ನಾಯಿಯನ್ನು ಜನ ಹೇಗೆಲ್ಲ ಪ್ರೀತಿಸ್ತಾರೆ ಅನ್ನೋದನ್ನು ಜನ ನೋಡಿದ್ದಾರೆ. ನಾಯಿಯನ್ನು ಜನ ಹೇಗೆಲ್ಲ ಮುದ್ದಾಡ್ತಾರೆ ಅಂದ್ರೆ.. ಮಕ್ಕಳನ್ನೂ ಹಾಗೆ ಮುದ್ದಾಡೋದಿಲ್ವೇನೋ.. ಆದರೆ ನಾಯಿ ಪ್ರೀತಿ ಮಹಿಳೆಯೊಬ್ಬರ ಕಾಲನ್ನೇ ಕಟ್ ಮಾಡಿದೆ. ಹೌದು, ನಾಯಿಯು ಪ್ರೀತಿಯಿಂದ ಮಹಿಳೆಯ ಕಾಲು ನೆಕ್ಕಿದ್ದಕ್ಕೆ ಸೋಂಕು ತಗುಲಿ ಮಹಿಳೆಯ ಕಾಲನ್ನೇ ಕಟ್ ಮಾಡಿದ್ದಾರೆ. ಈ ಘಟನೆ ನಡೆದಿರೋದು..
ಯುಕೆ ಮೂಲದ ಮಂಜಿತ್ ಸಂಘಾ ಎಂಬುವವರು ಒಂದು ನಾಯಿ ಸಾಕಿದ್ದರು. ಅವರಿಗೆ ಒಂದು ಚಿಕ್ಕ ಗಾಯವಾಗಿತ್ತು. ನಾಯಿಯೊಂದಿಗೆ ಮುದ್ದಾಡುವಾಗ ಆ ನಾಯಿ ಮಂಜಿತ್ ಸಂಘಾ ಅವರ ಕೈ ಮೇಲಿದ್ದ ಗಾಯವನ್ನು ನೆಕ್ಕಿತ್ತು. ಹಾಗೆ ನೆಕ್ಕಿದ್ದರ ಪರಿಣಾಮ ಆ ಮಹಿಳೆಯ ಕಾಲುಗಳನ್ನೇ ಕತ್ತರಿಸಿ ತೆಗೆಯಲಾಗಿದೆ.
2025ರ ಜುಲೈನಲ್ಲಿ ಮಂಜಿತ್ ಸಂಘಾ ಕೆಲಸ ಮುಗಿಸಿ ಮನೆಗೆ ಬಂದಾಗ ಅವರಿಗೆ ಸ್ವಲ್ಪ ಸುಸ್ತು ಎನಿಸಿತ್ತು. ಆದರೆ ಮರುದಿನ ಬೆಳಿಗ್ಗೆ ನೋಡುವಷ್ಟರಲ್ಲಿ ಅವರು ಪ್ರಜ್ಞೆ ತಪ್ಪಿದ್ದರು. ಕೈಕಾಲುಗಳು ಐಸ್‌ನಂತೆ ತಣ್ಣಗಾಗಿದ್ದವು, ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು ಮತ್ತು ಉಸಿರಾಡಲು ಕಷ್ಟಪಡುತ್ತಿದ್ದರು. ಅವರ ಪತಿ ಕಮಲ್‌ಜಿತ್ ಸಂಘಾ ತಕ್ಷಣ ಅವರನ್ನು ವುಲ್ವರ್‌ಹ್ಯಾಂಪ್ಟನ್‌ನ ನ್ಯೂ ಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶನಿವಾರ ನಾಯಿಯ ಜೊತೆ ಆಟವಾಡುತ್ತಿದ್ದವಳು, ಸೋಮವಾರ ಕೋಮಾ ಸ್ಥಿತಿಗೆ ತಲುಪಿದ್ದಳು. ಇದು ಹೇಗೆ ಸಾಧ್ಯ? ಎಂದು ಕಮಲ್‌ಜಿತ್ ಅಂದು ಕಣ್ಣೀರು ಹಾಕಿದ್ದರು. ಮಂಜಿತ್ ಅವರಿಗೆ ಆಸ್ಪತ್ರೆಯಲ್ಲಿ ಆರು ಬಾರಿ ಹೃದಯಾಘಾತ ಸಂಭವಿಸಿತ್ತು.ವೈದ್ಯರು ಪರೀಕ್ಷೆ ಮಾಡಿದಾಗ ಮಂಜಿತ್ ಅವರ ರಕ್ತದಲ್ಲಿ ‘ಕ್ಯಾಪ್ನೋಸೈಟೋಫಾಗಾ ಕ್ಯಾನಿಮೋರ್ಸಸ್’ ಎಂಬ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಯಿತು. ಈ ಬ್ಯಾಕ್ಟೀರಿಯಾ ನಾಯಿಗಳ ಲಾಲಾರಸದಲ್ಲಿರುತ್ತದೆ ಮತ್ತು ನಾಯಿಗಳಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಮಂಜಿತ್ ಅವರ ಕೈ ಮೇಲಿದ್ದ ಒಂದು ಚಿಕ್ಕ ಗಾಯ ಅಥವಾ ಪರಚಿದ ಗುರುತನ್ನು ನಾಯಿ ನೆಕ್ಕಿದಾಗ, ಈ ಬ್ಯಾಕ್ಟೀರಿಯಾ ಅವರ ರಕ್ತಕ್ಕೆ ಸೇರಿತು.
ಇದು ಇಡೀ ದೇಹಕ್ಕೆ ಸೋಂಕು ಹರಡುವಂತೆ ಮಾಡಿ ‘ಸೆಪ್ಸಿಸ್’ ಸ್ಥಿತಿಗೆ ತಲುಪಿಸಿತು. ಅವರ ಪ್ರಾಣ ಉಳಿಸಲು ವೈದ್ಯರು ಅನಿವಾರ್ಯವಾಗಿ ಮಂಡಿಯ ಕೆಳಗೆ ಎರಡೂ ಕಾಲುಗಳನ್ನು ಮತ್ತು ಎರಡೂ ಕೈಗಳನ್ನು ಕತ್ತರಿಸಬೇಕಾಯಿತು. ಜೊತೆಗೆ ಅವರ ಗುಲ್ಮವನ್ನು ಕೂಡ ತೆಗೆಯಬೇಕಾಯಿತು.
ನಾವು ನೀವು ಹುಷಾರಾಗಿರಬೇಕು :
ನಾಯಿ ಅಥವಾ ಬೆಕ್ಕುಗಳು ನೆಕ್ಕಿದಾಗ ತಕ್ಷಣ ಆ ಜಾಗವನ್ನು ಸೋಪಿನಿಂದ ತೊಳೆದುಕೊಳ್ಳಿ. ವಿಶೇಷವಾಗಿ ಕೈ ಮೇಲೆ ಗಾಯಗಳಿದ್ದಾಗ ಅಥವಾ ಪರಚಿದ ಗುರುತುಗಳಿದ್ದಾಗ ಪ್ರಾಣಿಗಳಿಂದ ದೂರವಿರಿ.ಒಂದು ವೇಳೆ ನಾಯಿ ನೆಕ್ಕಿದ ನಂತರ ಜ್ವರ ಅಥವಾ ಅಸಾಮಾನ್ಯ ಸುಸ್ತು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದು ನಾಯಿಗಳು ಅಥವಾ ಇತರ ಸಾಕು ಪ್ರಾಣಿಗಳು ನೆಕ್ಕಿದಾಗ ನಾವು ತೆಗೆದುಕೊಳ್ಳಬಹುದಾದ ಒಂದು ಎಚ್ಚರಿಕೆ.



