ಧರಾಮಯ್ಯ ಆಪ್ತರು ರೆಡಿ ಇಲ್ವಂತೆ. ಹೈಕಮಾಂಡ್ ಎದುರು ಎರಡೂವರೆ ವರ್ಷ ಸಿಎಂ ಪಟ್ಟಕ್ಕೆ ಓಕೆ ಎಂದಿರುವ ಸಿದ್ದು, ಅದನ್ನು ಪಾಲಿಸಲು ರೆಡಿ ಇದ್ದರೂ.. ಅವರ ಆಪ್ತರು ಬಿಡ್ತಾ ಇಲ್ವಂತೆ. ನೀವು ಸುಮ್ನಿರಿ ಸಾರ್.. ನಾವ್ ನೋಡ್ಕೋತೇವೆ ಎನ್ನುತ್ತಿರುವ ಆಪ್ತರು ದೆಹಲಿ ವರಿಷ್ಠರನ್ನು ಟಚ್ ಮಾಡಿದ್ದಾರೆ. ಸುರ್ಜೇವಾಲ, ವೇಣುಗೋಪಾಲ್ ಅವರನ್ನ ಕಂಡು ಮಾತನಾಡಿದ್ದಾರೆ. ಈ ವೇಳೆ ಅವರು ಒಂದಿಷ್ಟು ಬೇಡಿಕೆ ಇಟ್ಟು.. ಕೆಲವು ಪ್ರಾಮಿಸ್ ಮಾಡಿದ್ದಾರೆ.
ಬೇಡಿಕೆಗಳು ಹೆಚ್ಚೇನಿಲ್ಲ. 5 ವರ್ಷವೂ ಸಿಎಂ ಆಗಿ ಸಿದ್ಧರಾಮಯ್ಯ ಅವರೇ ಕಂಟಿನ್ಯೂ ಆಗಲಿ. ಡಿಕೆ ಶಿವಕುಮಾರ್ ಮುಂದಿನ ಬಾರಿ ಸಿಎಂ ಆಗಲಿ ಎನ್ನುವುದು ಸಿದ್ದು ಆಪ್ತರ ಡಿಮ್ಯಾಂಡು. ಸಿದ್ಧು ಆಪ್ತರು ಎಂದರೆ ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಈ ವೇಳೆ ಸಿದ್ದು ಆಪ್ತರು ನೀಡಿರುವ ಪ್ರಾಮಿಸ್ಸುಗಳೂ ಅಷ್ಟೇ ಇಂಟ್ರೆಸ್ಟಿಂಗು. ಪ್ರತೀ ತಿಂಗಳು ದೆಹಲಿಗೆ ಬರುತ್ತೇವೆ. ನೂರೇನೂ.. ಐನೂರು ಭರವಸೆ ಈಡೇರಿಸ್ತೇವೆ. ದೆಹಲಿಯವರು ಕೇಳಿದ ಎಲ್ಲವನ್ನೂ ಕೊಡುತ್ತೇವೆ. ಸಹಾಯ, ಸಹಕಾರ ನೀಡುತ್ತೇವೆ. ಸಂಘಟನೆಗೂ ಸಂಪನ್ಮೂಲ ಕೊಡುತ್ತೇವೆ. ಆದರೆ.. ಸಿದ್ಧರಾಮಯ್ಯ ಅವರನ್ನು ಟಚ್ ಮಾಡಬೇಡಿ.. ಹೀಗೆ ಪ್ರಾಮಿಸ್ ಮಾಡಿರುವ ಸಿದ್ದು ಆಪ್ತರ ಟೀಂ, 2028ಕ್ಕೆ ಸಿದ್ಧರಾಮಯ್ಯ ಅವರೇ ಡಿಕೆ ಪರ ಮುಂದೆ ನಿಂತು ಪ್ರಚಾರ ಮಾಡ್ತಾರೆ. ಡೋಂಟ್ ವರಿ. ಸಿದ್ಧರಾಮಯ್ಯ ಅವರೇ ಡಿಕೆ ಅವರನ್ನು ಸಿಎಂ ಪಟ್ಟಕ್ಕೆ ಕೂರಿಸುತ್ತಾರೆ ಎಂದೆಲ್ಲ ಭರವಸೆ ಕೊಟ್ಟಿದ್ದಾರೆ. ಸಿದ್ದು ಆಪ್ತರು ಹೇಳಿರುವ ʻನೂರಲ್ಲ.. ಐನೂರು ಭರವಸೆʼ ಈಡೇರಿಸುವ ಭರವಸೆಯೇ ಸಾಕಷ್ಟು ಇಂಟ್ರೆಸ್ಟಿಂಗ್.
ಡಿಕೆ ಅಧಿಕಾರಕ್ಕೆ ಬಂದರೆ.. ನಾವ್ಯಾರು ಕೂಡಾ ಕೆಲಸ ಮಾಡುವುದಕ್ಕೆ ಆಗಲ್ಲ. ಎಲ್ಲವೂ ಡಿಕೆ ಮಯವಾಗುತ್ತದೆ ಎನ್ನುವುದು ಅವರ ಆತಂಕ. ಇದನ್ನೇ ವರಿಷ್ಠರ ಎದುರು ಹೇಳಿಕೊಂಡಿದ್ದಾರೆ.
ಇತ್ತ ಬಿಹಾರ ಚುನಾವಣೆ ಬಳಿಕ ದೆಹಲಿಗೆ ತೆರಳಲಿದ್ದು, ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಚರ್ಚೆ ನಡೆಸುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಬಿಹಾರ ಮತದಾರರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನಾದ್ರು ಹೇಳಿದ್ಯಾ? ಯಾಕೆ ಪದೇ ಪದೇ ಅದನ್ನೇ ಮಾತನಾಡುತ್ತೀರಾ? ಜನ ಮಾತನಾಡುತ್ತಿಲ್ಲ. ಮಾಧ್ಯಮದವರೇ ಪದೇ ಪದೇ ಮಾತನಾಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಕಾಂಗ್ರೆಸ್‌ಗೆ ಹೈಕಮಾಂಡ್ ಇದೆ. ಹೈಕಮಾಂಡ್ ಹೇಳುವುದು ಮಾತ್ರವೇ ಮುಖ್ಯ. ಅದೇ ಅಂತಿಮ ಎಂದು ಹೇಳಿದ್ದಾರೆ.
ಇತ್ತ ಸತೀಶ್ ಜಾರಕಿಹೊಳಿ ಸದ್ಯ ನಾನು ದೆಹಲಿಗೆ ಹೋಗುವುದಿಲ್ಲ. ಬೆಳಗಾವಿಯಲ್ಲೇ ಇರುತ್ತೇನೆ. ಅವಶ್ಯಕತೆ ಬಂದಾಗ ದೆಹಲಿಗೆ ಹೋಗುತ್ತೇನೆ ಎಂದಿದ್ದಾರೆ. ದೆಹಲಿ ವರಿಷ್ಠರ ಜೊತೆ ಜಾರಕಿಹೊಳಿ ಅವರನ್ನೇ ಸಿದ್ದು ಆಪ್ತರ ಟೀಂ ನಿಯೋಜಿಸಿದೆ ಎನ್ನಲಾಗಿದೆ. ಏಕೆಂದರೆ ಸಿದ್ದು ಆಪ್ತರಲ್ಲಿ ಚೆನ್ನಾಗಿ ಇಂಗ್ಲಿಷ್ ಮತ್ತು ಹಿಂದಿ ಬರುವ ನಾಯಕ ಎಂದರೆ ಅದು ಸತೀಶ್ ಜಾರಕಿಹೊಳಿ. ಇನ್ನೂ ಕೆಲವು ಆಪ್ತರಿಗೆ ಭಾಷೆಯೇನೋ ಇದೆ. ಆದರೆ.. ಅವರು ಸಿದ್ದರಾಮಯ್ಯ ಅವರಿಗಾಗಿ ರಿಸ್ಕ್ ತೆಗೆದುಕೊಳ್ಳೋಕೆ ರೆಡಿ ಇಲ್ಲ.



