ಹುಟ್ಟುಹಬ್ಬಕ್ಕೂ ಗಿಫ್ಟ್ ಕೊಡುತ್ತೇವೆ. ಮದುವೆಗೆ ಮುಯ್ಯಿ ಹಾಕುತ್ತೇವೆ. ನಾಮಕರಣಕ್ಕೂ ಉಡುಗೊರೆ ಕೊಡುತ್ತೇವೆ. ಗೃಹ ಪ್ರವೇಶಗಳಿಗೆ ಕಾಣಿಕೆ ನೀಡುತ್ತೇವೆ. ಹೀಗೆ ಉಡುಗೊರೆ ನೀಡುವಾಗ.. ಯಾರಿಗೆ ಏನು ಉಡುಗೊರೆ ಕೊಡಬೇಕು ಅನ್ನುವುದು ಬಹಳ ಮುಖ್ಯವಾದ ವಿಚಾರ. ಗಿಫ್ಟ್ ಕೊಡುವ ವಿಚಾರದಲ್ಲಿ ವಾಸ್ತು ಶಾಸ್ತ್ರ ಕೆಲವು ನಿಮಯಗಳನ್ನು ಹೇಳುತ್ತದೆ. ಇಲ್ಲಿ 5 ಕಾಣಿಗಳಿವೆ. ಅವುಗಳನ್ನು ಯಾವ ಕಾರಣಕ್ಕೂ ಕೊಡಬೇಡಿ ಎನ್ನುತ್ತದೆ ಶಾಸ್ತ್ರ. ಈ ಉಡುಗೊರೆಗಳು ಅತ್ತ ಕೊಟ್ಟವರಿಗೂ ಒಳ್ಳೆಯದು ಮಾಡಲ್ಲ. ಇತ್ತ ಪಡೆದುಕೊಂಡವರಿಗೂ ಒಳ್ಳೆಯದು ಮಾಡಲ್ಲಂತೆ.
ಕನ್ನಡಿ ಕೊಡಬೇಡಿ :
ಉಡುಗೊರೆಯ ರೂಪದಲ್ಲಿ ನೀಡುವುದು ಮನೆಯಲ್ಲಿ ನಕಾರತ್ಮಕ ಶಕ್ತಿ ಹರಿವು ಹೆಚ್ಚಾಗುವಂತೆ ಮಾಡುತ್ತದೆ. ಕನ್ನಡಿ ಕಾಣಿಕೆ ಪಡೆಯುವವರಿಗೂ ಹಾಗೂ ಕೊಡುವವರಿಗೂ ಇದು ಒಳ್ಳೆಯದಲ್ಲ. ಕನ್ನಡಿಯನ್ನು ಉಡುಗೊರೆಯಾಗಿ ಪಡೆದುಕೊಳ್ಳುವ ಬದಲು ಬೇರೆ ರೀತಿಯ ಅಲಂಕಾರಿಕ ವಸ್ತುಗಳನ್ನು ಪಡೆದುಕೊಂಡರೆ ಒಳ್ಳೆಯದು.
ಕತ್ತರಿ, ಚಾಕು, ಮಚ್ಚು ಇತ್ಯಾದಿ ಆಯುಧಗಳನ್ನು ಸ್ವೀಕರಿಸಬೇಡಿ :
ಕತ್ತರಿ ಅಥವಾ ಚಾಕು, ಮಚ್ಚು, ತುರೆಮಣೆ.. ಇಂತಹ ಗಿಫ್ಟ್ ಅನ್ನು ನೀಡುವ ಹಾಗೂ ಪಡೆದುಕೊಳ್ಳುವ ಇಬ್ಬರ ನಡುವೆ ಕೂಡ ಸಾಕಷ್ಟು ಸಮಸ್ಯೆಗಳು ಉದ್ಭವ ಆಗುವ ಸಾಧ್ಯತೆ ಹೆಚ್ಚಾಗಿದೆ. ಆಯುಧಗಳನ್ನು ಬಹುಮಾನವಾಗಿ ಕೊಡುವ ಪದ್ಧತಿ ಹಿಂದೆ ಕ್ಷತ್ರಿಯರಲ್ಲಿತ್ತು. ಇನ್ನು ಅದು ಬಹುತೇಕ ಗುರುತು ಅಥವಾ ಮುದ್ರೆಯ ರೂಪದಲ್ಲಿ ಬಳಕೆಯಾಗುತ್ತಿತ್ತು. ಈಗ ಇಂತಹ ಗಿಫ್ಟ್ ಕೊಡುವುದರಿಂದ ಅಥವಾ ಪಡೆಯುವುದರಿಂದ ದುರದೃಷ್ಟ, ಅಪಾಯ, ಜಗಳಗಳು ಹೆಚ್ಚುತ್ತವೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಕಟ್ಲೇರಿ, ಪೋರ್ಕ್ ಗಳನ್ನೂ ಕೊಡಬೇಡಿ. ಪಡೆಯಬೇಡಿ :
ಚೂಪಾಗಿರುವಂತಹ ಕಟ್ಲೆರಿ ವಸ್ತುಗಳನ್ನು ಕೂಡ ಯಾವತ್ತೂ ಗಿಫ್ಟ್ ರೂಪದಲ್ಲಿ ಪಡೆದುಕೊಳ್ಳುವುದಕ್ಕೆ ಹೋಗಬೇಡಿ. ಇವುಗಳು ಕೂಡ ನಕಾರಾತ್ಮಕ ಶಕ್ತಿಗಳು ಹಾಗೂ ಕೆಟ್ಟ ಪರಿಣಾಮಗಳನ್ನು ಆಕರ್ಷಿಸುತ್ತವೆ. ಸಾಕಷ್ಟು ಬಾರಿ ಇದು ಉತ್ತಮವಾಗಿರುವಂತಹ ಸ್ನೇಹಿತರು ನಡುವೆ ಕೂಡ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗುವುದಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕುಟುಂಬಸ್ಥರ ನಡುವೆ ಸಾಕಷ್ಟು ಅಸಮಾಧಾನಗಳು ಕಂಡುಬರುವಂತಹ ಸಾಧ್ಯತೆ ಇದ್ದು, ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಶಾಂತವಾಗಿರುವಂತಹ ಕುಟುಂಬ ಕಲ್ಲು ಬಿದ್ದ ಜೇನುಗೂಡಿನ ರೀತಿಯಲ್ಲಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ.
ಗಿಡಗಳ ಕಾಣಿಕೆ ಶುಭ. ಆದರೆ.. ಗುಲಾಬಿ, ಕ್ಯಾಕ್ಟಸ್.. ಮುಳ್ಳಿನ ಗಿಡ ಅಲ್ಲ..!
ವಾಸ್ತು ಶಾಸ್ತ್ರದ ಪ್ರಕಾರ ಗಿಡಗಳನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಶುಭ. ಕೊಟ್ಟ ಸಸಿ, ಗಿಡವಾಗಿ ಮರವಾಗಿ ಬೆಳೆಯುವುದು ಲಕ್ಷ್ಮಿ ಬೆಳೆದಂತೆ ಎನ್ನುವ ನಂಬಿಕೆ ಇದೆ. ಆದರೆ ಹಾಗೆ ಕೊಡುವಾಗ ಮುಳ್ಳುಗಳಿರುವ ಗಿಡಗಳನ್ನು ಕೊಡಬೇಡಿ ಮತ್ತು ಸ್ವೀಕರಿಸಲೂ ಬೇಡಿ. ಇದು ಗುಲಾಬಿ ಗಿಡಕ್ಕೂ ಅನ್ವಯ. ಅಂದರೆ ಮುಳ್ಳುಗಳಿರುವ ಗಿಡಗಳು ಯಾವುದೇ ಆದರೂ ಕೊಡಬೇಡಿ. ಪಡೆಯಬೇಡಿ.
ಯಾರು ಪಡೆದುಕೊಳ್ಳುತ್ತಾರೋ ಅವರ ಜೀವನಕ್ಕೆ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುತ್ತದೆ ಹಾಗೂ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕೂಡ ಅವರು ಎದುರಿಸಬೇಕಾಗಿ ಬರುತ್ತದೆ. ಅವರ ಜೀವನದಲ್ಲಿ ಅಭಿವೃದ್ಧಿಯ ದಾರಿ ತಪ್ಪುತ್ತದಂತೆ. . ಯಾವುದೇ ಹೊಸ ಕೆಲಸ ಅಥವಾ ವ್ಯಾಪಾರವನ್ನು ಪ್ರಾರಂಭ ಮಾಡಿದರು ಕೂಡ ಇದರ ಕಾರಣದಿಂದಾಗಿ ಅವರು ಸಾಕಷ್ಟು ಅಡೆ-ತಡೆಗಳನ್ನು ಎದುರಿಸಬೇಕಾಗಿ ಬರುತ್ತದೆ.



