ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ಪಿತೃಪಕ್ಷ ಶುರುವಾಗಿದೆ. ಚಂದ್ರ ಗ್ರಹಣದಿಂದ ಶುರುವಾಗಿರುವ ಪಿತೃಪಕ್ಷ, ಮಹಾಲಯ ಅಮಾವಾಸ್ಯೆಯಂದು ಕೊನೆಯಾಗಲಿದೆ. ಈ ವೇಳೆ ಮೃತಪಟ್ಟಿರುವ ಹಿರಿಯರು, ಸಂಬಂಧಿಕರಿಗೆ ಶ್ರಾದ್ಧ ಮಾಡುವ ಪದ್ಧತಿ ಸಹಜ. ಈ ವೇಳೆ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಪಿತೃ ದೋಷಕ್ಕೆ ಗುರಿಯಾಗಬೇಕಾಗುತ್ತದೆ. ಅವುಗಳ ಬಗ್ಗೆ ಬಹುತೇಕರಿಗೆ ಮಾಹಿತಿ ಇರುವುದಿಲ್ಲ. ಇಲ್ಲಿ ಅಂತಹ ಕೆಲವು ದೋಷಗಳ ಪಟ್ಟಿ ಕೊಡಲಾಗಿದೆ.
ಶ್ರಾದ್ಧ ಮಾಡದೇ ಇರಬೇಡಿ :
ಇದು ಮೊದಲನೆಯದ್ದು. ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರಿಗೆ ಪಿಂಡದಾನ ಅಥವಾ ಶ್ರಾದ್ಧ ಮಾಡದಿರುವುದು ದೋಷವಾಗುತ್ತದೆ ಎನ್ನುತ್ತದೆ ಹಿಂದೂ ಶಾಸ್ತ್ರ. ಪಿಂಡ ದಾನ-ಶ್ರಾದ್ಧವನ್ನು ಮಾಡದಿರುವುದರಿಂದ, ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ, ಇದರಿಂದಾಗಿ ಅವರು ಕೋಪಗೊಳ್ಳುತ್ತಾರೆ. ನಾವು ಮಾಡುವ ಈ ತಪ್ಪಿನಿಂದಾಗಿ ನಮ್ಮ ಸಂಪೂರ್ಣ ಕುಟುಂಬವೇ ಪಿತೃ ದೋಷಕ್ಕೆ ಗುರಿಯಾಗಬೇಕಾಗುತ್ತದೆ. ಸಮಸ್ಯೆ ಎದುರಿಸಬೇಕಾಗುತ್ತದೆ.
ಪವಿತ್ರ ಗಿಡಗಳನ್ನು ಕಡಿಯಬೇಡಿ :
ತೆಂಗಿನ ಮರ, ಆಲದ ಮರ, ಅರಳಿ ಮರ, ಬೇವಿನ ಮರ, ಬಿಲ್ವಪತ್ರೆ, ತುಳಸಿ ಗಿಡ ಇತ್ಯಾದಿ ಗಿಡಗಳನ್ನು, ನಾವು ಪವಿತ್ರವೆಂದು ಮತ್ತು ಪೂಜನೀಯವೆಂದು ಪರಿಗಣಿಸಲಾದ ಗಿಡ ಮತ್ತು ಮರಗಳನ್ನು ಪಿತೃಪಕ್ಷದ ವೇಳೆ ಕಡಿಯಬಾರದು.
ಮಾತಾಪಿತೃ ಸಮಾನ ವ್ಯಕ್ತಿಗಳನ್ನು ಅವಮಾನಿಸಬೇಡಿ :
ಮಾತಾ ಪಿತೃಗಳನ್ನು ಅವಮಾನಿಸಿದ್ದರೆ, ಕಷ್ಟ ಕೊಟ್ಟಿದ್ದರೆ.. ಅವರು ದೊಡ್ಡ ಮನಸ್ಸು ಮಾಡಿ ಕ್ಷಮಿಸದೇ ಇದ್ದರೆ ಕಷ್ಟ ತಪ್ಪಿದ್ದಲ್ಲ. ಪೋಷಕರನ್ನು ಅಥವಾ ಅವರ ಸಮಾನ ಸ್ಥಾನಮಾನದ ಜನರನ್ನು ಎಂದಿಗೂ ಅವಮಾನಿಸಬೇಡಿ.
ಪ್ರಾಣಿ ಪಕ್ಷಿಗಳಿಗೆ ಹಿಂಸೆ ಬೇಡ :
ಪಿತೃಗಳು ಪಿತೃ ಪಕ್ಷದ ಅವಧಿಯಲ್ಲಿ ನೇರವಾಗಿ ನಮಗೆ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಕಾಗೆ, ನಾಯಿ, ಹಸು ಮುಂತಾದ ಪ್ರಾಣಿ, ಪಕ್ಷಿಗಳ ರೂಪದಲ್ಲಿ ಭೂಮಿಗೆ ಆಗಮಿಸುತ್ತಾರೆ.ಹೀಗಾಗಿ ಪ್ರಾಣಿ, ಪಕ್ಷಿಗಳಿಗೆ ಹಿಂಸೆಯನ್ನು ನೀಡಬಾರದು. ಅವುಗಳಿಗೆ ನೋವಾಗುವಂತೆ ನಾವು ನಡೆದುಕೊಳ್ಳಬೇಕು.
ಪಿತೃಪಕ್ಷದ ಸಮಯದಲ್ಲಿ ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದು, ಮಾಂಸ ಮತ್ತು ಮದ್ಯ ಸೇವಿಸುವುದು, ಸಾತ್ವಿಕತೆಯನ್ನು ಕಾಪಾಡಿಕೊಳ್ಳದೆ ವರ್ತಿಸುವುದು ಅಥವಾ ಐಷಾರಾಮಿ ಜೀವನವನ್ನು ನಡೆಸುವುದು ಸಹ ಪೂರ್ವಜರ ಕೋಪಕ್ಕೆ ಗುರಿ ಮಾಡುತ್ತದೆ. ಪಿತೃ ಪಕ್ಷದ 15 ದಿನಗಳ ಕಾಲ ನಿಷೇಧಿಸಲಾದ ಯಾವುದೇ ಕೆಲಸವನ್ನು ನಾವು ಮಾಡಬಾರದು.
ಪಿತೃಗಳ ಇಷ್ಟಾರ್ಥ ಪೂರೈಸಿ :
ರಣ ಹೊಂದಿದ ಕುಟುಂಬದವರು ಸಾಯುವುದಕ್ಕೂ ಮುನ್ನ ಕೆಲವೊಂದು ಆಸೆಗಳನ್ನು ಇಟ್ಟುಕೊಂಡಿರಬಹುದು. ಅವರ ಆ ಆಸೆಯು ಈಡೇರುವುದಕ್ಕೂ ಮುನ್ನ ಅವರು ಮರಣ ಹೊಂದಿರಬಹುದು. ಅಂತಹ ಸಂದರ್ಭದಲ್ಲಿ, ನಾವು ಅವರ ಈಡೇರದ ಆಸೆಗಳು ಯಾವುವು ಎಂಬುದನ್ನು ತಿಳಿದುಕೊಂಡಿರಬೇಕು. ಈಡೇರದ ಆಸೆಯನ್ನು ನಮಗೆ ಈಡೇರಿಸಲು ಸಾಧ್ಯವಾಗದೇ ಇದ್ದಾಗ ಅವರು ನಮ್ಮ ಮೇಲೆ ಕೋಪಿಸಿಕೊಳ್ಳಬಹುದು.ಅಸಾಧ್ಯ ಆಸೆಗಳಿದ್ದರೆ.. ಏನೂ ಮಾಡುವುದಕ್ಕಾಗಲ್ಲ.
ಕೆಲವೊಮ್ಮೆ ಜಾತಕದಲ್ಲಿನ ಗ್ರಹಗಳ ಕೆಟ್ಟ ಪ್ರಭಾವದಿಂದ ಪಿತೃ ದೋಷ ಉಂಟಾದರೆ, ಇನ್ನು ಕೆಲವೊಮ್ಮೆ ಪಿತೃಗಳ ಕೋಪದಿಂದ ಕೂಡ ಪಿತೃ ದೋಷ ಉಂಟಾಗುತ್ತದೆ. 2025ರ ಪಿತೃ ಪಕ್ಷ ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 21ರವರೆಗೆ ಇರಲಿದೆ. ಈ ಅವಧಿಯಲ್ಲಿ ನಾವು ಕೆಲವೊಂದು ಕೆಲಸಗಳನ್ನು ಮಾಡುವುದು ನಿಷಿದ್ಧವಾಗಿರುತ್ತದೆ. ಪಿತೃ ಪಕ್ಷದ ಅವಧಿಯಲ್ಲಿ ನಾವು ಈ ಕೆಲಸಗಳನ್ನು ಮಾಡುವುದರಿಂದ ಪಿತೃ ದೋಷಕ್ಕೆ ಗುರಿಯಾಗುತ್ತೇವೆ.



