Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಸಿನಿಮಾ ಕದ್ದು ನೋಡಬೇಡಿ..ಲಿಂಕ್ ಕೂಡಾ ಶೇರ್ ಮಾಡಬೇಡಿ.. ಥಿಯೇಟರಲ್ಲಿ ವಿಡಿಯೋ ಮಾಡಬೇಡಿ.. ಪೈರಸಿ ಕಾಯಿದೆ ಫುಲ್ ಸ್ಟ್ರಿಕ್ಟ್ 

SpeciallU by SpeciallU
August 1, 2023
in Cinema, News
Reading Time: 1 min read
0 0
0
ಸಿನಿಮಾ ಕದ್ದು ನೋಡಬೇಡಿ..ಲಿಂಕ್ ಕೂಡಾ ಶೇರ್ ಮಾಡಬೇಡಿ.. ಥಿಯೇಟರಲ್ಲಿ ವಿಡಿಯೋ ಮಾಡಬೇಡಿ.. ಪೈರಸಿ ಕಾಯಿದೆ ಫುಲ್ ಸ್ಟ್ರಿಕ್ಟ್ 

ಸಿನಿಮಾ (Cinema) ನೋಡುವುದು ಮನರಂಜನೆಗೆ. ಆದರೆ ಕೆಲವರು ಆ ಮನರಂಜನೆಯನ್ನೂ ಕದ್ದು ನೋಡ್ತಾರೆ. ಯಾರೋ ಕಳ್ಳರು (Theatere) ಥಿಯೇಟರಿನಲ್ಲಿ ಶೂಟ್ ಮಾಡಿದ ಚಿತ್ರವನ್ನು ಕದ್ದು ನೋಡ್ತಾರೆ. ಕಳ್ಳತನದಲ್ಲಿ ಸಿನಿಮಾ (Cinema) ತೋರಿಸುವ ತಮಿಳ್ ರಾಕರ್ಸ್‍ನಂತಹ  (Tamil rockers) ವೆಬ್`ಸೈಟುಗಳೂ ಇವೆ. ಟೆಲಿಗ್ರಾಂ (teligram) ಆಪ್`ನ್ನ ಹೆಚ್ಚು ಜನ ಬಳಸೋದೇ ಈ ಕಾರಣಕ್ಕೆ. ಟೊರೆಂಟ್`ನ್ನ (torent) ಮೊಬೈಲಿನಲ್ಲಿ (mobile) ಸೇವ್ ಮಾಡಿಕೊಳ್ಳೋದೂ ಈ ಕಾರಣಕ್ಕೆ. ಜನಕ್ಕೆ ಬಿಡಿ, ಒಳ್ಳೆಯ ಸ್ಕೀಮು, ಕೆಲಸ, ಉದ್ಯಮದ ಮಾಹಿತಿಗಳು ಸಿಕ್ಕದೇ ಹೋದರೂ, ಇಂತಹವು ಮಾತ್ರ ಅದು ಹೇಗೋ ಕ್ಷಣ ಮಾತ್ರದಲ್ಲಿ ಸಿಕ್ಕುಬಿಡ್ತವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಅಪ್ಪಿ ತಪ್ಪಿ ಯಾರಾದರೂ ಲಿಂಕ್ ಕಳಿಸಿದರೆ, ಅದನ್ನೂ ಶೇರ್ ಮಾಡುವ ಸಾಹಸ ಮಾಡಬೇಡಿ. ಯಾಕೆಂದರೆ ಜೈಲು ಶಿಕ್ಷೆ ಪಕ್ಕಾ. ಜೊತೆಗೆ ದಂಡ. ದಂಡವೆಂದರೆ ಸಾಮಾನ್ಯವಲ್ಲ, ಆ ಸಿನಿಮಾದ ಟೋಟಲ್ ಬಜೆಟ್ಟಿನ ಶೇ.5ರಷ್ಟು. ಸಿನಿಮಾ ಸಿನಿಮಾ ಪೈರಸಿ ಮಾಡಿದವರಷ್ಟೇ ಅಲ್ಲ, ಪೈರಸಿ ನೋಡಿದವರೂ ಅಪರಾಧಿಗಳೇ.

ಸಿನಿಮಾ ಪೈರಸಿ (Cinema piracy) ಮಾಡುವುದು ಅಪರಾಧ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅದೀಗ ಕಾನೂನುಬದ್ಧ. ಶಿಕ್ಷಾರ್ಹ ಅಪರಾಧವಾಗಿದೆ. ಗುರುವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದ (Cinema piracy) ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲೂ ಅಂಗೀಕರಿಸಲಾಗಿದೆ. ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ-2023 (Cinematograph act) ಪ್ರಕಾರ ಅನಧಿಕೃತವಾಗಿ ಸಿನಿಮಾ ರೆಕಾರ್ಡ್ ಮಾಡಿಕೊಳ್ಳುವುದು, ತೋರಿಸುವುದು, ಪ್ರದರ್ಶನ ಮಾಡುವುದು ಕೂಡಾ ಅಪರಾಧ. ಹಾಗೆ ಮಾಡುವವರಿಗೆ 3 ವರ್ಷ ಜೈಲು ಹಾಗೂ ಯಾವ ಸಿನಿಮಾ ಪೈರಸಿ ಮಾಡಿರುತ್ತಾರೋ ಆ ಸಿನಿಮಾದ ಒಟ್ಟಾರೆ ಬಜೆಟ್`ನ ಶೇ.5ರಷ್ಟು ದಂಡ ಕಟ್ಟಬೇಕು. ಅಂದರೆ ಪೈರಸಿ ಮಾಡುವವರು 1 ಕೋಟಿ ಬಜೆಟ್ಟಿನ ಸಿನಿಮಾವನ್ನು ಪೈರಸಿ ಮಾಡಿದ್ದರೆ 5 ಲಕ್ಷ ದಂಡ ಕಟ್ಟಬೇಕು. 20 ಕೋಟಿ ಬಜೆಟ್ಟಿನ ಸಿನಿಮಾ ಪೈರಸಿ ಮಾಡಿದ್ದರೆ 1 ಕೋಟಿ.. ಹೀಗೆ ದಂಡ ಕಟ್ಟಬೇಕು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಹೀಗಾಗಿಯೇ ಸಿನಿಮಾವನ್ನು ಯಾವ ರೂಪದಲ್ಲಾದರೂ ಪೈರಸಿ ಮಾಡಬೇಡಿ. ಲಿಂಕ್ ಸಿಕ್ಕರೆ ಅದನ್ನು ಶೇರ್ ಮಾಡಬೇಡಿ. ಯಾಕೆಂದರೆ ಇನ್ನು ಮುಂದೆ ಈ ತಪ್ಪು ಮಾಡಿದರೆ ದಂಡ ಕಟ್ಟಬೇಕು ಹಾಗೂ ಜೈಲಿಗೂ ಹೋಗಬೇಕಾಗುತ್ತೆ. ಒಂದು ಸಿನಿಮಾಗಾಗಿ ಅಷ್ಟೊಂದು ರಿಸ್ಕ್ ಯಾಕೆ.. ದುಡ್ಡು ಕೊಟ್ಟು ರಾಜನಂತೆ ನೋಡಿದರಾಯಿತು..

ಸಿನಿಮಾ ಉದ್ಯಮ ಪೈರಸಿಯಿಂದ ಅನುಭವಿಸುತ್ತಿರುವ 20 ಸಾವಿರ ಕೋಟಿ ರು. ನಷ್ಟಕ್ಕೆ ಇನ್ನು ತೆರೆ ಬೀಳಲಿದೆ ಎಂದು ವಿಧೇಯಕದ ಮೇಲಿನ ಚರ್ಚೆ ವೇಳೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ. ಇದು ಸರ್ಕಾರದ ಲೆಕ್ಕವಾದರೂ ಅನಧಿಕೃತ ನಷ್ಟದ ಲೆಕ್ಕ ಇನ್ನೂ ಹೆಚ್ಚಿದೆ ಎನ್ನಲಾಗುತ್ತಿದೆ.

ಇದಷ್ಟೇ ಅಲ್ಲದೆ ಈ ಕಾಯಿದೆಯಲ್ಲಿ ಯುಎ ಪ್ರಮಾಣಪತ್ರ ವಿಭಾಗದಡಿ ವಯಸ್ಸಿನ ಆಧಾರದಲ್ಲಿ ‘ಯುಎ 7+’, ‘ಯುಎ 13+’ ಮತ್ತು ‘ಯುಎ 16+’ ಎಂಬ ಪ್ರಮಾಣಪತ್ರ ನೀಡುವ ಅಂಶವೂ ವಿಧೇಯಕದಲ್ಲಿದೆ. ಟೀವಿ ಅಥವಾ ಇನ್ನಿತರೆ ಮಾಧ್ಯಮಗಳಲ್ಲಿ ಸಿನಿಮಾಗಳ ಪ್ರಸಾರಕ್ಕೆ ಪ್ರತ್ಯೇಕ ಪ್ರಮಾಣಪತ್ರ ನೀಡುವ ಅಧಿಕಾರವನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ)ಗೆ ದಯಪಾಲಿಸುವ ಅಂಶವೂ ಮಸೂದೆಯಲ್ಲಿದೆ. ಅಲ್ಲದೆ, ಸಿನಿಮಾಗಳಿಗೆ ಇನ್ನು ಮುಂದೆ 10 ವರ್ಷದ ಅವಧಿಗೆ ಬದಲಿಗೆ ಶಾಶ್ವತ ಸಿಂಧುತ್ವ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಆದರೆ ಎಲ್ಲಕ್ಕಿಂತಲೂ ನಿಜಕ್ಕೂ ಆತಂಕಕಾರಿಯಾಗಿರುವ (ಕಳ್ಳ ಸಿನಿಮಾ ಪ್ರೇಕ್ಷಕರಿಗೆ ಮಾತ್ರ) ಕಾನೂನು ತಿದ್ದುಪಡಿ ಪೈರಸಿ ಆಕ್ಟ್`ನದ್ದೇ. ಈ ಕಾಯಿದೆಗಾಗಿ ಚಿತ್ರರಂಗದವರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದರು. ಕೊನೆಗೂ ಈ ಬೇಡಿಕೆ ಈಗ ಈಡೇರಿದಂತಾಗಿದೆ. ಸಿನಿಮಾ ಪೈರಸಿ ಮಾಡಿದವರಷ್ಟೇ ಅಲ್ಲ, ಪೈರಸಿ ನೋಡಿದವರೂ ಅಪರಾಧಿಗಳೇ.

Tags: #ಪೈರಸಿಕಾಯಿದೆ #ಸಿನಿಮಾಪೈರಸಿ #piracyact #cinemapiracy
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.